More

    ಬರ ಪರಿಹಾರಕ್ಕೆ ಕತ್ತರಿ, ರೈತರಿಗೆ ಜೋಡಿ ಆಘಾತ

    ಕೇಶವಮೂರ್ತಿ ವಿ.ಬಿ. ಹಾವೇರಿ
    ಕೇಂದ್ರ ಸರ್ಕಾರದ ಬರ ಪರಿಹಾರ ಹಣ ಬಂತಲ್ಲ ಎಂದು ಖುಷಿಯಲ್ಲಿದ್ದ ರಾಜ್ಯದ ರೈತರಿಗೆ ಜೋಡಿ ಆಘಾತ ತಟ್ಟಿದೆ. ಕೇಂದ್ರದ ಪರಿಹಾರ ವಿಳಂಬವಾಗಿದ್ದ ಕಾರಣಕ್ಕೆ ರಾಜ್ಯ ಸರ್ಕಾರ 2 ಸಾವಿರ ರೂ.ಗಳನ್ನು ಮಧ್ಯಂತರ ಪರಿಹಾರವಾಗಿ ಫಲಾನುಭವಿಗಳಿಗೆ ನೀಡಿತ್ತು. ಇದೀಗ ಆ ಹಣವನ್ನು ಕೇಂದ್ರದ ಪರಿಹಾರದಲ್ಲಿ ಕಡಿತ ಮಾಡಿಕೊಳ್ಳುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಬ್ಯಾಂಕ್​ಗಳು ಸಾಲದ ಮೊತ್ತಕ್ಕೆ ಪರಿಹಾರದ ಹಣವನ್ನು ಜಮೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಕೇಂದ್ರದ ಪರಿಹಾರ ತಡವಾದ ಕಾರಣ ರಾಜ್ಯ ಸರ್ಕಾರ 33,55,599 ಫಲಾನುಭವಿಗಳಿಗೆ ಮುಂಗಡ ರೂಪದಲ್ಲಿ -ಠಿ;2 ಸಾವಿರ ನೀಡಿತ್ತು. ಬೊಕ್ಕಸ ದಿಂದ -₹ 685 ಕೋಟಿ ಬಿಡುಗಡೆ ಮಾಡಿತ್ತು. ಕೇಂದ್ರ -ಠಿ;3454 ಕೋಟಿ ಬಿಡುಗಡೆ ಮಾಡುತ್ತಿದ್ದಂತೆ ರಾಜ್ಯ ಮುಂಗಡವಾಗಿ ಕೊಟ್ಟಿದ್ದ ಹಣ ಕಟಾಯಿಸಿ ಉಳಿದ ಮೊತ್ತ ಜಮೆ ಮಾಡುತ್ತಿದೆ. ಆ ಪ್ರಕಾರವೇ ಆದೇಶ ಹೊರಡಿಸಿದೆ. ಆದರೆ ಈ ಮಾಹಿತಿ ಅರಿಯದ ರೈತರು ಕೇಂದ್ರದಿಂದ ಪರಿಹಾರ ಪೂರ್ಣ ಸಿಕ್ಕಿಲ್ಲ ಎಂದು ದನಿ ಎತ್ತಿದ್ದಾರೆ. ಬರ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರದ ಪಾಲು ಯಾಕಿಲ್ಲ? ರಾಜ್ಯದ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನೆ ಮಾಡುತ್ತಿದೆ.

    ಕೇಂದ್ರ ಕೊಟ್ಟಿದ್ದೆಷ್ಟು?: ಕೇಂದ್ರ ಸರ್ಕಾರ ಎನ್​ಡಿಆರ್​ಎಫ್ ಮಾರ್ಗಸೂಚಿ ಅನ್ವಯ ಒಂದು ಹೆಕ್ಟೇರ್​ಗೆ 8,500 ರೂ.ನಂತೆ, ಗರಿಷ್ಠ ಎರಡು ಹೆಕ್ಟೇರ್​ಗೆ 17,000 ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 2 ಸಾವಿರ ರೂ. ಕಡಿತ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಸಮನಾಗಿ ತನ್ನ ಪಾಲನ್ನು ಸೇರಿಸಿ ಕೊಡಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ

    ಬ್ಯಾಂಕ್​ಗಳ ವರ್ತನೆಗೆ ಕಿಡಿ: ಇನ್ನೊಂದೆಡೆ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗುತ್ತಿದ್ದಂತೆ ಬ್ಯಾಂಕುಗಳು ಸಾಲದ ಖಾತೆಗೆ ವರ್ಗಾಯಿಸಿಕೊಳ್ಳುತ್ತಿವೆ. ಇದು ಕೂಡ ರೈತರ ಕೋಪಕ್ಕೆ ಕಾರಣವಾಗಿದೆ. ಮಳೆ ಕೊರತೆಯಿಂದ ಬೆಳೆ ಕೈ ಹಿಡಿದಿಲ್ಲ, ಈ ಸಂದರ್ಭದಲ್ಲಿ ಅಷ್ಟೋ ಇಷ್ಟೋ ಕೇಂದ್ರ ಸರ್ಕಾರ ಸಹಾಯ ಮಾಡಿದರೆ ಬ್ಯಾಂಕುಗಳು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಇಂತಹ ಬೆಳವಣಿಗೆಗೆ ಅವಕಾಶ ಕೊಡಬಾರದೆಂದೂ ರೈತರು ಒತ್ತಾಯಿಸಿದ್ದಾರೆ.

    ಸಿಎಂಗೆ ಅರ್ಜಿ ಅಭಿಯಾನ: ಸಿಎಂ ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ರೈತರು ಅರ್ಜಿ ಕೊಟ್ಟಿಲ್ಲ. ನಾನೇ ಕೇಂದ್ರದ ಜತೆ ಮಾತನಾಡಿ ಕೊಡಿಸುತ್ತಿದ್ದೇನೆ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯನವರಿಗೆ ಅರ್ಜಿ ಕೊಡುವ ಅಭಿಯಾನ ಶುರು ಮಾಡಿದ್ದೇವೆ. ಈಗಾಗಲೇ ಬ್ಯಾಡಗಿಯಲ್ಲಿ 2,500 ರೈತರು ಸೇರಿ ಪ್ರತ್ಯೇಕ ಅರ್ಜಿಯನ್ನೇ ಕೊಟ್ಟಿದ್ದೇವೆ ಎನ್ನುತ್ತಾರೆ ರೈತರ ಸಂಘದ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ.

    ಹಲವರಿಗೆ 2 ಸಾವಿರ ರೂ. ಬಾಕಿ: ರಾಜ್ಯ ಸರ್ಕಾರ ಕೊಟ್ಟಿದ್ದ 2 ಸಾವಿರ ರೂ. ಬರ ಪರಿಹಾರವೂ ಇನ್ನೂ ಅನೇಕರಿಗೆ ಸಿಕ್ಕಿಲ್ಲ. ಹಾವೇರಿ ಜಿಲ್ಲೆಯೊಂದರಲ್ಲೇ ಸಾವಿರಾರು ರೈತರಿಗೆ ಹಣ ಜಮೆಯಾಗಿಲ್ಲ. ಇನ್ನೂ ಕೆಲವರು ತಾಂತ್ರಿಕ ದೋಷ ಸರಿಪಡಿಸಿಕೊಂಡಿಲ್ಲ. ಅಂಥವರು ಎಲ್ಲ ತಾಲೂಕು ಆಡಳಿತ ಕಚೇರಿಗಳಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರ ಸಂರ್ಪಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ರಘುನಂದನಮೂರ್ತಿ.ಹಿಂದೆ ಕೊಟ್ಟಿದ್ದಿದೆ!: 2022ರಲ್ಲಿ ಅತಿವೃಷ್ಟಿ ಆದಾಗ ಕೇಂದ್ರ ಸರ್ಕಾರ ಹೆಕ್ಟೇರ್​ಗೆ 6,800 ರೂ. ಕೊಟ್ಟಿತ್ತು. ರಾಜ್ಯ ಸರ್ಕಾರ ಅದಕ್ಕೆ ತನ್ನ ಪಾಲು 6,800 ರೂ. ಸೇರಿಸಿ 13,600 ರೂ. ಕೊಟ್ಟಿತ್ತು. ಒಬ್ಬರಿಗೆ ಗರಿಷ್ಠ ಎರಡು ಹೆಕ್ಟೇರ್​ಗೆ 27,200 ರೂ. ಕೊಟ್ಟಿತ್ತು. ಈ ಬಾರಿ ಕೇಂದ್ರದಿಂದ ಗರಿಷ್ಠ 2 ಹೆಕ್ಟೇರ್​ಗೆ 17 ಸಾವಿರ ರೂ. ಬಂದಿರುವುದರಿಂದ ರಾಜ್ಯವೂ 17 ಸಾವಿರ ರೂ. ಸೇರಿಸಿ ಒಟ್ಟು 34 ಸಾವಿರ ರೂ. ಕೊಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

    ಕೇಂದ್ರ ಸರ್ಕಾರ ಹೆಕ್ಟೇರ್​ಗೆ 8,500 ರೂ. ಬರ ಪರಿಹಾರ ಕೊಟ್ಟಿದೆ. ರಾಜ್ಯ ಸರ್ಕಾರವೂ 8,500 ರೂ. ಸೇರಿಸಿ ಪ್ರತಿ ಹೆಕ್ಟೇರ್​ಗೆ 17,000 ರೂ. ಹಾಗೂ ಎರಡು ಹೆಕ್ಟೇರ್​ಗೆ 34,000 ರೂ. ಪರಿಹಾರ ಕೊಡಬೇಕು. 2,000 ರೂ. ಕಡಿತ ಮಾಡಬಾರದು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.

    | ಮಲ್ಲಿಕಾರ್ಜುನ ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts