ಹೈದರಾಬಾದ್: ರೀ ಎಂಟ್ರಿ ನಂತರ ಪವರ್ ಸ್ಟಾರ್ ಪವನ್ ಕಲ್ಯಾಣ್ ಟಾಲಿವುಡ್ ನಲ್ಲಿ ಯಾವುದೇ ಸ್ಟಾರ್ ಹೀರೋಗಿಂತಲೂ ವೇಗದಲ್ಲಿ ಸಿನಿಮಾಗಳನ್ನು ಮುಗಿಸುತ್ತಿದ್ದಾರೆ. ಈಗ ಏಕಕಾಲಕ್ಕೆ ನಾಲ್ಕು ಪ್ರಾಜೆಕ್ಟ್ ಗಳನ್ನು ಮಾಡುತ್ತಿದ್ದು, ಒಂದೊಂದಾಗಿ ಪೂರ್ಣಗೊಳಿಸಲು ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಹಾವನ್ನು ನುಂಗಿದ ಗೂಬೆ! ಮೈಜುಂ ಎನಿಸುವ ವಿಡಿಯೋ ನೋಡಿ ನೆಟಿಜನ್ಸ್ ಶಾಕ್!
ಪವನ್ ಈಗ ಮಾಡುತ್ತಿರುವ ಚಿತ್ರಗಳಲ್ಲಿ ‘ಓಜಿ’ (ಒರಿಜಿನಲ್ ಗ್ಯಾಂಗ್‌ಸ್ಟರ್) ಕೂಡ ಒಂದು. ಪವನ್ ಅಭಿನಯದ ‘ಸಾಹೋ’ ಚಿತ್ರದ ಮೂಲಕ ವಿಶ್ವದ ಗಮನ ಸೆಳೆದ ನಿರ್ದೇಶಕ ಸುಜಿತ್ ನಿರ್ದೇಶನದಲ್ಲೇ ಒರಿಜಿನಲ್ ಗ್ಯಾಂಗ್‌ಸ್ಟರ್ ಮೂಡಿ ಬರುತ್ತಿದೆ. 1990ರ ದಶಕದಲ್ಲಿ ನಡೆಯುವ ಕಥಾ ಹಿನ್ನೆಲೆ ಈ ಸಿನಿಮಾಗಿದೆ. ಪೂರ್ಣ ಪ್ರಮಾಣದ ಆ್ಯಕ್ಷನ್‌ನೊಂದಿಗೆ ತಯಾರಾಗುತ್ತಿರುವ ‘ಓಜಿ’ ಚಿತ್ರದ ರೆಗ್ಯುಲರ್ ಶೂಟಿಂಗ್ ಕಳೆದ ವರ್ಷವೇ ಶುರುವಾಗಿತ್ತು. ಅಂದಿನಿಂದ ಅವರು ಯಾವುದೇ ವಿರಾಮವಿಲ್ಲದೆ ಸತತ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ.
ಸದ್ಯಕ್ಕೆ ಈ ಸಿನಿಮಾದ ಶೇಕಡ ಐವತ್ತರಷ್ಟು ಟಾಕಿ ಭಾಗ ಮುಗಿದಿದೆ. ಉಳಿದದ್ದು ಶೀಘ್ರದಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಪವರ್ ಫುಲ್ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ‘ಓಜಿ’ ಸಿನಿಮಾ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ತಯಾರಾಗುತ್ತಿದೆ. ಹಾಗಾಗಿಯೇ ಹಲವು ಪ್ರತಿಭಾವಂತ ನಟರು ಇದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೆಲವರ ಹೆಸರನ್ನು ಚಿತ್ರತಂಡ ಪ್ರಕಟಿಸಿದೆ.
ಇದೇ ಹಿನ್ನೆಲೆಯಲ್ಲಿ ಹಿರಿಯ ನಾಯಕಿ ಟಬು ಅವರನ್ನು ಈ ಚಿತ್ರದ ಪ್ರಮುಖ ಪಾತ್ರಕ್ಕೆ ಸಂಪರ್ಕಿಸಿದಾಗ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನೆಗೆಟಿವ್ ಶೇಡ್ ಇರುವ ಆ್ಯಕ್ಷನ್ ಪಾತ್ರ ಇದಾಗಿರುವುದರಿಂದ ವೈಯಕ್ತಿಕ ಕಾರಣ ನೀಡಿ ಟಬು ಅದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಪವನ್ ಸಿನಿಮಾ ಆಫರ್ ಅನ್ನು ಟಬು ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿ ಇದೀಗ ಹಾಟ್ ಟಾಪಿಕ್ ಆಗುತ್ತಿದೆ.
ಆರ್‌ಆರ್‌ಆರ್ ನಿರ್ಮಾಪಕ ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ದಾನಯ್ಯ ಅದ್ಧೂರಿ ಬಜೆಟ್‌ನಲ್ಲಿ ‘ಒಜಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ನಾಯಕಿಯಾಗಿ ಪ್ರಿಯಾಕಾ ಅರುಳ್ ಮೋಹನ್ ನಟಿಸುತ್ತಿದ್ದಾರೆ. ಅಲ್ಲದೆ, ಅರ್ಜುನ್ ದಾಸ್, ಪ್ರಕಾಶ್ ರಾಜ್, ಇಮ್ರಾನ್ ಹಶ್ಮಿ, ಶ್ರೀಯಾ ರೆಡ್ಡಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಸ್ ಥಮನ್ ಇದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.‘
ಗಂಗಾ ಆರತಿ ಮಾಡಿದ ಜಾಹ್ನವಿ ಕಪೂರ್ಗೆ ರಾಜ್‌ಕುಮಾರ್ ರಾವ್ ಸಾಥ್! ಕಾರಣ ಹೀಗಿದೆ..