More

    ದೆಹಲಿ ಸಿಎಂ ಈಗ ಸಂಪೂರ್ಣ ಆರೋಗ್ಯ; ಇನ್ಸುಲಿನ್​ ಡೋಸ್​ ಮುಂದುವರೆಸಿ ಎಂದ ಏಮ್ಸ್​ ಮೆಡಿಕಲ್ ಬೋರ್ಡ್​

    ನವದೆಹಲಿ: ಪ್ರಸ್ತುತ ತಿಹಾರ್​ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​, ಸ್ವೀಟ್ಸ್​, ಮಾವಿನಹಣ್ಣು ತಿನ್ನುವ ಮೂಲಕ ದೇಹದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ದೆಹಲಿ ಕೋರ್ಟ್​ಗೆ ದೂರು ಸಲ್ಲಿಸಿತ್ತು. ಇದರ ಬೆನ್ನಲ್ಲೇ ತನಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಜೈಲಿನ ಅಧಿಕಾರಿಗಳಿಗೆ ಸಿಎಂ ಪತ್ರ ಬರೆದಿರುವುದಾಗಿ ತಿಳಿಸಿದ್ದರು. ಸದ್ಯ ಇಡಿ ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಆರೋಗ್ಯ ಸಂಪೂರ್ಣ ಸುಧಾರಣೆ ಕಂಡಿದೆ ಎಂದು ಏಮ್ಸ್​ ಮೆಡಿಕಲ್ ಬೋರ್ಡ್​ ತಿಳಿಸಿದೆ.

    ಇದನ್ನೂ ಓದಿ: ಭೂ ಹಗರಣ ಪ್ರಕರಣ: ಹೇಮಂತ್ ಸೊರೆನ್ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್!​

    ತಿಹಾರ್​ ಜೈಲಿಗೆ ಬಂದಾಗಿನಿಂದಲೂ ದೆಹಲಿ ಸಿಎಂ ಆರೋಗ್ಯದ ಬಗ್ಗೆ ಅನೇಕರಿಗೆ ಗೊಂದಲ ಮೂಡಿತ್ತು. ಕೇಜ್ರಿವಾಲ್ ಆರೋಗ್ಯ ನಿಜಕ್ಕೂ ಸರಿಯಿಲ್ಲವೇ? ಅಥವಾ ಇಡಿ ಹೇಳಿದಂತೆ ಆರೋಗ್ಯ ವಿಚಾರವನ್ನು ಮುಂದಿಟ್ಟು ಪ್ರಕರಣದಲ್ಲಿ ಜಾಮೀನು ಪಡೆಯುವ ಸಲುವಾಗಿ ನೀಡುತ್ತಿರುವ ಕಾರಣವೇ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ, ಈ ಕುರಿತಂತೆ ಇದೀಗ ಏಮ್ಸ್​ ಮೆಡಿಕಲ್ ಬೋರ್ಡ್​ ಹೊಸ ಮಾಹಿತಿ ಹಂಚಿಕೊಳ್ಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ.

    ದೆಹಲಿ ಕೋರ್ಟ್​ ನೀಡಿದ ನಿರ್ದೇಶನದಂತೆ ಅರವಿಂದ್ ಕೇಜ್ರಿವಾಲ್ ಆರೋಗ್ಯ ಪರಿಶೀಲಿಸಿದ ಮೆಡಿಕಲ್ ಬೋರ್ಡ್​ನ ಐವರು ಸದಸ್ಯರು, ಕೇಜ್ರಿವಾಲ್​ರ ಆರೋಗ್ಯ ಸಂಪೂರ್ಣವಾಗಿ ಸುಧಾರಣೆ ಕಂಡಿದೆ. ಕೊಡಲಾದ ಎರಡು ಯೂನಿಟ್​ನ ಇನ್ಸುಲಿನ್ ಡೋಸ್​​ಗಳನ್ನು ತಪ್ಪದೇ ಮುಂದುವರಿಸುವುದು ಒಳಿತು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

    ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

    ಯುವತಿಯರಿಗೆ ಅಸಭ್ಯ ಮೆಸೇಜ್​ ಕಳಿಸುತ್ತಿದ್ದ ಮೊಬೈಲ್ ಅಂಗಡಿಯ ಯುವಕನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts