More

    “ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಅಂದ್ರೆ?” ಬಿಗ್‌ಬಾಸ್ ಪ್ರಿಯಾಂಕಾ ಸಿಂಗ್ ಕಾಮೆಂಟ್ಸ್ ವೈರಲ್

    ಹೈದರಾಬಾದ್​: ತೆಲುಗು ಬಿಗ್‌ಬಾಸ್ ಸೀಸನ್‌ 5ರಲ್ಲಿ ಭಾಗವಹಿಸಿದ್ದ ತೃತೀಯ ಲಿಂಗಿ ಪ್ರಿಯಾಂಕಾ ಸಿಂಗ್ ಸೌಂದರ್ಯ ಯಾವ ಹುಡುಗಿಯರಿಗಿಂತ ಕಮ್ಮಿ ಇಲ್ಲ. 13 ವಾರ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡು ವೀಕ್ಷಕರ ಮನಗೆದ್ದಿದ್ದರು. ತೆಲುಗು ಕಿರುತೆರೆ ವೀಕ್ಷಕರಿಗೆ ಪ್ರಿಯಾಂಕಾ ಚೆನ್ನಾಗಿ ಗೊತ್ತು. ಜಬರ್ದಸ್ತ್ ಕಾಮಿಡಿ ಶೋನಲ್ಲಿ ಸಾಯಿ ತೇಜ ಆಗಿ ಗಮನ ಸೆಳೆದಿದ್ದರು.

    ಇದನ್ನೂ ಓದಿ: ‘ನನ್ನ ಹಿಂಭಾಗವನ್ನೇ ಯಾಕೆ ತೋರಿಸ್ತೀರಿ?’: ಖ್ಯಾತ ನಟಿ ಹೀಗೆನ್ನಲು ಕಾರಣವಿದೆ ನೋಡಿ..

    ಶೋನಲ್ಲಿ ಲೇಡಿ ಗೆಟಪ್‌ಗಳನ್ನು ಹಾಕಿ ರಂಜಿಸುತ್ತಿದ್ದ ಪ್ರಿಯಾಂಕಾ ಬಳಿಕ ದಿಢೀರ್ ನಾಪತ್ತೆ ಆಗಿದ್ದರು. ಅದೇ ಸಮಯದಲ್ಲಿ ಸಾಯಿ ತೇಜ, ಪ್ರಿಯಾಂಕ ಸಿಂಗ್ ಆಗಿ ಬದಲಾಗಿದ್ದರು. ಶ್ರೀದೇವಿ ರೀತಿ ಮಿಂಚಬೇಕು ಎನ್ನುವ ಆಸೆ ನನಗೆ ಎಂದಿದ್ದ ಸಾಯಿ ತೇಜ ಲಿಂಗ ಬದಲಾವಣೆ ಸರ್ಜರಿ ಮೂಲಕ ಪ್ರಿಯಾಂಕ ಸಿಂಗ್ ಆಗಿದ್ದರು. ಬಿಗ್‌ಬಾಸ್ ಶೋನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.

    ಸರ್ಜರಿ ಬಳಿಕ ಮಾನಸಿಕ, ಆರ್ಥಿಕವಾಗಿ ಪ್ರಿಯಾಂಕ ಸಿಂಗ್ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಯಾವುದೇ ಅವಕಾಶಗಳಿಲ್ಲದೇ ಖಾಲಿ ಕೂರುವಂತಾಗಿತ್ತು. ಅದೇ ಸಮಯದಲ್ಲಿ ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಆಕೆಗೆ ಜನಪ್ರಿಯತೆ ಶುರುವಾಯಿತು.

    ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪ್ರಿಯಾಂಕ ಸಿಂಗ್ ಫೋಟೊಗಳು ಸಖತ್ ವೈರಲ್ ಆಗುತ್ತವೆ. ಅವರು ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಒಂದು ಯೂಟ್ಯೂಬ್‌ ಚಾನಲ್ ಕೂಡ ಇದೆ. ಇತ್ತೀಚೆಗೆ ಅವರು ಇನ್‌ಸ್ಟಾ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ್ದರು. ಸಾಕಷ್ಟು ಜನ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಒಬ್ಬನ ಪ್ರಶ್ನೆ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

    ಸ್ಕ್ರೀನ್‌ಶಾಟ್ ಸಮೇತ ಪ್ರಿಯಾಂಕಾ ಅದಕ್ಕೆ ತಿರುಗೇಟು ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ ‘ನೀನು ನನ್ನೊಂದಿಗೆ ಡೇಟಿಂಗ್ ಮಾಡುತ್ತೀಯಾ? ಒಂದು ರಾತ್ರಿಗೆ ಎಷ್ಟು ತಗೋತಿಯಾ? ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಪ್ರಿಯಾಂಕ ಸಿಂಗ್ ಕೆಂಡಾಮಂಡಲವಾಗಿದ್ದಾರೆ.

    ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ, “ಒಂದು ಕೆಲಸ ಮಾಡು, ನಿಮ್ಮ ತಂದೆಯು ನಿಮ್ಮ ತಾಯಿಯ ಜೊತೆ ಆ ಕೆಲಸ ಮಾಡಲು ಎಷ್ಟು ತೆಗೆದುಕೊಂಡರೋ ಕೇಳಿ ತಿಳಿದುಕೊಂಡು ಅಷ್ಟು ನನಗೆ ಕೊಡು” ಎಂದು ಖಾರವಾಗಿ ರಿಪ್ಲೇ ಮಾಡಿದ್ದಾರೆ.

    ಇದನ್ನು ಕೇಳಿ ಆತ ಶಾಕ್ ಆಗಿದ್ದು, ಪ್ರಿಯಾಂಕ ಸಿಂಗ್ ಕಾಮೆಂಟ್ ಹಾಗೂ ಅದಕ್ಕೆ ಸಂಬಂಧಿಸಿ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ.

    ಪ್ರಿಯಾಂಕ ಸಿಂಗ್ ಸದ್ಯ ತೆಲುಗು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 3 ತಿಂಗಳ ಹಿಂದೆಯಷ್ಟೆ ಒಂದು ಕಾರು ಖರೀದಿಸಿದ್ದರು. 13 ವರ್ಷದ ಕನಸು, ನನ್ನ ಪರಿಶ್ರಮದಿಂದ ಈ ಕಾರು ಖರೀದಿಸಿದ್ದೀನಿ. 150 ರೂ. ಇಟ್ಟುಕೊಂಡು ಮೊದಲು ಹೈದರಾಬಾದ್‌ಗೆ ನಾನು ಬಂದ ದಿನ ನನಗಿನ್ನು ನೆನಪಿದೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts