More

    ಗೆಳೆಯನನ್ನು ಕೊಂದ ವ್ಯಕ್ತಿ 29 ವರ್ಷದ ನಂತರ ಸಿಕ್ಕಿಬಿದ್ದ​!

    ಪಾಲ್ಘರ್(ಮಹಾರಾಷ್ಟ್ರ): ಪಾಲ್ಘರ್ ಜಿಲ್ಲೆಯಲ್ಲಿ ಸಹೋದ್ಯೋಗಿಯನ್ನು ಹತ್ಯೆಗೈದು ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ನೆರೆಯ ಗುಜರಾತ್‌ ನಲ್ಲಿ ಬಂಧಿಸಲಾಗಿದೆ.

    ಇದನ್ನೂ ಓದಿ: ‘ಪ್ರಜಾಪ್ರಭುತ್ವ ತನ್ನ ಹಾದಿ ಹಿಡಿಯಲಿ’: ಕೇಜ್ರಿವಾಲ್ ಪದಚ್ಯುತಿಗೆ ಮಧ್ಯಪ್ರವೇಶಿಸುವುದಿಲ್ಲ ಎಂದ ಹೈಕೋರ್ಟ್

    ಹರೇಶ್ ಬಾಬು ಪಟೇಲ್ ಅಲಿಯಾಸ್ ನಾಯ್ಕಾ (55) ಎಂಬಾತನನ್ನು ವಲ್ಸಾದ್ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಪಾಲ್ಘರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್ ಪಾಟೀಲ್ ಹೇಳಿದ್ದಾರೆ.

    ವಿರಾರ್‌ನಿಂದ ಬಂದಿದ್ದ 50 ವರ್ಷದ ಮೋಹನ್ ಸುಕುರ್ ದುಬ್ಲಿ ಮತ್ತು ವಲ್ಸಾದ್ ಜಿಲ್ಲೆಯ ಪಾರ್ಡಿ ಮೂಲದ ಪಟೇಲ್ ಅವರು ಸಫಲೆ ಬಳಿಯ ಜಿವ್ದಾನಿಪಾಡಾದಲ್ಲಿ ಕಟ್ಟಡ ನಿರ್ಮಾಣದಲ್ಲಿ ಮೇಸ್ತ್ರಿಗಳಾಗಿ ಕೆಲಸ ಮಾಡುತ್ತಿದ್ದರು ಕ್ಷುಲ್ಲಕ ವಿಚಾರಕ್ಕೆ 1995ರ ಏಪ್ರಿಲ್ 19ರಂದು ಇಬ್ಬರ ನಡುವೆ ಜಗಳವಾಗಿತ್ತು.

    ಜಗಳ ವಿಕೋಪಕ್ಕೆ ತಿರುಗಿ ದುಬ್ಲಿಯನ್ನು ಪಟೇಲ್ ಗುದ್ದಲಿಯಿಂದ ಸಫಲೆಗೆ ಹೊಡೆದಿದ್ದು, ಆತ ತೀವ್ರಗಾಯಗೊಂಡು ಮೃತಪಟ್ಟಿದ್ದನು. ಪೊಲೀಸರು ಎರಡು ದಿನಗಳ ನಂತರ ವಲ್ಸಾದ್‌ನ ಗ್ರಾಮದಲ್ಲಿ ಪಟೇಲ್‌ನನ್ನು ಬಂಧಿಸಿದ್ದರು, ಆದರೆ ಆತ ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು ಎಂದು ಎಸ್‌ಪಿ ಪಾಟೀಲ್ ಹೇಳಿದರು.

    ಸ್ಥಳೀಯ ಕ್ರೈಂ ಬ್ರಾಂಚ್ ತಂಡವು ಆರೋಪಿಯನ್ನು ಆತನ ಸ್ವಗ್ರಾಮದಲ್ಲಿ ಬಂಧಿಸಿದೆ ಎಂದು ಎಸ್ಪಿ ಪಾಟೀಲ್ ತಿಳಿಸಿದ್ದಾರೆ.

    ಮೂರು ಬಾರಿ ನಾಮಪತ್ರ ಸಲ್ಲಿಸಿದ ಎಚ್​.ಡಿ. ಕುಮಾರಸ್ವಾಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts