More

    ಪೊಲೀಸ್​ ಮೇಲೆ ಕಾರು ಹತ್ತಿಸಿದ ಮಹಿಳೆ: ಕಾರಣ ಹೀಗಿದೆ..

    ಇಸ್ಲಾಮಾಬಾದ್​: ಸಂಚಾರ ನಿಯಮ ಉಲ್ಲಂಘಿಸಿದ ಮಹಿಳೆಯನ್ನು ಪ್ರಶ್ನಿಸಿದ್ದೇ ತಪ್ಪಾಯ್ತು. ಟ್ರಾಫಿಕ್​ ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದು ಕಿರುಚಾಡಿದ ಆಕೆ ಕಡೆಗೆ ಪೊಲೀಸ್​ ಕಾನ್​ಸ್ಟೇಬಲ್​ ಮೇಲೆ ಕಾರುಹತ್ತಿಸಿಕೊಂಡು ಹೋಗಿದ್ದು, ಇಸ್ಲಾಮಾಬಾದ್ ನಲ್ಲಿ ಘಟನೆ ನಡೆದಿದೆ. ಈ ವೀಡಿಯೋ ತುಣುಕು ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ.

    ಇದನ್ನೂ ಓದಿ: “ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಅಂದ್ರೆ?” ಬಿಗ್‌ಬಾಸ್ ಪ್ರಿಯಾಂಕಾ ಸಿಂಗ್ ಕಾಮೆಂಟ್ಸ್ ವೈರಲ್

    ವೈರಲ್​ ಆಗಿರುವ ವೀಡಿಯೋದಲ್ಲಿ ಪಾಕಿಸ್ತಾನಿ ಮಹಿಳೆ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ತೀವ್ರ ಮಾತಿನ ಚಕಮಕಿಯಲ್ಲಿ ತೊಡಗಿರುವುದನ್ನು ಕಾಣಬಹುದು. ವಾದವು ಉಲ್ಬಣಗೊಂಡು ಕಾರ್​ ಮುಂದೆ ನಿಂತಿದ್ದ ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಮೇಲೆ ಆಕೆ ಕಾರ್ ಹತ್ತಿಸಿ ಪರಾರಿಯಾಗುತ್ತಿರುವುದನ್ನು ಕಾಣಬಹುದು.

    ಫರಾ ಅವರ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಆಪಾಧಿತ ಮಹಿಳೆಯನ್ನು ಬಂಧಿಸಲಾಗಿದೆ. ಇಸ್ಲಾಮಾಬಾದ್ ಟ್ರಾಫಿಕ್ ಪೋಲೀಸ್ ಪ್ರಕಾರ ಈ ಘಟನೆಯು 2024ರ ಜನವರಿ 1 ರಂದು ನಡೆದಿದೆ.

    ಜನರನ್ನು ಗೌರವಿಸಿ, ಅಸಂಬದ್ಧವಾಗಿ ಮಾತನಾಡಬೇಡಿ, ನೀವು ಬಹಳಷ್ಟು ವಿಷಯಗಳನ್ನು ಹೇಳಿದ್ದೀರಿ, ನಿಮ್ಮ ಸಮವಸ್ತ್ರಕ್ಕೆ ಗೌರವ ಕೊಟ್ಟಿದ್ದೇನೆ. ಬಾಯಿ ಮುಚ್ಚು ಎಂದು ಅಧಿಕಾರಿಗೆ ಆವಾಜ್​ ಹಾಕಿರುವ ಮಹಿಳೆ, ಇದುರಿಗೆ ನಿಂತಿದ್ದ ಗಸ್ತು ಅಧಿಕಾರಿ ಮುಹಮ್ಮದ್ ಸಬೀರ್ ಅವರನ್ನು ಪಕ್ಕಕ್ಕೆ ಸರಿಯುವಂತೆ ಕಿರುಚಾಡಿದ್ದಾಳೆ. ಆಗ ಸಬೀರ್ ನಿರಾಕರಿಸಿದಾಗ, ಮಹಿಳೆ ತನ್ನ ಕಾರನ್ನು ಪೊಲೀಸ್‌ಗೆ ಡಿಕ್ಕಿ ಹೊಡೆದು ಮುನ್ನುಗ್ಗಿಸಿದ್ದಾಳೆ. ಆಗ ಸಬೀರ್​ ಮೇಲಕ್ಕೆ ಹಾರಿ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದಾನೆ. ಬಳಿಕ ಆಕೆ ತಡೆಗೋಡೆಯ ಮೂಲಕ ಸ್ಥಳದಿಂದ ಓಡಿಹೋದಳು, ಪೊಲೀಸ್ ಗಾಯಗೊಂಡಿದ್ದಾನೆ.

    ಈ ಕ್ಲಿಪ್ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಚಾಲಕಿಯ ವರ್ತನೆ ಬಗ್ಗೆ ನೆಟಿಜನ್‌ಗಳು ತಮ್ಮ ವೇದನೆಯನ್ನು ವ್ಯಕ್ತಪಡಿಸಿದ್ದಾರೆ.

    ರಾವಲ್ಪಿಂಡಿ ಪೊಲೀಸರು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್​ ಮಾಡಿದ್ದು, ನಸೀರಾಬಾದ್ ಪೊಲೀಸರು ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿಯನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

    ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ಮೋದಿ, ರಾಹುಲ್​ಗೆ ಇಸಿ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts