More

    ಬಾಹ್ಯಾಕಾಶದತ್ತ ಸುನೀತಾ, ಗಣೇಶ, ಭಗವದ್ಗೀತೆ!

    ನವದೆಹಲಿ: ಕೋಟ್ಯಂತರ ಹಿಂದುಗಳು ಪೂಜಿಸುವ ಗಣೇಶ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗಿದ್ದಾನೆ! ಹೌದು. ಗಣೇಶ ವಿಗ್ರಹದ ಜತೆಗೆ ಭಗವದ್ಗೀತೆಯನ್ನು ಹೊತ್ತು ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್್ಸ 3ನೇ ಬಾರಿಗೆ ಅಂತರಿಕ್ಷಕ್ಕೆ ಜಿಗಿಯಲಿದ್ದಾರೆ.

    ಬಾಹ್ಯಾಕಾಶದತ್ತ ಸುನೀತಾ, ಗಣೇಶ, ಭಗವದ್ಗೀತೆ!

    ಸುನಿತಾ ವಿಲಿಯಮ್ಸ್ (58) ಮತ್ತು ಬುಚ್ ವಿಲ್ಮೋರ್ ಒಳಗೊಂಡ ಬೋಯಿಂಗ್ ಸಂಸ್ಥೆಯ ಸ್ಟಾರ್​ಲೈನರ್ ನೌಕೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಭಕ್ಕೆ ಚಿಮ್ಮಲಿದೆ. ಮತ್ತೊಮ್ಮೆ ಇತಿಹಾಸ ಬರೆಯಲು ಸಜ್ಜಾಗಿದ್ದೇನೆ. ನನ್ನ ಆಪ್ತರು, ಕುಟುಂಬಸ್ಥರು ಖುಷಿಯಾಗಿದ್ದಾರೆ. ಬಾಹ್ಯಾಕಾಶ ನನಗೆ ತವರು ಮನೆಯಾಗಿದೆ. ಈ ಯಾತ್ರೆಯ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಸುನಿತಾ ಹರ್ಷ ವ್ಯಕ್ತಪಡಿಸಿದ್ದಾರೆ.

    ಸುನಿತಾ ಯಾರು?: ಗುಜರಾತ್ ಮೂಲದ ಡಾ. ದೀಪಕ್ ಪಾಂಡ್ಯ ಮತ್ತು ಬೋನಿ ದಂಪತಿ ಪುತ್ರಿ ಸುನಿತಾ ಹ್ಯುಮನ್-ರೇಟೆಡ್ ಬಾಹ್ಯಾಕಾಶ ನೌಕೆಯ ಮೊದಲ ಕಾರ್ಯಾಚರಣೆಯಲ್ಲಿ ಹಾರಾಟ ನಡೆಸಿದ ಪ್ರಥಮ ಮಹಿಳೆ. ನೌಕಾಪಡೆಯ ಪೈಲಟ್ ಆಗಿರುವ ಸುನಿತಾ 2006 ಮತ್ತು 2012ರಲ್ಲಿ 2 ಬಾರಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದರು. ಇದುವರೆಗೂ 322 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿರುವುದು ಮತ್ತೊಂದು ಖ್ಯಾತಿ.

    ಬಾಹ್ಯಾಕಾಶದತ್ತ ಸುನೀತಾ, ಗಣೇಶ, ಭಗವದ್ಗೀತೆ!

    ಗಣೇಶನ ಭಕ್ತೆ: ಸುನಿತಾ ವಿಲಿಯಮ್ಸ್​ ಅವರಿಗೆ ವಿಘ್ನ ವಿನಾಯಕ ಗಣೇಶ ಶುಭ ಸಂಕೇತವಂತೆ. ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಗಣೇಶನನ್ನು ಪ್ರಾರ್ಥಿಸಿ ಆಶೀರ್ವಾದ ಪಡೆಯುತ್ತೇನೆ. ಸಿದ್ಧಿ ವಿನಾಯಕ ಶಕ್ತಿಯನ್ನು ಕರುಣಿಸುತ್ತಾನೆ. ಪ್ರತಿ ಬಾರಿ ಬಾಹ್ಯಾಕಾಶಕ್ಕೆ ಹೋಗುವಾಗ ಸಣ್ಣದೊಂದು ಗಣೇಶನ ವಿಗ್ರಹ ತೆಗೆದುಕೊಂಡು ಹೋಗುತ್ತೇನೆ. ಈ ಬಾರಿಯೂ ಗಣೇಶನ ಜತೆಗೆ ಭಗವದ್ಗೀತೆ ಕೊಂಡೊಯ್ಯುತ್ತೇನೆಂದು ಸುನಿತಾ ಹೇಳಿದ್ದಾರೆ.

    ಸುನಿತಾ ದಾಖಲೆಗಳು

    . ಬಾಹ್ಯಾಕಾಶದಲ್ಲಿ ಹಲವು ಸಾಧನೆ ಮೈಲಿಗಲ್ಲು

    . ಹೆಚ್ಚು ಬಾರಿ ಅಂತರಿಕ್ಷ ನಡಿಗೆ ನಡೆಸಿದ ಮಹಿಳೆ

    . ಒಟ್ಟು ಎರಡು ಬಾರಿ ಗಗನಯಾತ್ರೆ ನಡೆಸಿದ್ದಾರೆ

    . ಒಟ್ಟು 195 ದಿನಗಳನ್ನು ಕಳೆದಿರುವ ಸುನಿತಾ

    ಎರಡನೇ ಭಾರತೀಯೆ!

    . ಸುನಿತಾ ಭಾರತೀಯ ಮೂಲದ 2ನೇ ಗಗನಯಾತ್ರಿ

    . ಕಲ್ಪನಾ ಚಾವ್ಲಾ ಭಾರತ ಮೂಲದ ಮೊದಲ ಮಹಿಳೆ

    . ಕಲ್ಪನಾ 2003ರಲ್ಲಿ ಸ್ಪೇಸ್​ಶಟಲ್ ದುರಂತದಲ್ಲಿ ಸಾವು

    . ಆರು ಸಹೋದ್ಯೋಗಿಗಳ ಜತೆ ಸಾವನ್ನಪ್ಪಿದ್ದ ಕಲ್ಪನಾ

    ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ತೋರಬೇಕಾಗಿಲ್ಲ: ಕಾಂಗ್ರೆಸ್‌ನ ನಡೆಯನ್ನು ಪ್ರಶ್ನಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts