More

    ಆರ್​​ಸಿಬಿಗೆ ಸೇರಿಕೊಳ್ಳಲಿದ್ದಾರೆ ರೋಹಿತ್​ ಶರ್ಮ!? ನಾಯಕತ್ವವೂ ಕೂಡ ಹಿಟ್​ಮ್ಯಾನ್​ ಹೆಗಲಿಗೆ

    ನವದೆಹಲಿ: ಮುಂಬೈ ಇಂಡಿಯನ್ಸ್​ ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬರಲಿದ್ದಾರೆ ಎಂಬುದೇ ಇದೀಗ ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ. ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಕ್ರೇಜ್‌ನಿಂದ ಈಗಾಗಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿಗೆ ರೋಹಿತ್ ಶರ್ಮ ಸೇರಿಕೊಂಡರೆ, ಅದು ಐಪಿಎಲ್ ಇತಿಹಾಸದಲ್ಲಿ ಅದ್ಭುತ ಕ್ಷಣವಾಗಲಿದೆ.

    ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವುದು ಗೊತ್ತೆ ಇದೆ. ಆದರೆ, ಓರ್ವ ಆಟಗಾರನಾಗಿ ಮಾತ್ರ ಆಡುತ್ತಿದ್ದಾರೆ. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂದು ಕೂರಿಸಿದೆ. ಈ ಬಗ್ಗೆ ರೋಹಿತ್ ಶರ್ಮಗೆ ತೀವ್ರ ಅಸಮಾಧಾನವೂ ಇದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮ ಆರ್‌ಸಿಬಿಗೆ ಬರಲಿದ್ದಾರೆ ಎಂಬ ಊಹಾಪೋಹಗಳು ಸಹ ಹರಿದಾಡುತ್ತಿವೆ. ಕ್ರಿಕೆಟ್ ಅಭಿಮಾನಿಗಳು ಕೂಡ ಇದನ್ನು ಬಲವಾಗಿ ನಂಬಿದ್ದಾರೆ. ಅದಕ್ಕೆ ಕಾರಣವೂ ಇದೆ.

    ಐಪಿಎಲ್​ 2025ರ ಸೀಸನ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಹರಾಜಿಗೂ ಮುನ್ನ ತಮ್ಮ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗುತ್ತದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ತಂಡವೆಂದೇ ಹೆಸರಾಗಿರುವ ಆರ್‌ಸಿಬಿ, ಈವರೆಗೂ ಒಂದು ಬಾರಿಯೂ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿಯೂ ಕಪ್ ಗೆಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮುಂದಿನ ವರ್ಷದ ಐಪಿಎಲ್ ಹರಾಜಿನಲ್ಲಿ ಉತ್ತಮ ತಂಡವನ್ನು ಖರೀದಿಸಲು ಆರ್​ಸಿಬಿ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ವಿರಾಟ್​ ಕೊಹ್ಲಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡು ಉಳಿದವರನ್ನು ಮನೆಗೆ ಕಳುಹಿಸಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮುಂದಾಗಿದೆ ಎನ್ನಲಾಗಿದೆ. ಪ್ರಸ್ತುತ ಆರ್​ಸಿಬಿ ನಾಯಕರಾಗಿರುವ ಫಾಫ್ ಡುಪ್ಲೆಸಿಸ್ ಫಾರ್ಮ್‌ನಲ್ಲಿಲ್ಲ ಮತ್ತು ಐಪಿಎಲ್​ ನಿವೃತ್ತಿಯ ಸಮೀಪಿಸುತ್ತಿರುವ ಕಾರಣ ಆರ್​ಸಿಬಿ, ಫಾಫ್​ ಮೇಲಿನ ಭರವಸೆಯನ್ನು ಕೈಬಿಟ್ಟಿದೆ.

    ಇಂತಹ ಪರಿಸ್ಥಿತಿಯಲ್ಲಿ ರೋಹಿತ್​ ಶರ್ಮರನ್ನು ಆರ್​ಸಿಬಿಗೆ ಕರೆತರುವ ಪ್ಲ್ಯಾನ್​ ನಡೆದಿದೆ ಎನ್ನಲಾಗಿದೆ. ಐದು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟರು ಸಹ ಗೌರವಯುತವಾಗಿ ನಡೆಸಿಕೊಳ್ಳದ ಫ್ರಾಂಚೈಸಿ ಮೇಲೆ ರೋಹಿತ್​ಗೆ ಅಸಮಾಧಾನವಿದ್ದು, ಮುಂದಿನ ಐಪಿಎಲ್​ನಲ್ಲಿ ತಂಡದಿಂದ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ರೋಹಿತ್ ಶರ್ಮ ಅವರನ್ನು ತಮ್ಮ ತಂಡದ ನಾಯಕನನ್ನಾಗಿ ಮಾಡಲು ಆರ್​ಸಿಬಿ ನಿರ್ಧರಿಸಿದೆಯಂತೆ.

    ಟೀಂ ಇಂಡಿಯಾದಲ್ಲಿ ವಿರಾಟ್​ ಕೊಹ್ಲಿ, ರೋಹಿತ್ ಶರ್ಮ ನಾಯಕತ್ವದಲ್ಲಿ ಆಡುತ್ತಿರುವುದು ಈಗಾಗಲೇ ಗೊತ್ತೇ ಇದೆ. ಆರ್‌ಸಿಬಿಯಲ್ಲೂ ಒಟ್ಟಿಗೆ ಆಡುವ ಅವಕಾಶವಿದೆ. ಹೀಗಾದರೆ, ಇಬ್ಬರು ಸ್ಟಾರ್ ಆಟಗಾರರು ಒಂದೇ ತಂಡದಲ್ಲಿ ಆಡಿದರೆ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿಯಾಗುತ್ತದೆ. ಕೊಹ್ಲಿ ಮತ್ತು ರೋಹಿತ್ ಶರ್ಮಗಾಗಿ ಮಾತ್ರ ಪಂದ್ಯವನ್ನು ನೋಡುವವರೇ ಹೆಚ್ಚು. ಇಬ್ಬರೂ ಒಂದೇ ತಂಡ ಸೇರಿಕೊಂಡೆ ಇನ್ನೂ ಮಜವಾಗಿರುತ್ತದೆ. ರೋಹಿತ್ ಶರ್ಮಾ ಆರ್​ಸಿಬಿ ನಾಯಕನಾಗಿ ಸೇರಿಕೊಳ್ಳುತ್ತಾರೆ ಎಂಬ ವದಂತಿಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ವಿರಾಟ್​ ಕೊಹ್ಲಿ ಇರೋವರೆಗೂ ಆರ್​ಸಿಬಿ ಕಪ್​ ಗೆಲ್ಲಲ್ಲ! ಉತ್ತಮ ಪ್ರದರ್ಶನ ನೀಡಿದ್ರೂ ತಪ್ಪದ ಕಳಂಕ

    ಇಂದು ಹೃದಯಾಘಾತದಿಂದ ಮೃತಪಟ್ಟ ಡೇನಿಯಲ್​ ಬಾಲಾಜಿ ಕನ್ನಡದ ಖ್ಯಾತ ನಟನ ಸಹೋದರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts