More

    ಕೋವಿಶೀಲ್ಡ್ ಲಸಿಕೆಯಿಂದ ಬ್ಲಡ್ ಕ್ಲಾಟ್ ಸಮಸ್ಯೆ; ಸಂಶೋಧಕರಿಂದ ಬಹಿರಂಗ

    ನವದೆಹಲಿ: ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬ್ರಿಟಿಷ್-ಸ್ವೀಡಿಶ್ ಔಷಧ ಕಂಪನಿ ಅಸ್ಟ್ರಾಜೆನಿಕಾ ತಯಾರಿಸಿದ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಲಸಿಕೆ-ಪ್ರೇರಿತ ರೋಗನಿರೋಧಕ ಥ್ರೊಂಬೋಸೈಟೊಪೆನಿಯಾ ಮತ್ತು ಥ್ರೊಂಬೋಸಿಸ್ (ವಿಐಟಿಟಿ) ಎಂಬ ಅಪರೂಪದ ರಕ್ತ ಹೆಪು್ಪಗಟ್ಟುವಿಕೆಯ ಸಮಸ್ಯೆ ಉಂಟಾಗುವ ಅಪಾಯವಿದೆ ಎಂದು ಸಂಶೋಧಕರು ಗುರುವಾರ ಹೇಳಿದ್ದಾರೆ.

    ವಿಐಟಿಟಿ ಹೊಸದಲ್ಲವಾದರೂ 2021ರಲ್ಲಿ ಕೋವಿಡ್ ಸಾಂಕ್ರಾಮಿಕತೆಯ ಉತ್ತುಂಗದ ಸಮಯದಲ್ಲಿ ಬಳಸಲಾದ ಅಡೆನೋವೈರಸ್ ವೆಕ್ಟರ್-ಆಧಾರಿತ ಆಕ್ಸ್​ಫರ್ಡ್-ಅಸ್ಟ್ರಾಜೆನಿಕಾ ಲಸಿಕೆಯ ಪರಿಣಾಮವಾಗಿ ವಿಐಟಿಟಿ ಒಂದು ಹೊಸ ವ್ಯಾಧಿಯಾಗಿ ಹೊರಹೊಮ್ಮಿದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಈ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಮತ್ತು ಯುರೋಪ್​ನಲ್ಲಿ ವ್ಯಾಕ್​ರೆೆವ್ರಿಯಾ ಹೆಸರಿನಲ್ಲಿ ಸರಬರಾಜು ಮಾಡಲಾಗಿತ್ತು. ಪ್ಲೇಟ್ಲೆಟ್ ಫ್ಯಾಕ್ಟರ್ 4 (ಅಥವಾ ಪಿಎಫ್4) ಎಂದು ವರ್ಣಿಸಲಾಗುವ ಒಂದು ಪ್ರೊಟೀನ್ ವಿರುದ್ಧ ನಿರ್ದೇಶಿತವಾದ ಅಸಾಮಾನ್ಯವಾದ ಅಪಾಯಕಾರಿ ರಕ್ತ ಸ್ವಯಂಪ್ರತಿಕಾಯವು (ಆಟೋಆಂಟಿಬಾಡಿ) ವಿವಿಐಟಿಗೆ ಕಾರಣವೆಂಬುದು ಕಂಡುಬಂದಿದೆ.

    ನೈಸರ್ಗಿಕ ಅಡೆನೋವೈರಸ್ (ಸಾಮಾನ್ಯ ಶೀತ) ಸೋಂಕು ತಗಲಿದ ನಂತರ ಕೆಲವು ಪ್ರಕರಣಗಳಲ್ಲಿ ಇದೇ ಎಫ್4 ಪ್ರತಿಕಾಯವು ಮಾರಕವಾಗಿ ಇದೇ ಬಗೆಯ ಸಮಸ್ಯೆ ಉಂಟಾಗುತ್ತದೆ ಎಂದು 2023ರಲ್ಲಿ ಪ್ರತ್ಯೇಕ ಸಂಶೋಧನೆ ನಡೆಸಿದ್ದ ಕೆನಡಾ, ಉತ್ತರ ಅಮೆರಿಕ, ಜರ್ಮನಿ ಮತ್ತು ಇಟೆಲಿಯ ವಿಜ್ಞಾನಿಗಳು ವರ್ಣಿಸಿದ್ದರು. ಅಡೆನೋವೈರಸ್ ಸೋಂಕು ಸಂಬಂಧಿತ ವಿಐಟಿಟಿ ಮತ್ತು ಕ್ಲಾಸಿಕ್ ಅಡೆನೋವೈರಲ್ ವೆಕ್ಟರ್ ವಿಐಟಿಟಿ ಇವೆರಡೂ ಒಂದೇ ಬಗೆಯ ಮಾಲೆಕ್ಯುಲಾರ್ ಗುರುತುಗಳನ್ನು ಹಂಚಿಕೊಳ್ಳುತ್ತವೆ ಎನ್ನುವುದನ್ನು ಆಸ್ಟ್ರೇಲಿಯಾದ ಫ್ಲೈಂಡರ್ಸ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯೊಂದು ಕಂಡು ಕೊಂಡಿದೆ. ಇದೇ ತಂಡ 2022ರ ಅಧ್ಯಯನವೊಂದರಲ್ಲಿ ಪಿಎಫ್4 ಪ್ರತಿಕಾಯದ ಮಾಲೆಕ್ಯುಲಾರ್ ಕೋಡ್​ಅನ್ನು ಕಂಡುಹಿಡಿದು ಜೈವಿಕ ಅಪಾಯದ ಅಂಶವನ್ನು ಗುರುತಿಸಿತ್ತು. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ಅಧ್ಯಯನದ ಹೊಸ ಫಲಿತಾಂಶ ಪ್ರಕಟವಾಗಿದೆ. ಈ ಫಲಿತಾಂಶಗಳು ವ್ಯಾಕ್ಸಿನ್ ಸುರಕ್ಷತೆಯನ್ನು ಸುಧಾರಿಸುವಲ್ಲಿ ಮಹತ್ವದ ಪರಿಣಾಮ ಬೀರಲಿವೆ.

    ಕೊವ್ಯಾಕ್ಸಿನ್​ನಿಂದಲೂ ಅಡ್ಡಪರಿಣಾಮ: ಭಾರತ್ ಬಯೋಟೆಕ್​ನ ಕೋವಿಡ್-ನಿರೋಧಕ ಲಸಿಕೆ ಕೊವ್ಯಾಕ್ಸಿನ್ ಪಡೆದ ಸುಮಾರು ಮೂರನೇ ಒಂದರಷ್ಟು, ಅಂದರೆ ಶೇಕಡ 30 ಜನರಲ್ಲಿ ಒಂದು ವರ್ಷದ ನಂತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ‘ವಿಶೇಷ ಆಸಕ್ತಿಯ ಪ್ರತಿಕೂಲ ಘಟನೆಗಳು’ (ಎಇಎಸ್​ಐ) ವರದಿಯಾಗಿವೆ ಎಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ (ಬಿಎಚ್​ಯುು) ಸಂಶೋಧನೆಯೊಂದು ತಿಳಿಸಿದೆ. ಲಸಿಕೆ ಹಾಕಿಸಿಕೊಂಡ ನಂತರದ ಒಂದು ವರ್ಷದ ವರೆಗಿನ ಫಾಲೋಅಪ್ ಅಧ್ಯಯನದಿಂದ ಇದು ತಿಳಿದು ಬಂದಿದೆ. ಅಧ್ಯಯನದಲ್ಲಿ ಪಾಲ್ಗೊಂಡ 926 ಜನರ ಪೈಕಿ ಸುಮಾರು ಶೇ. 50ರಷ್ಟು ಮಂದಿ ಫಾಲೋಅಪ್ ಅವಧಿಯಲ್ಲಿ ಸೋಂಕು ತಗಲಿರುವ ಬಗ್ಗೆ ದೂರಿದ್ದಾರೆ. ಮುಖ್ಯವಾಗಿ ಶ್ವಾಸಕೋಶದ ಮೇಲ್ಭಾಗದ ಸೋಂಕು ವರದಿಯಾಗಿದೆ. ಕೋವಿಡ್ ಲಸಿಕೆಯಿಂದ ರಕ್ತ ಹೆಪು್ಪಗಟ್ಟುವಿಕೆಯ ಅಪರೂಪದ ಅಡ್ಡ ಪರಿಣಾಮ ಉಂಟಾಗುತ್ತದೆಂದು ಅಸ್ಟ್ರಾಜೆನಿಕಾ ಕೋರ್ಟ್​ನಲ್ಲಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಸ್ಪ್ರಿಂಗರ್ ನೇಚರ್ ಪತ್ರಿಕೆಯಲ್ಲಿ ಬಿಎಚ್​ಯುು ಅಧ್ಯಯನ ವರದಿ ಪ್ರಕಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts