More

    ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೇ 14 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

    ಇದನ್ನೂ ಓದಿ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಬಂಧನದ ಬಳಿಕ ಎಚ್​.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ

    ಭಾನುವಾರ ಈ ವಿಷಯ ತಿಳಿಸಿದ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ, ಮೇ 13 ಸೋಮವಾರ ಮೋದಿ ಅವರು ಕ್ಷೇತ್ರದಲ್ಲಿ ಬೃಹತ್ ರೋಡ್‌ಶೋ ನಡೆಸಲಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆರುವುದಾಗಿ ತಿಳಿಸಿದರು.

    “ರೋಡ್‌ಶೋಗೆ ಮಾರ್ಗವನ್ನು ಅಂತಿಮಗೊಳಿಸಲಾಗಿದೆ, ಮೇ 14 ರಂದು ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ವಾರಣಾಸಿ ಕ್ಷೇತ್ರದ ಮತದಾನ ಜೂನ್​ 1 ರಂದು ನಡೆಯಲಿದೆ. ಇಲ್ಲಿ ಮೇ 7 ರಂದು ಆರಂಭಗೊಳ್ಳಲಿದ್ದು ಮೇ 14 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಕಾಂಗ್ರೆಸ್​ ಪಕ್ಷವು ಇಲ್ಲಿ ತನ್ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರಾವ್ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್​ಪಿಯ ಅತ್ತರ್​ ಜಮಾಲ್ ಅವರು ಚುನಾವಣಾ ಕಣದಲ್ಲಿದ್ದಾರೆ. ಪ್ರಧಾನಿ ಮೋದಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು.

    ಮುಸ್ಲಿಂರನ್ನು ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಂಡಿದೆ: ರಾಜನಾಥ್ ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts