More

  ಅಬೀಬುಲ್ಲ ಶಾ ಖಾದ್ರಿ ದರ್ಗಾದಿಂದ ಉರುಸ್ ಮೆರವಣಿಗೆ

  ಬೇಲೂರು: ತಾಲೂಕಿನ ಗೆಂಡೇಹಳ್ಳಿ ಸಮೀಪದ ಗೋರಿಮಠ ಗ್ರಾಮದ ಅಬೀಬುಲ್ಲ ಶಾ ಖಾದ್ರಿ ದರ್ಗಾದಲ್ಲಿ ಸೌಹಾರ್ದಯುತ ಉರುಸ್ ಆಚರಣೆ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

  ಗೋರಿಮಠದ ಅಬೀಬುಲ್ಲ ಶಾ ಖಾದ್ರಿ ದರ್ಗಾದ ಅಧ್ಯಕ್ಷ ಅಬ್ದುಲ್ ಸುಭಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಗೋರಿಮಠ ಸುತ್ತಮುತ್ತಲಿನ ಗ್ರಾಮಸ್ಥರು ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಮಾತನಾಡಿ, ವಿವಿಧ ಜಾತಿ ಧರ್ಮದವರು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

  ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರೇಮ್‌ಕುಮಾರ್, ಮುಖಂಡ ಮಹೇಶ್, ಶ್ರೀನಿವಾಸ್, ವಿಜಯಕುಮಾರ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts