More

  ಮತ ಹಾಕಲು ಬಂದ ಗರ್ಭಿಣಿ ದೀಪಿಕಾ ಪಡುಕೋಣೆ; ಬೇಬಿ ಬಂಪ್‌ ವಿಡಿಯೋ ವೈರಲ್

  ಮುಂಬೈ: ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಜನಸಾಮಾನ್ಯರ ಜತೆಗೆ ಹಲವು ಗಣ್ಯರು ಮತದಾನದ ಹಕ್ಕನ್ನು ಚಲಾಯಿಸಿದರು. ಬಾಲಿವುಡ್ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಮುಂಬೈನ ಮತದಾನ ಕೇಂದ್ರಕ್ಕೆ ಬಂದಿದ್ದರು.

  ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ, ದೀಪಿಕಾ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡರು. ಈ ವಿಡಿಯೋಗಳು ಸಖತ್​ ವೈರಲ್​ ಆಗಿವೆ. ಪ್ರೆಗ್ನೆಂಟ್​​ ಎಂದು ದಂಪತಿ ಘೋಷಿಸಿದ ನಂತರ ದೀಪಿಕಾ ಸಿನಿಮಾ ಶೂಟಿಂಗ್​, ಕಾರ್ಯಕ್ರಮ ಎಂದು ಭಾಗಿಯಾಗುತ್ತಿದ್ದರು. ಹೀಗಾಗಿ ದೀಪಿಕಾ ನಿಜ್ವಾಗಲೂ ಗರ್ಭಿಣಿನಾ ಎಂದು ಫ್ಯಾನ್ಸ್​​ ಪ್ರಶ್ನೆ ಮಾಡುತ್ತಿದ್ದರು. ಇದೆ ಮೊದಲ ಬಾರಿಗೆ ದೀಪಿಕಾ ಅವರ ಬೇಬಿ ಬಂಪ್​​ ನೊಂದಿಗೆ ಕಾಣಿಸಿಕೊಂಡಿದ್ದಾರೆ.

  ನಟ ರಣವೀರ್ ಸಿಂಗ್, ದೀಪಿಕಾ ಅವರು ಕಾರಿನಿಂದ ಇಳಿದು ಮತ ಚಲಾಯಿಸಲು ಮತಗಟ್ಟೆಗೆ ಹೋಗುತ್ತಿದ್ದಂತೆ ಆಕೆಯ ಕೈ ಹಿಡಿದು ಎಚ್ಚರಿಕೆಯಿಂದ ಕರೆದೊಯ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018 ರಲ್ಲಿ ವಿವಾಹವಾದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ.

  ಪ್ರತಿಷ್ಠಿತ ಚಿತ್ರ ಕಲ್ಕಿ 2898ಎಡಿಯಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಪ್ರಭಾಸ್ ನಾಯಕನಾಗಿದ್ದು, ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಚಿತ್ರವು ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಚಟುವಟಿಕೆಗಳನ್ನು ನಡೆಸುತ್ತಿದೆ. 2024 ಜೂನ್ 27ರಂದು ಸಿನಿಮಾ ತೆರೆಗೆ ಬರಲಿದೆ.

  ಗಂಡು ಮಗುವಿಗೆ ಜನ್ಮ ಕೊಟ್ಟ ‘ಉಲ್ಲಾಸ ಉತ್ಸಾಹ’ ನಟಿ ಯಾಮಿ ಗೌತಮ್; ಕಂದಮ್ಮನಿಗೆ ಇಟ್ಟ ಹೆಸರೇನು ಗೊತ್ತಾ?

  ದೇಶದಲ್ಲಿ ಎಲ್ಲೇ ವಿಶ್ವಕಪ್ ನಡೆದ್ರೂ ಗಾನ ಕೋಗಿಲೆಗೆ ಸಿಗ್ತಿತ್ತು ಉಚಿತ ಟಿಕೆಟ್! BCCI ಈ ನಿರ್ಧಾರದ ಹಿಂದೆ ಇದೆ ಕಾರಣ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts