More

    ಹೋಟೆಲ್​ಗಳಿಗೆ ಉಂಡೇನಾಮ ಹಾಕ್ತಿದ್ದ ಖತರ್​ನಾಕ್​ ದಂಪತಿ ಅರೆಸ್ಟ್​! ಊಟದ ಬಿಲ್ ಎಷ್ಟು ಲಕ್ಷ ಗೊತ್ತಾ?

    ಮ್ಯಾಡ್ರಿಡ್(ಸ್ಪೇನ್): ಅನ್ನದ ಋಣ ಭಾರದಲ್ಲಿ ಇರಬಾರದು ಎಂಬುದು ಭಾರತೀಯರ ನಂಬಿಕೆ. ಆದರೆ ಯುಕೆಯ ದಂಪತಿ ಸ್ಪ್ಯಾನಿಷ್ ಮತ್ತು ಇಟಾಲಿಯನ್ ರೆಸ್ಟೋರೆಂಟ್​ಗಳಲ್ಲಿ ಸಾವಿರಾರು ರೂ.ಬೆಲೆಯ ಊಟ ತಿಂದು ಬಿಲ್​ ಪಾವತಿಸದೆ ಪರಾರಿಯಾಗುತ್ತಿದ್ದುದು ಪತ್ತೆಯಾಗಿದ್ದು, ಇದೀಗ ಇವರನ್ನು ಪೊಲೀಸರು   ಬಂಧಿಸಿದ್ದಾರೆ.

    ಇದನ್ನೂ ಓದಿ: ‘ಲಂಚವಿಲ್ಲದೇ ಬಂಗಾಳದಲ್ಲಿ ಏನೂ ಆಗುವುದಿಲ್ಲ’: ಮಮತಾ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ವೇಲ್ಸ್ ನ ಪೋರ್ಟ್ ಟಾಲ್ಬೋಟ್ ನ ಸ್ಯಾಂಡ್‌ಫೀಲ್ಡ್‌ನ ಆನ್ ಮತ್ತು ಮೆಕ್‌ಡೊನಾಗ್ ದಂಪತಿ ಒಟ್ಟು ಐದು ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿ ಸೇವಿಸಿದ್ದರು. ಆದರೆ ಒಂದು ಕಡೆಯೂ ಬಿಲ್​ ಪಾವತಿಸಿರಲಿಲ್ಲ. ಒಟ್ಟು £ 1,000 (1,04,170.50 ರೂ.) ಮೌಲ್ಯದ ಊಟ, ತಿಂಡಿ ತಿಂದು ಯೋಜನೆಯಂತೆ ಪರಾರಿಯಾಗಿದ್ದರು.

    ರೆಸ್ಟೋರೆಂಟ್ ಮಾಲೀಕರು ಈ ದಂಪತಿಯ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು. ದಂಪತಿಗಳನ್ನು ಗುರುತಿಸಲು ಸಾರ್ವಜನಿಕರಿಗೆ ಸಹಾಯ ಮಾಡುವಂತೆ ಕೇಳಿಕೊಂಡರು.

    ವೇಲ್ಸ್‌ನ ವಿವಿಧ ರೆಸ್ಟೋರೆಂಟ್‌ಗಳಲ್ಲಿ ಊಟಕ್ಕಾಗಿ  $1,200 ಮೌಲ್ಯಕ್ಕೆ ಈ ದಂಪತಿ ಹೋಟೆಲ್​ ಕ್ಯಾಷರ್​ಗಳಿಗೆ ಉಂಡೆನಾಮ ಹಾಕಿಹೋಗಿದ್ದರು. ಹೋಟೆಲ್​ ಗಳಲ್ಲಿ ಊಟ ಮಾಡಿದ ನಂತರ ಬಿಲ್ ಪಾವತಿಸುವಾಗ ನಾಟಕವಾಡುತ್ತಿದ್ದರು. ಎಟಿಎಂ ಕಾರ್ಡ್​ ಕಾರ್​ನಲ್ಲಿದೆ, ಅದನ್ನು ತರುತ್ತೇವೆ, ಅಲ್ಲಿತನಕ ಮಗು ಇಲ್ಲೇ ಇರುತ್ತದೆ ಎನ್ನುತ್ತಿದ್ದರು.  ಆದರೆ ಅವರು ಕಾರ್​ನತ್ತ ಹೋದ ಬಳಿಕ ಅವರ ಮಗು ಸಹ ಅಲ್ಲಿಂದ ಹೊರಟುಹೋಗುತ್ತಿತ್ತು. ಕಡೆಗೆ ಮಗುವನ್ನು ಕಾರ್​ನಲ್ಲಿ ಕುಳಿಸಿಕೊಂಡು ಪರಾರಿಯಾಗುತ್ತಿದ್ದರು.

    ದಂಪತಿ ಪ್ರಸ್ತುತ ಪೊಲೀಸ್ ವಶದಲ್ಲಿದ್ದಾರೆ. ಅವರು ವಾಸಿಸುವ 30 ಮೈಲಿ ವ್ಯಾಪ್ತಿಯಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಅಪರಾಧ ಎಸಗಿರುವ ಕುರಿತು ಮುಂದಿನ ತಿಂಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದೆ. ಮೆಕ್‌ಡೊನಾಗ್ ಮೇಲೆ ನಾಲ್ಕು ಕಳ್ಳತನದ ಆರೋಪಗಳನ್ನು ಹೊರಿಸಲಾಗಿದೆ.

    ಈ ದಂಪತಿಯ ಭೋಜನ ಸವಿದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಜೋಡಿಯು ಅವರ ಕುಟುಂಬದ ಸದಸ್ಯರು ಎಂದು ಹೇಳಿಕೊಳ್ಳುವ ಇತರ ಜನರೊಂದಿಗೆ ಇದ್ದರು. ಕೆಲವು ಫ್ಯಾಮಿಲಿ ರೆಸ್ಟೊರೆಂಟ್‌ಗಳ ಪ್ರಕಾರ, ಇಬ್ಬರೂ ಪೂರ್ವಯೋಜಿತವಾಗಿ ಅದೇ ವಿಧಾನವನ್ನು ಅನುಸರಿಸುತ್ತಿದ್ದರು

    ಇಸ್ರೇಲ್ ವಿರೋಧಿ ಪ್ರತಿಭಟನೆ: ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts