More

    ಪ್ರಜ್ವಲ್ ರೇವಣ್ಣ ಕಾನೂನು ಗೌರವಿಸಬೇಕು; ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದ್ದು ಆರೋಪಿತ ಪ್ರಜ್ವಲ್ ರೇವಣ್ಣ ಕಾನೂನಿಗೆ ತಲೆ ಬಾಗುವ ಮೂಲಕ ಗೌರವಿಸಬೇಕೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

    ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆ ಸಂಖ್ಯೆ 6ರಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಆ ಪಕ್ಷದ ಮೇಲೆ ಸ್ವಲ್ಪವಾದರೂ ಪರಿಣಾಮ ಬೀರಲಿದೆ. ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅತಿರೇಕದ ನಡೆ. ಜನ ಬೇಸರಿಸಿಕೊಂಡಿದ್ದಾರೆ. ಹೀಗಾಗಿ ಕಠಿಣ ಶಿಕ್ಷೆ ಎದುರಿಸಲೇಬೇಕಾಗುತ್ತದೆ ಎಂದರು.

    ಇನ್ನು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು ಆತನನ್ನು ಬಂಧಿಸಿ ಕರೆತರುವ ಅಧಿಕಾರಿ ಕೇಂದ್ರ ಸರ್ಕಾರಕ್ಕಿರೋದು. ವಿಜಯ ಮಲ್ಯ ದೇಶ ಬಿಟ್ಟು ಹೋದನಲ್ಲ ಅವನಿಗೆ ರಾಜ್ಯ ಸರ್ಕಾರ ನೋಟಿಸ್ ಕೊಡಲು ಆಗುತ್ತದಾ? ನೋಟಿಸ್ ಕೊಡುವ ಅಧಿಕಾರ ಯಾರಿಗಿದೆ. ರಾಜಕೀಯವಾಗಿ ಮುಜುಗರವಾಗುತ್ತಿರುವ ಕಾರಣ ಬಿಜೆಪಿಗರು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದರು.

    ಅಬ್‌ಕಿ ಬಾರ್ ರಾಜು ಆಲಗೂರ

    ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಜೂನ್ 4ರಂದು ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರ ಸಿಗಲಿದೆ. ಅಬ್‌ಕಿ ಬಾರ್ ರಾಜು ಆಲಗೂರ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts