More

    ಚುನಾವಣೆ ಬಳಿಕ ವಯನಾಡ್​ನಿಂದಲೂ ರಾಹುಲ್ ಗಾಂಧಿ ಪಲಾಯನ: ಪ್ರಧಾನಿ ಮೋದಿ ವ್ಯಂಗ್ಯ

    ಮಹಾರಾಷ್ಟ್ರ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕೇರಳದ ವಯನಾಡ್​ನಲ್ಲಿ ಜನ ಬೆಂಬಲ ಪಡೆಯುವುದು ಕಷ್ಟವಾಗಲಿದೆ. ಅವರು ಅಲ್ಲಿಂದಲೂ ಓಡಿ ಹೋಗಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದ್ದಾರೆ.

    ಇದನ್ನೂ ಓದಿ: ನೇಹಾ ಕೊಲೆ ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಬೇಕು: ಗೀತಾ ಹಿರೇಮಠ ಆಗ್ರಹ 

    ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್​ ರಾಜಕುಮಾರ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

    ರಾಹುಲ್ ಗಾಂಧಿಯನ್ನು ರಾಜಕುಮಾರ ಎಂದ ಮೋದಿ, ಏಪ್ರಿಲ್ 26 ರಂದು ವಯನಾಡ್‌ನಲ್ಲಿ ಮತದಾನಕ್ಕಾಗಿ ಕಾಂಗ್ರೆಸ್ ಕಾಯುತ್ತಿದೆ. 2019ರಲ್ಲಿ ಅಮೇಥಿಯಿಂದ ಓಡಿಹೋದ ರಾಹುಲ್ ಗಾಂಧಿ ಈ ಬಾರಿ ಚುನಾವಣೆ ನಂತರ ವಯನಾಡ್​ನಿಂದಲೂ ಓಡಿಹೋಗುತ್ತಾರೆ. ಮತ್ತೆ ಹೊಸ ಕ್ಷೇತ್ರವನ್ನು ಹುಡುಕಬೇಕಿದೆ ಎಂದು ಹಾಸ್ಯ ಮಾಡಿದರು.

    ರಾಹುಲ್ ಗಾಂಧಿ ವಯನಾಡ್‌ನಲ್ಲಿ ಕೂಡ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಸಹಾಯಕರು ಏಪ್ರಿಲ್ 26 ರಂದು ಮತದಾನಕ್ಕಾಗಿ ಕಾಯುತ್ತಿದ್ದಾರೆ. ಅಮೇಥಿಯಿಂದ ಓಡಿಹೋದ ಅವರು ವಯನಾಡ್​​ನಿಂದಲೂ ಓಡಿಹೋಗಲಿದ್ದಾರೆ ಎಂದು ನೀವು ಊಹಿಸಬಹುದು ಎಂದು ಮೋದಿ ತಿಳಿಸಿದರು.

    ಇಂಡಿಯಾ ಮೈತ್ರಿಕೂಟದ ನಾಯಕರು ಮತ್ತು ಕಾಂಗ್ರೆಸ್​ ನಾಯಕರು ಲೋಕಸಭೆ ಚುನಾವಣೆಯ ಘೋಷಣೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಸೋಲುವ ಭಯದಿಂದ ಕೆಲವರು ರಾಜ್ಯಸಭೆಗೆ ತೆರಳಿದ್ದಾರೆ ಎಂದು ಸೋನಿಯಾಗಾಂಧಿ ಹೆಸರು ಉಲ್ಲೇಖಿಸಿದೆ ಪರೋಕ್ಷವಾಗಿ ಗುಡುಗಿದರು. ಮಹಾರಾಷ್ಟ್ರದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದ ಮೋದಿ ದೊಡ್ಡ ಪ್ರಮಾಣ ಮತದಾನ ಮಾಡುವ ಮೂಲಕ ಎನ್‌ಡಿಎ ಒಕ್ಕೂಟ ಬೆಂಬಲಿಸಬೇಕು ಕೇಳಿಕೊಂಡರು.

    ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts