More

    ರಸ್ತೆಯಲ್ಲಿ ರೋಮ್ಯಾನ್ಸ್; ಹುಡುಗಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಬೈಕ್ ಓಡಿಸಿದ ರೋಡ್ ರೋಮಿಯೋ..

    ಬೆಂಗಳೂರು: ರೋಡ್​​ನಲ್ಲಿ ರೋಮ್ಯಾನ್ಸ್ ಮಾಡುವುದು ಈಗ ಇದು ಫ್ಯಾಶನ್ ಆಗಿಬಿಟ್ಟಿದೆ. ಬೈಕ್ ಟ್ಯಾಂಕರ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಬೈಕ್​​ ಒಡಿಸುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ಫ್ಲೈ ಓವರ್ ಮೇಲೆ ಯುವಕನೊಬ್ಬ ಮಹಿಳೆಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಕುತ್ತಿಗೆಗೆ ಕೈ ಹಾಕಿಕೊಂಡು ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು.

    ಬೈಕ್ ನಂಬರ್ ಪ್ಲೇಟ್ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಗುರುತಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಮಹಿಳೆ ಬೈಕ್ ಸವಾರನ ಮಡಿಲಲ್ಲಿ ಒಂದು ಬದಿಯಲ್ಲಿ ತನ್ನ ತೋಳುಗಳನ್ನು ಅವನ ಕುತ್ತಿಗೆಗೆ ಸುತ್ತಿಕೊಂಡು ಕುಳಿತಿರುವುದು ಕಂಡುಬರುತ್ತದೆ. ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ.

    ಬೆಂಗಳೂರು ಸಂಚಾರ ಪೊಲೀಸರು ಬೈಕ್ ನಂಬರ್ ಪ್ಲೇಟ್ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬೈಕ್ ಚಲಾಯಿಸಿದ ಯುವಕ ಮತ್ತು ಮಹಿಳೆಯನ್ನು ಗುರುತಿಸಿದ್ದಾರೆ. “ನಾವು ಅಪರಾಧಿಯನ್ನು ಗುರುತಿಸಿದ್ದೇವೆ. ಈ ಹಿಂದೆ ಆತ ಮಾಡಿರುವ ಉಲ್ಲಂಘನೆಗಳ ಪಟ್ಟಿಯನ್ನು ಪತ್ತೆ ಮಾಡುತ್ತೇವೆ,” ಎಂದು ಬೆಂಗಳೂರು ಸಂಚಾರ ಉತ್ತರ ವಿಭಾಗದ ಡಿಸಿಪಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts