

ಚೆನ್ನೈ: ಚುನಾವಣೆ ಎಂದರೆ ಹಣದ ಹೊಳೆ ಹರಿಯುತ್ತದೆ ಎಂಬ ಅಭಿಪ್ರಾಯ ದೇಶದೆಲ್ಲೆಡೆ ಬಲವಾಗಿ ಬೇರೂರಿದೆ. ಚುನಾವಣೆ ವೇಳೆ ಮದ್ಯ, ಹಣದ ಹೊಳೆ ಹರಿಯುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿ ಹಿಂದೆಮುಂದೆ ನೋಡದೆ ಭಾರೀ ಭರವಸೆ, ಗಿಫ್ಟ್ಗಳನ್ನೂ ನೀಡುತ್ತಾರೆ. ಈಗ ಪಕ್ಷವೊಂದು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಗೆದ್ದರೆ ಇಂಟಿಗೋ ಕಾರು ಹಾಗೂ ಚಿನ್ನದ ಚೈನ್ ಉಡುಗೊರೆ ನೀಡುವುದಾಗಿ ಘೋಷಿಸಿದೆ. ಇದೀಗ ಈ ಘೋಷಣೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ರಾಹುಲ್ಗೆ ಆಘಾತ.. ವಯನಾಡ್ಗೆ ಸ್ಮೃತಿ ಇರಾನಿ..!
ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿದರೆ ದುಬಾರಿ ಕಾರು ಮತ್ತು ಚಿನ್ನದ ಚೈನುಗಳನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ.
ತಮಿಳುನಾಡಿನಲ್ಲಿ ಎಲ್ಲಾ 39 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 19 ರಂದು ಅಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಚುನಾವಣೆ ಕಾವು ಏರಿದೆ. ಈ ಬಾರಿ ವಿಶೇಷವಾಗಿ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ತೀವ್ರ ಪೈಪೋಟಿ ನಡೆಸುತ್ತಿವೆ.
ತಿರುಚ್ಚಿ ಕ್ಷೇತ್ರದಲ್ಲಿ ತೀವ್ರ ಅಭ್ಯರ್ಥಿಗಳ ಮೂರು ಕಡೆಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಎಐಎಡಿಎಂಕೆಯಿಂದ ಕರುಪಯ್ಯ ಡಿಎಂಕೆ ಮಿತ್ರಪಕ್ಷ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ವೈಗೋ ವಿರುದ್ಧ ಸ್ಪರ್ಧಿಸಿದ್ದಾರೆ.
ಹೇಗಾದರೂ ಮಾಡಿ ಎಐಎಡಿಎಂಕೆ ಇಲ್ಲಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿಯೇ ಮಾಜಿ ಸಚಿವ ವಿಜಯ ಭಾಸ್ಕರ್ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನಗರದ ವಾರ್ಡ್ಗಳ ಕಾರ್ಯದರ್ಶಿಗಳು ಹಾಗೂ ಗ್ರಾಮಾಂತರದಲ್ಲಿ ಮಂಡಲ ಕಾರ್ಯದರ್ಶಿಗಳಿಗೆ ಕಾರು ಹಾಗೂ ಚಿನ್ನದ ಸರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಚುನಾವಣೆಯನ್ನು ಪ್ರತಿಷ್ಠೆಯಿಂದ ತೆಗೆದುಕೊಂಡಿರುವ ವಿಜಯಭಾಸ್ಕರ್, ಕರುಪಯ್ಯ ಅವರನ್ನು ಗೆಲ್ಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಗೆದ್ದರೆ ಇನ್ನೋವಾ ಕಾರು ಹಾಗೂ ಐದು ಗ್ರಾಂ ಚಿನ್ನದ ಸರ ನೀಡುವುದಾಗಿ ಘೋಷಿಸಿದರು. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.