More

    ಎಂ.ವಿ. ನಾಗೇಂದ್ರಬಾಬು ರಚನೆಯ ವ್ಯಂಗ್ಯ ಚಿತ್ರಗಳ ಪ್ರದರ್ಶನ

    ಮೈಸೂರು: ವ್ಯಂಗ್ಯ ಚಿತ್ರ ಬಿಡಿಸುವುದು ಒಂದು ಉತ್ತಮ ಕಲೆಯಾಗಿದ್ದು, ವ್ಯಂಗ್ಯಚಿತ್ರಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬಹುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.

    ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ವಿಶ್ವ ವ್ಯಂಗ್ಯ ಚಿತ್ರಕಾರರ ದಿನದ ಅಂಗವಾಗಿ ಆಯೋಜಿಸಿದ್ದ ಎಂ.ವಿ. ನಾಗೇಂದ್ರಬಾಬು ರಚನೆಯ ವ್ಯಂಗ್ಯ ಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

    ನರೇಂದ್ರಬಾಬು ಅವರು ಫುಲ್ ಬ್ರೈಟ್ ಸ್ಕಾಲರ್ ಪಡೆದ ಶ್ರೇಷ್ಠ ಕಲಾವಿದರು. ಪ್ರಸ್ತುತ ಅವರು ರಚಿಸಿರುವ ವ್ಯಂಗ್ಯಚಿತ್ರಗಳು ನೋಡುಗರ ಕಣ್ಮನವನ್ನು ಸೆಳೆಯುತ್ತವೆ. ಮನಸ್ಸಿಗೆ ಮುದ ನೀಡುವ, ಸಮಾಜ ತಿದ್ದುವ ಅತ್ಯಂತ ಸೂಕ್ಷ್ಮ್ಮಕಲೆ ವ್ಯಂಗ್ಯಚಿತ್ರ. ಇನ್ನಷ್ಟು ವ್ಯಂಗ್ಯ ಚಿತ್ರಗಳನ್ನು ರಚಿಸಿ ಪ್ರದರ್ಶಿಸಿ ಜನರಲ್ಲಿ ಎಲ್ಲ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts