More

    ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿಲ್ಲ! ಬದಲಿಗೆ ಹಾರು ಅಂತ ಹಾರಿಸಿದ್ದಾರೆ: ತೇಜಸ್ವಿನಿ ರಮೇಶ್

    ಬಾಗಲಕೋಟೆ: ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ಹಾಸನ ಸಂಸದ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣ, ಇದೀಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಈ ಮಧ್ಯೆ ಕಾಂಗ್ರೆಸ್​ ನಾಯಕರು ರಾಜ್ಯ ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಜ್ವಲ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಗಾರೆ ಕೆಲಸ ಮಾಡುತ್ತಿದ್ದ ಮೇಸ್ತ್ರಿಗೆ ಲಾಟರಿಯಲ್ಲಿ 360 ಕೋಟಿ ರೂ. ಜಾಕ್ ಪಾಟ್!

    ಪ್ರಜ್ವಲ್ ರೇವಣ್ಣಗೆ ತಕ್ಕ ಶಿಕ್ಷೆ ಆಗಬೇಕು. ಈತನ ಕೆಲಸದಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ಈಗ ನೋಡಿದ್ರೆ, ಎಲ್ಲಾ ಬಟಾಬಯಲಾಗುತ್ತಿದ್ದಂತೆ ವಿದೇಶಕ್ಕೆ ಹಾರಿ ಕುಳಿತ್ತಿದ್ದಾನೆ ಎಂದು ಕೈ ನಾಯಕರು ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಬಾಗಲಕೋಟೆಗೆ ಆಗಮಿಸಿದ ತೇಜಸ್ವಿನಿ ರಮೇಶ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

    ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿಲ್ಲ. ಈಗ ಚುನಾವಣೆ ಇದೆ ಅಲ್ವಾ, ಹಾಗಾಗಿ ಹಾರು, ಹಾರು ಅಂತ ಹಾರಿಸಿದ್ದಾರೆ ಎಂದು ಮೈತ್ರಿ ವಿರುದ್ದ ತೇಜಸ್ವಿನಿ ರಮೇಶ್ ಆರೋಪಿಸಿದ್ದಾರೆ. ಜೆಡಿಎಸ್ ಎಂಪಿ ಈ ರೀತಿ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ, ಜೆಡಿಎಸ್ ಜತೆ ಬಿಜೆಪಿ ಅಲೈಯನ್ಸ್ ಆಗಿದೆ. ಅಕಸ್ಮಾತ್ ಇದೇ ಪ್ರಕರಣ ಕಾಂಗ್ರೆಸ್ ಎಂಪಿ ಯಾರಾದ್ರೂ ಮಾಡಿದ್ರೆ ಬಿಜೆಪಿಯವರು, ಜೆಡಿಎಸ್​ನವರು ಏನ್ ಮಾತಾಡ್ತಿದ್ರು? ಊಹೆ ಮಾಡಿಕೊಳ್ಳಿ ಎಂದು ರಾಮಲಿಂಗಾರೆಡ್ಡಿ ಹೇಳಿದರು.

    ಇದನ್ನೂ ಓದಿ: ಅಮೆರಿಕದಲ್ಲಿ ನಡೆಯುವ ವಿಶ್ವಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನ: ಗ್ರಾಮ ಪಂಚಾಯಿತಿ ಸದಸ್ಯೆಗೆ ಒಲಿದ ಗೌರವ

    ಈಗ ಯಾಕೆ ಬಿಜೆಪಿಯವರು ಬಾಯಿ ಬಿಡ್ತಿಲ್ಲ ಎಂದು ಪ್ರಶ್ನಿಸಿದ ಸಚಿವ ರಾಮಲಿಂಗಾರೆಡ್ಡಿ, ನನಗೆ ಈ ಪ್ರಕರಣ ಡಿಟೈಲ್ ಆಗಿ ಗೊತ್ತಿಲ್ಲ. ಪತ್ರಿಕೆಗಳಲ್ಲಿ ನಾನು ನೋಡಿದ್ದೀನಿ, ನಮ್ಮ ಸರ್ಕಾರ ಈಗಾಗಲೇ ಎಸ್ಐಟಿ ತನಿಖೆಗೆ ಆದೇಶಿಸಿದೆ. ತಪ್ಪು ಯಾರೇ ಮಾಡಿದ್ರು ಅದು ತಪ್ಪು! ಸತ್ಯಾಸತ್ಯತೆ ಎಸ್ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದರು.

    ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

    ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts