More

    ರಾಹುಲ್ ಗಾಂಧಿಗೆ 10 ಪ್ರಶ್ನೆ ಕೇಳಿದ ಬಿಜೆಪಿ

    ಬೆಂಗಳೂರು:
    ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿರುವ ಸಂದರ್ಭದಲ್ಲಿ ನಮ್ಮ 10 ಪ್ರಶ್ನೆಗಳಿಗೆ ಅವರು ಉತ್ತರಿಸಲಿ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್ ಅವರು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.
    1.ಈ ಸರ್ಕಾರದ ಲೋಕೋಪಯೋಗಿ ಸಚಿವರು ಈ ತನಕ ಒಂದೇ ಒಂದು ಕಾಮಗಾರಿಯ ಉದ್ಘಾಟನೆಯನ್ನು ಮಾಡಿಲ್ಲ ಏಕೆ?
    2.ಭ್ರಷ್ಟಾಚಾರ ಕುರಿತು ನಿಮ್ಮ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಬರೆದ ಪತ್ರಕ್ಕೆ ಉತ್ತರ ಕೊಡ್ತೀರಾ?
    3.ರಾಜ್ಯದಲ್ಲಿ 692 ರೈತರು ಸತ್ತಿದ್ದು, ತಾವು ಅವರುಗಳ ಮನೆಗೆ ಭೇಟಿ ನೀಡುವ ಕಾರ್ಯಕ್ರಮವಿದೆಯಾ?
    4.ಕೆಆರ್‌ಎಸ್‌ಗೆ ಭೇಟಿ ಕೊಡ್ತೀರಾ? ಅಲ್ಲಿ ಏನಾಗಿದೆ ಎನ್ನುವ ಪರಿಸ್ಥಿತಿಯನ್ನು ಅರಿಯುತ್ತೀರಾ?
    5.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದ್ದರೂ ಸರ್ಕಾರ ಏಕೆ ಸುಮ್ಮನಿದೆ?
    6.ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ೋಷಣೆ ಖಂಡಿಸಲು ಮುಂದಾಗಲಿಲ್ಲ. ನೀವಾದರೂ ಖಂಡಿಸುತ್ತೀರಾ?
    7.ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದೂರಿನ ವಿಚಾರವಾಗಿ ಅವರನ್ನು ಭೇಟಿ ಮಾಡಿ ಏನಾಗುತ್ತಿದೆ ಎನ್ನುವ ಮಾಹಿತಿ ಪಡೆಯುತ್ತೀರಾ?
    8.ಬ್ರಾಂಡ್ ಬೆಂಗಳುರು ಮಾಡಲು ಹೊರಟ ಡಿಸಿಎಂ ಶಿವಕುಮಾರ್, ಬಾಂಬ್ ಬೆಂಗಳೂರು ಮಾಡಿದ್ದಾರೆ. ಇದಕ್ಕೆ ಉತ್ತರವೇನು?
    9.ಅಂಗನವಾಡಿಯಲ್ಲಿ ಮೊಟ್ಟೆ, ಆಸ್ಪತ್ರೆಯಲ್ಲಿ ಮೆಡಿಸಿನ್ ಸಿಗುತ್ತಿಲ್ಲ. ಕಾರಣವೇನು?
    10.ಬಿಡಿಎ ವಸೂಲಿ ಕೇಂದ್ರವಾಗಿದೆಯೇ? ರೆವಿನ್ಯೂ ಲೇಔಟ್‌ಗಳ ರಿಜಿಸ್ಟೇಷನ್ ನಿಲ್ಲಿಸಿರುವುದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts