

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಫಾಫ್ ಡು ಪ್ಲೆಸಿಸ್ ಪಡೆಯೂ ಗೆಲುವಿನ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ.
ಏಪ್ರಿಲ್ 28ರಂದು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಫಾಫ್ ಪಡೆ ಎದುರು ಮುಗ್ಗರಿಸಿದ್ದು, ಈ ಬಗ್ಗೆ ನಾಯಕ ಶುಭಮನ್ ಗಿಲ್ ಮಾತನಾಡಿದ್ದಾರೆ. ಬ್ಯಾಟ್ಸ್ಮನ್ಗಳಿಂದ ದೊರೆತ ನೀರಸ ಪ್ರದರ್ಶನದ ಕುರಿತು ಕಿಡಿಕಾರಿದ್ದಾರೆ.
ನಾವು ಹೆಚ್ಚುವರಿ ಬೌಲಿಂಗ್ ಆಯ್ಕೆಯನ್ನು ಹೊಂದಿದ್ದು, ಆರಂಭಿಕ ಹಂತಗಳಲ್ಲಿ ಬೇಗನೆ ವಿಕೆಟ್ ಕಳೆದುಕೊಂಡ ಪರಿಣಾಮ ರನ್ ಗಳಿಕೆಯಲ್ಲಿ ಹಿಂದೆ ಬಿದ್ದೆವು. ನಾವು 170-180 ರನ್ ಗಳಿಸಿದ್ದರೆ ಗೆಲ್ಲುವ ಅವಕಾಶ ತುಂಬಾ ಇತ್ತು. ಆದರೆ, ಬ್ಯಾಟ್ಸ್ಮನ್ಗಳ ಕಡೆಯಿಂದ ದೊರೆತ ನೀರಸ ಪ್ರದರ್ಶನದಿಂದಾಗಿ ನಾವು ರನ್ ಗಳಿಕೆಯಲ್ಲಿ ಹಿಂದೆ ಬಿದ್ದೆವು.
ಶಾಟ್ ಆಯ್ಕೆಯಲ್ಲಿ ಬ್ಯಾಟ್ಸ್ಮನ್ಗಳು ವಿಫಲವಾಗಿದ್ದು, ಇದು ಆರ್ಸಿಬಿ ಬೌಲರ್ಗಳಿಗೆ ವಿಕೆಟ್ ತೆಗೆಯಲು ಅನುವು ಮಾಡಿಕೊಟ್ಟಿತ್ತು. ಇದು ನಮ ರನ್ ವೇಗಕ್ಕೆ ಹೊಡೆತ ನೀಢಿತ್ತು ಎಂದು ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಸೋಲಿನ ಕುರಿತು ಹೇಳಿದ್ದಾರೆ.