More

    ಕೊಡಗಿನಲ್ಲಿ ಶೇ. 74.64ರಷ್ಟು ಮತದಾನ

    ಮಡಿಕೇರಿ:

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕೊಡಗಿನಲ್ಲಿ ಈ ಬಾರಿ ಒಟ್ಟಾರೆ ಶೇ. 74.64ರಷ್ಟು ಮತದಾನವಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.41 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.73.88 ಮತದಾನವಾಗಿದೆ.
    ಜಿಲ್ಲೆಯಲ್ಲಿ ಒಟ್ಟು 4,70,766 ಮತದಾರರಿದ್ದು ಈ ಪೈಕಿ 3,51,463 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,16,143 ಪುರಷ ಮತದಾರರಲ್ಲಿ 88,186 ಮತದಾರು ಮತ ಚಲಾವಣೆ ಮಾಡುವ ಮೂಲಕ ಶೇ.75.94ಷ್ಟು ಪುರಷರು ಮತದಾನ ಮಾಡಿದಂತಾಗಿದೆ. 1,22,581 ಮಹಿಳಾ ಮತದಾರರಲ್ಲಿ 91,841 ಮಹಿಳೆಯರು ಮತ ಚಲಾಯಿಸಿದ್ದು, ಶೇ. 74.92ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ.

    ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 11,44,25 ಪುರುಷ ಮತದಾರರಿದ್ದು, 84,728 ಪುರುಷರು ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ.74.05ರಷ್ಟು ಮತದಾನ ಮಾಡಿದಂತಾಗಿದೆ. ಕ್ಷೇತ್ರದಲ್ಲಿ 1,17,601 ಮಹಿಳಾ ಮತದಾರರಿದ್ದು 86,698 ಮಹಿಳೆಯರು ಮತ ಚಲಾಯಿಸಿದ್ದಾರೆ. ಈ ಮೂಲಕ ಶೇ. 73.72ರಷ್ಟು ಮಹಿಳೆಯರು ಮತದಾನ ಮಾಡಿದಂತಾಗಿದೆ.
    ಎರಡು ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಅಧಿಕ ಇದ್ದರೂ ಶೇಕಡವಾರು ಮತದಾನ ಪ್ರಮಾಣದಲ್ಲಿ 2 ಕ್ಷೇತ್ರಗಳಲ್ಲೂ ಪುರುಷರೇ ಹೆಚ್ಚು ಮತದಾನ ಮಾಡಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಶೇ. 72.5 ರಷ್ಟು ಮತದಾನವಾಗಿತ್ತು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.75 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.70 ರಷ್ಟು ಮತದಾನ ದಾಖಲಾಗಿತ್ತು. 2014ರ ಚುನಾವಣೆಯಲ್ಲಿ ಕೊಡಗಿನಲ್ಲಿ ಶೇ. 71.88ರಷ್ಟು ಮತದಾನವಾಗಿತ್ತು. ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಕೊಡಗಿನಲ್ಲಿ ಅಲ್ಪಪ್ರಮಾಣದಲ್ಲಿ ಹೆಚ್ಚಿನ ಮತದಾನ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts