More

    ಸಂಗೀತದಲ್ಲಿದೆ ಉತ್ಕೃಷ್ಟ ಮೌಲ್ಯ

    ಶೃಂಗೇರಿ: ಅನಾದಿಕಾಲದಿಂದಲೂ ಸಂಗೀತ ಪರಂಪರೆಯನ್ನು ಹಿರಿಯರು ಪರಿಶ್ರಮದಿಂದ ಬೆಳೆಸಿದ್ದಾರೆ. ಯಾವುದೇ ಪ್ರತಿಲಾಪೇಕ್ಷೆ ಇಲ್ಲದೆ ಅವರು ನೀಡಿಹೋದ ಉತ್ಕೃಷ್ಟ ಮೌಲ್ಯಗಳನ್ನು ಸರ್ವರೂ ಉಳಿಸಿ ಬೆಳೆಸಬೇಕಿದೆ ಎಂದು ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
    ಶ್ರೀಮಠದ ಶ್ರೀ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಭಾನುವಾರ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಜಗದ್ಗುರು ನಾದಾಭಿವಂದನಂ ಸಂಗೀತ ಸೇವೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಯಾವುದೇ ವಿದ್ಯೆಗೆ ಪರಿಪೂರ್ಣತೆ ದಕ್ಕಬೇಕಾದರೆ ಪರಿಶ್ರಮ ನಿರಂತರವಾಗಿರಬೇಕು. ಒಬ್ಬ ವಿದ್ವಾಂಸನ ಕಲಾ ಪರಿಶ್ರಮ ಮತ್ತೊಬ್ಬ ವಿದ್ವಾಂಸ ಮಾತ್ರ ಅರಿಯಲು ಸಾಧ್ಯ ಎಂದು ಶಾಸದಲ್ಲಿ ಉಲ್ಲೇಖವಿದೆ. ವಿದ್ಯೆಯೊಂದಿಗೆ ವಿನಯ ಇರಬೇಕು. ಆಗ ಮಾತ್ರ ಅಂತಹ ವ್ಯಕ್ತಿ ಪ್ರವರ್ಧಮಾನಕ್ಕೆ ಬರಲು ಸಾಧ್ಯ. ವಿದ್ಯೆ ಕಲಿತ ವಿದ್ವಾಂಸರಲ್ಲಿ ಅಹಂಕಾರ ಹತ್ತಿರಕ್ಕೂ ಸುಳಿಯಬಾರದು. ಅಹಂಕಾರ ಎಂಬುದು ವಿಷಕ್ಕೆ ಸಮಾನ. ಅಹಂ ಇದ್ದಲ್ಲಿ ಯಾವ ವಿದ್ವಾಂಸನೂ ಶ್ರೇಷ್ಠ ಸ್ಥಾನ ಗಳಿಸಲು ಸಾಧ್ಯವಿಲ್ಲ ಎಂದರು.
    ಜಗದ್ಗುರು ನಾದಾಭಿವಂದನಂನಲ್ಲಿ ಕಲಾವಿದರು ಪ್ರಸ್ತುತಪಡಿಸಿದ ಸಂಗೀತದ ಸ್ವರಲಿಪಿ ಪುಸ್ತಕವನ್ನು ಹಾಗೂ ಕಲಾವಿದ ಶಶಾಂಕ್ ಭಾರದ್ವಾಜ್ ರಚಿಸಿದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ತೈಲಚಿತ್ರವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ಆಡಳಿತಾಧಿಕಾರಿ ಪಿ.ಎ.ಮುರಳಿ, ವಿದ್ವಾಂಸರಾದ ಕೆ.ರಾಮಕುಮಾರ್, ತ್ಯಾಗರಾಜನ್, ತಾರಾನಾಥನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts