ಕಾರ್ಮಿಕರಿಗೆ ಸೌಲಭ್ಯದ ಅರಿವು ಮೂಡಿಸಿ

1 Min Read
sri workers
ಶೃಂಗೇರಿಯಲ್ಲಿ ಆಯೋಜಿಸಿದ್ದ ಕಾರ್ಮಿಕರ ಸ್ನೇಹ ಸಮಾಗಮ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕರನ್ನು ಗೌರವಿಸಲಾಯಿತು. ಪ್ರವೀಣ್ ಪೂಜಾರಿ, ಭಾಸ್ಕರ್, ರಾಜೇಶ್ ಇತರರಿದ್ದರು.

ಶೃಂಗೇರಿ: ಕಾರ್ಮಿಕರು ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸಂಘದ ಬೆಳವಣಿಗೆ ಸಾಧ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಎಂ.ಅರುಣ್‌ಕುಮಾರ್ ಹೇಳಿದರು.
ಕನ್ನಡ ಭವನದಲ್ಲಿ ಸೋಮವಾರ ತಾಲೂಕು ಕಾರ್ಮಿಕರ ಮಿತ್ರ ಬಳಗ ಆಯೋಜಿಸಿದ್ದ ಕಾರ್ಮಿಕರ ಸ್ನೇಹ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಇಲಾಖೆಗಳಿಗಿಂತ ಕಾರ್ಮಿಕ ಇಲಾಖೆಗೆ ಸರ್ಕಾರದಿಂದ ಹೆಚ್ಚು ಅನುದಾನ ಸಿಗುತ್ತದೆ. ಕಾರ್ಮಿಕರ ಕಲ್ಯಾಣ ನಿಧಿಯಿಂದ ಸಾಕಷ್ಟು ಸವಲತ್ತುಗಳಿವೆೆ. ಸೌಲಭ್ಯದ ಕುರಿತು ಪ್ರತಿ ಕಾರ್ಮಿಕರಿಗೆ ಅರಿವು ಮೂಡಿಸಬೇಕು. ಇಲಾಖೆಗೆ ತಮ್ಮ ಹೆಸರನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ನೋಂದಣಿ ಮಾಡಿಸಿಕೊಂಡು ಕುಟುಂಬ ವರ್ಗಕ್ಕೆ ಸಿಗುವ ಸೌಲಭ್ಯ ಪಡೆಯಬೇಕು. ಸಂಘಟನೆಯಲ್ಲಿ ಪ್ರತಿಲಾಪೆೇಕ್ಷೆ ಇಲ್ಲದೆ ದುಡಿದಾಗ ಮಾತ್ರ ಸಮಾಜದಲ್ಲಿ ಗೌರವ ನಿರೀಕ್ಷಿಸಲು ಸಾಧ್ಯ ಎಂದರು.
ಹಿರಿಯ ಕಾರ್ಮಿಕರನ್ನು ಗೌರವಿಸಿ ಜಿಪಂ ಮಾಜಿ ಅಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ, ಕಾರ್ಮಿಕ ವರ್ಗ ಬದ್ಧತೆಯಿಂದ ದುಡಿದು ಹಂತ ಹಂತವಾಗಿ ಯಶಸ್ಸು ಗಳಿಸಬೇಕು. ಯಾರು ಇತಿಹಾಸ ಅರಿತುಕೊಳ್ಳಲು ಸಾಧ್ಯವಿಲ್ಲವೋ ಅಂತಹವರು ಇತಿಹಾಸ ಸೃಷ್ಟಿಸುವುದು ಅಸಾಧ್ಯ ಎಂದು ಡಾ. ಬಿ.ಆರ್.ಅಂಬೇಡ್ಕರ್ ತಿಳಿಸಿದ್ದಾರೆ. ದುಡಿಮೆಯ ಜತೆಗೆ ಸೃಜನಶೀಲತೆಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆ ಮೂಲಕ ಗುರುತಿಸಿಕೊಂಡಾಗ ಮಾತ್ರ ಕಾರ್ಮಿಕ ವರ್ಗದವರ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು. ಹಿರಿಯ ಕಾರ್ಮಿಕರಾದ ಶೇಖಬ್ಬ, ಬಾಬುಲಿ ಡಿಸೋಜಾ, ಸುಧಾಕರ್ ಅವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ ಕಾರ್ಯಕ್ರಮ ಉದ್ಘಾಟಿಸಿದರು. ರಮೇಶ್ ಶೂನ್ಯ, ಕಾರ್ಮಿಕ ಮಿತ್ರ ಬಳಗದ ಪದಾಧಿಕಾರಿಗಳಾದ ಕೆ.ಎಸ್.ಮಂಜುನಾಥ್, ಆನಂದ್ ಕಾಮ್ಲೆಗುಡ್ಡ, ತಾಪಂ ಮಾಜಿ ಸದಸ್ಯ ಕೆ.ಎಸ್.ರಮೇಶ್, ಜೆಸಿಐ ಅಧ್ಯಕ್ಷ ಎಚ್.ಜಿ.ರಾಘವೇಂದ್ರ, ಪತ್ರಿಕಾ ವಿತರಕರ ಸಂಘದ ಕಾರ್ಯದರ್ಶಿ ಆನಂದಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಇತರರಿದ್ದರು.

See also  ಯಕ್ಷಗಾನ ಪರಂಪರೆಯ ಮೌಲ್ಯಮಾಪನ ಅಸಾಧ್ಯ
Share This Article