More

  ವಿಜೃಂಭಣೆಯ ಶ್ರೀ ಶಂಕರಭಗವತ್ಪಾದರ ರಥೋತ್ಸವ

  ಶೃಂಗೇರಿ: ವೈಶಾಖ ಶುಕ್ಲ ಷಷ್ಠಿ ದಿನವಾದ ಸೋಮವಾರ ಶ್ರೀ ಶಂಕರ ಜಯಂತಿ ಪ್ರಯುಕ್ತ ಶೃಂಗೇರಿ ಶ್ರೀಮಠದ ಶ್ರೀ ಶಂಕರಭಗವತ್ಪಾದರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶ್ರೀ ಶಂಕರಾಚಾರ್ಯರ ರಥೋತ್ಸವದ ಪೂರ್ವಭಾವಿಯಾಗಿ ಉತ್ಸವಮೂರ್ತಿಯನ್ನು ವಿವಿಧ ಪುಷ್ಪಾಗಳಿಂದ ಅಲಂಕರಿಸಿ ಉಭಯ ಶ್ರೀಗಳ ಸನ್ನಿಧಿಯಲ್ಲಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
  ಶ್ರೀ ಶಂಕರಾಚಾರ್ಯರ ದೇವಾಲಯದಿಂದ ಹೊರಟ ಉತ್ಸಮೂರ್ತಿಯನ್ನು ಜಗದ್ಗುರು ಶ್ರೀವಿಧುಶೇಖರಭಾರತೀ ಅವರ ಸಾನ್ನಿಧ್ಯದಲ್ಲಿ ಸಾಲಂಕೃತಗೊಂಡ ರಥದಲ್ಲಿ ಬಳಿಗೆ ತಂದು ಧಾರ್ಮಿಕ ವಿಧಾಗಳನ್ನು ನೆರವೇರಿಸಲಾಯಿತು. ಶ್ರೀ ಮಠದ ಪುರೋಹಿತರು, ಪಟ್ಟಣದ ನಾಗರಿಕರು ರಥದ ಬಳಿಗೆ ಬಂದು ತೆಂಗಿನಕಾಯಿ ಒಡೆದು ಉತ್ಸವ ಸಾಂಗವಾಗಿ ನೆರವೇರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
  ಮುಖ್ಯ ಬೀದಿಯಲ್ಲಿ ಸಾಗಿ ಬಂದ ರಥೋತ್ಸವದಲ್ಲಿ ವೇದ-ವಾದ್ಯ ಘೋಷಗಳು,ಶ್ರೀ ಮಠದ ಆಶ್ವಗಳು,ಆನೆಗಳು,ಛತ್ರಿಚಾಮರಗಳು, ರಂಗವಲ್ಲಿ ಚಿತ್ತಾರಗಳು ಉತ್ಸವದ ಮೆರುಗನ್ನು ಹೆಚ್ಚಿಸಿದವು. ಯತಿವರ್ಯರಿಗೆ ಪಟ್ಟಣದ ನಿವಾಸಿಗಳು ಹಣ್ಣುಹಂಪಲು ಸಮರ್ಪಿಸಿ ಶ್ರದ್ಧಾಭಕ್ತಿ ಮೆರೆದರು. ನಾನಾ ಪ್ರಾಂತ್ಯಗಳಿಂದ ಆಗಮಿಸಿದ ವಿದ್ವಾಂಸರು,ಸದ್ಭಕ್ತರು ರಥವನ್ನು ಎಳೆದು ಶ್ರೀಭಗವತ್ಪಾದರಿಗೆ ಜಯಘೋಷ ಕೂಗಿದರು.
  ಸಂಜೆ ಯತಿವರ್ಯರ ಅಧ್ಯಕ್ಷತೆಯಲ್ಲಿ ಸಭೆ, ಪ್ರಾಸ್ತಾವಿಕ ನುಡಿಗಳು. ಭಗವತ್ಪಾದರಮೂರ್ತಿಗೆ ಮಹಾಮಂಗಳಾರತಿ,ಅಷ್ಟಾವಧಾನಸೇವೆ, ವೇದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ, ವಿದ್ವಾಂಸರಿಗೆ ಸನ್ಮಾನ ನೆರವೇರಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts