More

    ಆ 2 ಸಿನಿಮಾದಿಂದ… ತನ್ನ ಬೋಳು ತಲೆಗೆ ಕಾರಣ ಬಿಚ್ಚಿಟ್ಟ ಬಾಹುಬಲಿ ಕಟ್ಟಪ್ಪ ಅಲಿಯಾಸ್​ ಸತ್ಯರಾಜ್​​!

    ಚೆನ್ನೈ: ಬಾಹುಬಲಿ ಸಿನಿಮಾ ಬರುವವರೆಗೂ ನಟ ಸತ್ಯರಾಜ್​ ಅವರು ತಮಿಳಿಗರಿಗೆ ಬಿಟ್ಟು ಬೇರೆ ಯಾರಿಗೂ ಪರಿಚಯವಿರಲಿಲ್ಲ. ಯಾವಾಗ ಬಾಹುಬಲಿ ಭಾಗ ಒಂದು ಮತ್ತು ಎರಡರಲ್ಲಿ ಕಟ್ಟಪ್ಪ ಪಾತ್ರದಲ್ಲಿ ಮಿಂಚಿದರೋ ಅಂದಿನಿಂದ ಪ್ಯಾನ್​ ಇಂಡಿಯಾ ನಟನಾಗಿದ್ದಾರೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಜೀವನದ ಮೇಲೆ ಮತ್ತೊಂದು ಬಯೋಪಿಕ್ ರೆಡಿಯಾಗುತ್ತಿದ್ದು, ಮೋದಿ ಪಾತ್ರದಲ್ಲಿ ಸತ್ಯರಾಜ್ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದರ ನಡುವೆ ಸತ್ಯರಾಜ್​ ಅವರು ಕೂದಲು ಇಲ್ಲದ ತಮ್ಮ ಮೊಟ್ಟೆ ತಲೆಯ ಬಗ್ಗೆ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

    ಕಟ್ಟಪ್ಪನ ಪಾತ್ರವನ್ನು ನೀವು ಗಮನಿಸಿರಬಹುದು. ಉದ್ದ ಗಡ್ಡ ಮತ್ತು ಬೋಳು ತಲೆಯಲ್ಲಿ ಸತ್ಯರಾಜ್​ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲೂ ಸತ್ಯರಾಜ್ ಅವರದ್ದು​ ಬೋಳು ತಲೆ. ಕೂದಲು ಉದುರಿ ಬೋಳು ತಲೆಯಾಗಲು ಕಾರಣ ಏನು ಎಂಬುದನ್ನು ಇದೀಗ ಸತ್ಯರಾಜ್​ ವಿವರಿಸಿದ್ದಾರೆ.

    ಅಂದಹಾಗೆ ಸತ್ಯರಾಜ್​ ಅವರು 80ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಖಡಕ್​ ಖಳನಾಯಕನಾಗಿ ನಟಿಸಿದರು. ಸುಮಾರು 40 ವರ್ಷಗಳ ಸುದೀರ್ಘ ಸಿನಿ ಪಯಾಣ ಮಾಡಿದ್ದು, ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಇಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರು ನಟ ವಸಂತ್​ ರವಿ ನಟನೆಯ ಮತ್ತು ಗುಹಾನ್​ ಸೆನ್ನಿಯಪ್ಪನ್​ ನಿರ್ದೇಶನದ ವೆಪನ್​ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಮೇ 23ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

    ವೆಪನ್​ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ ಸತ್ಯರಾಜ್​, ಕಾಲಿವುಡ್​ ಖ್ಯಾತ ನಿರ್ದೇಶಕ ಕೆ.ಎಸ್​. ರವಿಕುಮಾರ್​ ಬಗ್ಗೆ ಮಾತನಾಡುತ್ತಾ, ನಾನು ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ರವಿಕುಮಾರ್​ ನಿರ್ದೇಶನದ ಎರಡು ಸಿನಿಮಾಗಳನ್ನು ನಾನು ಮಿಸ್​ ಮಾಡಿಕೊಂಡೆ. ಆ ಎರಡೂ ಸಿನಿಮಾಗಳು ಸೂಪರ್​ ಡೂಪರ್​ ಹಿಟ್​ ಆದವು. ಅಂತಹ ಸಿನಿಮಾಗಳಲ್ಲೇ ನಾನು ನಟಿಸಲಿಲ್ಲ.

    ರವಿಕುಮಾರ್​ ಮತ್ತು ನನ್ನ ಸಿನಿಮಾ ಒಂದೇ ದಿನ ಬಿಡುಗಡೆಯಾಯಿತು. ನನ್ನ ಸಿನಿಮಾ ಕೇವಲ ಎರಡೇ ವಾರ ಓಡಿತು. ಆದರೆ, ರವಿಕುಮಾರ್​ ಸಿನಿಮಾ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ಇದನ್ನು ನೋಡಿ ನಾನು ನೆಮ್ಮದಿಯಾಗಿ ಮಲಗಲು ಸಾಧ್ಯವೇ? ಅಲ್ಲಿಯವರೆಗೂ ನನ್ನ ಕೂದಲು ಚೆನ್ನಾಗಿಯೇ ಇತ್ತು. ಆದರೆ, ನಂತರದಲ್ಲಿ ಕೂದಲು ಉದುರಲು ಆರಂಭವಾಯಿತು. ಕೊನೆಗೂ ಬೋಳು ತಲೆಯಾಯಿತು ಎಂದು ಸತ್ಯರಾಜ್​ ಹಾಸ್ಯ ಚಟಾಕಿ ಹಾರಿಸಿದರು. (ಏಜೆನ್ಸೀಸ್​)

    ಆರ್​ಸಿಬಿ ಆಟಗಾರರಿಗೆ ಎಂ.ಎಸ್​. ಧೋನಿ ಶೇಕ್​ ಹ್ಯಾಂಡ್​ ಮಾಡಲಿಲ್ಲ ಏಕೆ? ಕೊನೆಗೂ ಕಾರಣ ಬಹಿರಂಗ!

    ಮಾದಕ ನೋಟದಿಂದಲೇ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮೈಬಿಸಿಯೇರಿಸಿದ್ದ ಈ ಸೌತ್​ ಬ್ಯೂಟಿ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts