More

    ವಿರಾಟ್​ ಕೊಹ್ಲಿ ಇರೋವರೆಗೂ ಆರ್​ಸಿಬಿ ಕಪ್​ ಗೆಲ್ಲಲ್ಲ! ಉತ್ತಮ ಪ್ರದರ್ಶನ ನೀಡಿದ್ರೂ ತಪ್ಪದ ಕಳಂಕ

    ಬೆಂಗಳೂರು: ನಿನ್ನೆ (ಮಾರ್ಚ್​ 29) ಕೋಲ್ಕತ ನೈಟ್​ ರೈಡರ್ಸ್ (ಕೆಕೆಆರ್​)​ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಹೀನಾಯವಾಗಿ ಸೋತ ಬೆನ್ನಲ್ಲೇ ಹತಾಶೆಗೆ ಒಳಗಾದ ಆರ್​ಸಿಬಿ ಅಭಿಮಾನಿಗಳು ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಂಡದಲ್ಲಿ ಕೊಹ್ಲಿ ಇರುವವರೆಗೂ ಆರ್​ಸಿಬಿ ಕಪ್​ ಗೆಲ್ಲುವುದಿಲ್ಲ ಎಂದಿದ್ದಾರೆ.

    2008ರಲ್ಲಿ ಐಪಿಎಲ್​ ಟೂರ್ನಿ ಆರಂಭವಾದಾಗಿನಿಂದ ಇದುವರೆಗೂ ಒಮ್ಮೆಯೂ ಐಪಿಎಲ್​ ಟ್ರೋಫಿಯನ್ನು ಆರ್​ಸಿಬಿ ಎತ್ತಿಹಿಡಿದಿಲ್ಲ. ಟೂರ್ನಿಯ ಆರಂಭದಿಂದಲೂ ಕೊಹ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡದ ಪರವೇ ಆಡುತ್ತಿದ್ದಾರೆ. ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರು ಕೂಡ ಆರ್​ಸಿಬಿಯಲ್ಲಿ ಕೊಹ್ಲಿ ಇರುವುದು ದರಿದ್ರ ಎನ್ನುವ ಅರ್ಥದಲ್ಲಿ ಕೆಲ ಆರ್​ಸಿಬಿ ಅಭಿಮಾನಿಗಳು ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಆರ್​ಸಿಬಿಯ ನಿಷ್ಠಾವಂತ ಅಭಿಮಾನಿಗಳು ಕೂಡ ಒಪ್ಪುತ್ತಿಲ್ಲ.

    ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ಸೆಣಸಾಡಿತು. ಈ ಪಂದ್ಯದಲ್ಲಿ ಕೊಹ್ಲಿ ವೈಯಕ್ತಿಕವಾಗಿ 59 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 83 ರನ್​ ಗಳಿಸಿದರು. ಉಳಿದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ಕೋಲ್ಕತ್ತ ವಿರುದ್ಧ ಆರ್​ಸಿಬಿ ಹೀನಾಯ ಸೋಲನ್ನು ಅನುಭವಿಸಿತು. ಪಂದ್ಯದ ಬೆನ್ನಲ್ಲೇ ಮಾತನಾಡಿದ ಅಭಿಮಾನಿಯೊಬ್ಬ ವಿರಾಟ್​ ಕೊಹ್ಲಿ ಇರುವವರೆಗೂ ನಾವು ಟ್ರೋಫಿಯನ್ನು ಗೆಲ್ಲುವುದಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದನು.

    ರಾಯಲ್ ಚಾಲೆಂಜರ್ಸ್ ಬೆಂಗಳೂರು 2009, 2011, ಮತ್ತು 2016 ರಲ್ಲಿ ಮೂರು ಬಾರಿ ಫೈನಲ್‌ ತಲುಪಿದರೂ ಟ್ರೋಫಿಯನ್ನು ಜಯಿಸುವಲ್ಲಿ ವಿಫಲವಾಯಿತು. ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ, ಲೀಗ್‌ನಲ್ಲಿ ಆರನೇ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಇದೀಗ ಪ್ರಸಕ್ತ ಸರಣಿಯಲ್ಲಿ 3 ಪಂದ್ಯಗಳನ್ನು ಆಡಿರುವ ಆರ್​ಸಿಬಿ 2ರಲ್ಲಿ ಸೋಲುಂಡಿದೆ. ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಟೂರ್ನಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತು. ಮೊದಲ ಪಂದ್ಯದಲ್ಲೇ ಹೀನಾಯ ಸೋಲನ್ನು ಅನುಭವಿಸುವ ಮೂಲಕ ಶುಭಾರಂಭದ ಕನಸು ನುಚ್ಚುನೂರಾಯಿತು. ಎರಡನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಕೊನೆಯಲ್ಲಿ ದಿನೇಶ್​ ಕಾರ್ತಿಕ್​ ಅಬ್ಬರಿಸದೇ ಹೋಗಿದ್ದರೆ ಈ ಪಂದ್ಯವನ್ನು ಕೂಡ ಸೋಲಬೇಕಿತ್ತು. ಆದರೆ, ದಿನೇಶ್​ ಕಾರ್ತಿಕ್​ ಅದ್ಭುತ ಫಿನಿಶಿಂಗ್​ ಮಾಡುವ ಮೂಲಕ ಜಯ ತಂದುಕೊಟ್ಟರು.

    ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಕೆಕೆಆರ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್​ಗಳಲ್ಲಿ 183 ರನ್​ ಗುರಿ ನೀಡಿದ ಆರ್​ಸಿಬಿಗೆ ಟಕ್ಕರ್​ ಕೊಡಲು ದ್ವಿತೀಯಾರ್ಧದಲ್ಲಿ ಕಣಕ್ಕಿಳಿದ ಶ್ರೇಯಸ್​ ಅಯ್ಯರ್ ಪಡೆ 7 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿತು. ಓಪನರ್ ಆಗಿ ಸ್ಪೋಟಕ ಓಪನಿಂಗ್ ಕೊಟ್ಟ ಸುನಿಲ್ ನರೇನ್ (47) ಮತ್ತು ಫಿಲಿಪ್​ ಸಾಲ್ಟ್​(30), ಸ್ಟೇಡಿಯಂನ ಸುತ್ತಮುತ್ತ ಸಿಕ್ಸರ್​ಗಳ ಸುರಿಮಳೆಯನ್ನೇ ಹರಿಸಿದರು. ಈ ಮೂಲಕ 77 ರನ್​ಗಳನ್ನು ಕೊಡುಗೆಯಾಗಿ ಕೊಟ್ಟ ಈ ಜೋಡಿ, ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಪೆವಿಲಿಯನ್​ನತ್ತ ಮುಖಮಾಡಿದರು.

    ಕೆಕೆಆರ್​ ನಾಯಕ ಶ್ರೇಯಸ್​​ ಅಯ್ಯರ್ (39*) ಮತ್ತು ವೆಂಕಟೇಶ್ ಅಯ್ಯರ್ (50) ಅಬ್ಬರದ​ ಜತೆಯಾಟದಿಂದ ಕೊಲ್ಕತ್ತಾ ಭರ್ಜರಿ ಗೆಲುವು ದಾಖಲಿಸಿತು. 83 ರನ್​ ಸಿಡಿಸಿದ ವಿರಾಟ್​ ಕೊಹ್ಲಿಯ ಏಕಾಂಗಿ ಹೋರಾಟ ಕಡೆಗೂ ವಿಫಲಗೊಂಡಿದ್ದು, ಆರ್​ಸಿಬಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿತು. (ಏಜೆನ್ಸೀಸ್​)

    ಡೇನಿಯಲ್​ ಬಾಲಾಜಿ ವಿಧಿವಶ: ಯಶ್​ ಮಾಡಿದ ಸಹಾಯ ನೆನೆದು ಭಾವುಕರಾಗಿದ್ರು ಕಿರಾತಕ ಖಳನಟ

    ಕನಸಿನಲ್ಲಿಯೂ ಯಾವುದಾದರೂ ತಂಡವನ್ನು ಸೋಲಿಸಲು ಬಯಸಿದರೆ ಅದು ಆರ್​ಸಿಬಿ ಆಗಿರುತ್ತದೆ: ಗೌತಮ್​ ಗಂಭೀರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts