More

    ರಾಹುಲ್‌ಗೆ ಆಘಾತ.. ವಯನಾಡ್‌ಗೆ ಸ್ಮೃತಿ ಇರಾನಿ..!

    ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಗುರಿಯಾಗಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋತಿದ್ದ ರಾಹುಲ್, ವಯನಾಡಿನಲ್ಲಿ ಗೆದ್ದಿದ್ದರು. ಈ ಬಾರಿ ಮತ್ತೆ ರಾಹುಲ್ ವಯನಾಡಿನಿಂದ ಸ್ಪರ್ಧಿಸಿರುವ ರಾಹುಲ್​ವಿರುದ್ಧ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ. ಇದರಿಂದ ಇಲ್ಲಿನ ಸ್ಪರ್ಧೆ ಕುತೂಹಲ ಮೂಡಿಸಿದೆ.

    ಇದನ್ನೂ ಓದಿ: ಗೆಳೆಯನನ್ನು ಕೊಂದ ವ್ಯಕ್ತಿ 29 ವರ್ಷದ ನಂತರ ಸಿಕ್ಕಿಬಿದ್ದ​!

    ರಾಹುಲ್ ಗಾಂಧಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಬುಧವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಸ್ಮೃತಿ ಇರಾನಿ ಸೋಲಿಸಿದ್ದನ್ನು ಸ್ಮರಿಸಬಹುದು.
    ಎರಡನೇ ಹಂತದಲ್ಲಿ ಮತದಾನ:
    ವಯನಾಡ್ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ 24 ಗಂಟೆಗಳ ನಂತರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ನಾಮಪತ್ರ ಸಲ್ಲಿಸಿದರು.

    ಸುರೇಂದ್ರನ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ವಯನಾಡ್ ನಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಸ್ಮೃತಿ ಇರಾನಿ ಭಾಗವಹಿಸಿದ್ದರು.

    ಸ್ಮೃತಿ ಇರಾನಿ ಈಗಾಗಲೇ ರಾಹುಲ್ ಅವರನ್ನು ಗುರಿಯಾಗಿಸಿದ್ದಾರೆ. 50 ವರ್ಷ ಗಾಂಧಿ ಕುಟುಂಬ ಆಳ್ವಿಕೆ ನಡೆಸಿದ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೇನೆ ಎಂದರು.

    ಪಿಎಫ್‌ಐನಂತಹ ನಿಷೇಧಿತ ಸಂಘಟನೆಗಳಿಂದ ಸಹಾಯ ಪಡೆದಿದ್ದಾರೆ ಎಂಬ ಆರೋಪ ರಾಹುಲ್ ಗಾಂಧಿ ಮೇಲಿದೆ. ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ ಅಮೇಥಿ ಅಭಿವೃದ್ಧಿಯನ್ನು ರಾಹುಲ್ ಗಾಂಧಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.

    ವಯನಾಡ್ ಅಭಿವೃದ್ಧಿಗೆ ರಾಹುಲ್ ಏನು ಮಾಡಿಲ್ಲ, ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

    ‘ಪ್ರಜಾಪ್ರಭುತ್ವ ತನ್ನ ಹಾದಿ ಹಿಡಿಯಲಿ’: ಕೇಜ್ರಿವಾಲ್ ಪದಚ್ಯುತಿಗೆ ಮಧ್ಯಪ್ರವೇಶಿಸುವುದಿಲ್ಲ ಎಂದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts