More

  ಮೇ 25ರಿಂದ ಸರಯೂ ಸಪ್ತಾಹ : ಕದ್ರಿ ದೇವಳದ ರಾಜಾಂಗಣದಲ್ಲಿ ಯಕ್ಷಗಾನ ಪ್ರದರ್ಶನ
  ಮಂಗಳೂರು: ಸರಯೂ ಬಾಲ ಯಕ್ಷ ವೃಂದ ಕೋಡಿಕಲ್ ಇದರ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ಮೇ 25ರಿಂದ 31ರವರೆಗೆ ನಗರದ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ 24ನೇ ವರ್ಷದ ಸರಯೂ ಸಪ್ತಾಹ-2024 ಕಾರ್ಯಕ್ರಮ ನಡೆಯಲಿದೆ.
  ಸಪ್ತಾಹದ ಅಂಗವಾಗಿ ಬಯಲಾಟ, ಮಹಿಳಾ ತಾಳಮದ್ದಳೆ, ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದೆ. ಮೇ 25ರಂದು ಮಧ್ಯಾಹ್ನ 2.30ರಿಂದ ಶ್ರೀದೇವಿ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಾಯಂಕಾಲ 5ಕ್ಕೆ ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸರಯೂ ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಮೇ 26ರಂದು ಬೆಳಗ್ಗೆ 9ರಿಂದ ಮಹಿಳಾ ತಾಳಮದ್ದಳೆ ಸಂಭ್ರಮ ಹಾಗೂ ಸಾಯಂಕಾಲ 5.30ರಿಂದ ಗುರುದಕ್ಷಿಣೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. 27ರಂದು ವೀರ ಶತಕಂಠ, 28ರಂದು ರತಿ ಕಲ್ಯಾಣ, 29ರಂದು ರಾಜಾ ಸೌದಾಸ, 30ರಂದು ತುಳುನಾಡ ಬಲಿಯೇಂದ್ರೆ (ತುಳು), 31ರಂದು ಜಾಂಬವತಿ ಕಲ್ಯಾಣ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಸಾಯಂಕಾಲ 5.30ಕ್ಕೆ ಯಕ್ಷಗಾನ ಪ್ರದರ್ಶನ ಆರಂಭವಾಗಲಿದ್ದು, ಸರಯೂ ಕಲಾವಿದರ ಜತೆಗೆ ಪ್ರಸಿದ್ಧ ಕಲಾವಿದರು ಹಿಮ್ಮೇಳ-ಮುಮ್ಮೇಳದಲ್ಲಿ
  ಭಾಗವಹಿಸಲಿದ್ದಾರೆ. ಸಪ್ತಾಹದಲ್ಲಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಪೂವಪ್ಪ ಶೆಟ್ಟಿ ಅಳಿಕೆ, ಅರುಣ್‌ಕುಮಾರ್, ದೇವಿಪ್ರಕಾಶ್ ರಾವ್ ಕಟೀಲು, ಮಹಾಬಲೇಶ್ವರ ಭಟ್ ಭಾಗಮಂಡಲ, ಪ್ರಶಾಂತ್ ಕೋಳ್ಯೂರು, ಕೆರೆಮನೆ ನರಸಿಂಹ ಹೆಗಡೆ, ಕಥಾ ಸಂಗ್ರಹಕಾರ ಮಧುಕರ ಭಾಗವತ್ ಹಾಗೂ ವಿ.ಟಿ. ರೋಡ್‌ನ ಚೇತನಾ ಬಾಲವಿಕಾಸ ಕೇಂದ್ರವನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
  ಸಂಸ್ಥೆಯ ಗೌರವ ಸಂಚಾಲಕ ಡಾ. ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ, ವರ್ಕಾಡಿ ಮಾಧವ ನಾವಡ, ಸರಯೂ ಮಹಿಳಾ ತಂಡದ ಅಧ್ಯಕ್ಷೆ ವಿಜಯಲಕ್ಷ್ಮಿ ಎಲ್.ಎನ್., ಪ್ರಮೋದ್, ಸೌಮ್ಯ ಪುರುಷೋತ್ತಮ್ ಉಪಸ್ಥಿತರಿದ್ದರು.
  ……………………………..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts