More

    VIDEO | ಲೈವ್​ಗೆ ಬಂದು ಕಣ್ಣೀರಾಕಿದ ಅನು ಅಕ್ಕ; ಅಸಭ್ಯ ಕಮೆಂಟ್​ ಮಾಡೋರಿಗೆ ವಿನಯ್ ಖಡಕ್​​ ವಾರ್ನಿಂಗ್​​!

    ಬೆಂಗಳೂರು: ಬಣ್ಣ ನೋಡದ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸಗಳ ಮೂಲಕ ತಮ್ಮ ತಂಡದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅನು ಅಕ್ಕ ಎಂದೇ ಹೆಸರುವಾಸಿಯಾಗಿರುವ ಅನು ಎಂಬುವವರು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಲೈವ್​ ಬಂದು ಕಣ್ಣೀರಾಕಿದರು.

    ಇದನ್ನೂ ಓದಿ: ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್​ ಷೇರು ಬೆಲೆ ಏಕಾಏಕಿ 14% ಏರಿಕೆ: ರಿಲಯನ್ಸ್​ ಪವರ್​ ಅಪ್ಪರ್​ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

    ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ತನ್ನ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡುವವರನ್ನು ನೆನೆದು ಭಾವುಕರಾದ ಅನು, ಲೈವ್​ಗೆ ಬರುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು. ಬಡವರ ಮಕ್ಕಳು ನಾವು ಹಣದ ಆಸೆ ಬಿಟ್ಟು, ಸರ್ಕಾರಿ ಶಾಲೆಗಳ ಉಳಿವಿಗಾಗಿ ನಮ್ಮ ಕೈಲಾದಷ್ಟು ಕೆಲಸ ಮಾಡಿಕೊಂಡು ಇಲ್ಲಿಯವರೆಗೆ ಬಂದಿದ್ದೇವೆ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ನಿಮ್ಮ ಮನಸ್ಸಿಗೆ ಬಂದದ್ದನ್ನು ಕಮೆಂಟ್ ಮಾಡಬೇಡಿ ಎಂದು ಕಣ್ಣೀರಿಟ್ಟರು.

    ನನಗೆ ಯಾವ ರೀತಿ ಪ್ರಚಾರ ಬೇಕಿಲ್ಲ. ದೊಡ್ಡ ಸ್ಟಾರ್​ ಆಗಬೇಕು ಎಂಬ ಆಸೆಯಿಲ್ಲ. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು. ದೇಶಕ್ಕೆ ಒಳ್ಳೆಯ ಪ್ರಜೆಯಾಗಬೇಕು ಎಂಬುದಷ್ಟೇ ನನ್ನ ಆಸೆ ಎಂದರು. ಅನು ಅಕ್ಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್​ ಸ್ಪರ್ಧಿ, ನಟ ವಿನಯ್ ಗೌಡ ಈ ಕುರಿತು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಪುಲ್ಕಿತ್ ಸಾಮ್ರಾಟ್ -ಕೃತಿ ಕರ್ಬಂದಾ ವೆಡ್ಡಿಂಗ್ ಫುಡ್ ಮೆನುವಿನಲ್ಲಿದೆ ವೈವಿಧ್ಯಮಯ ತಿನಿಸುಗಳು!

    “ಫೇಸ್​ಬುಕ್​ ಲೈವ್ ಮೂಲಕ ಅನು ಅಕ್ಕ ಕಣ್ಣೀರಿಟ್ಟ ವಿಡಿಯೋ ನೋಡಿ ಮನಸ್ಸಿಗೆ ತುಂಬ ಬೇಸರವಾಯ್ತು. ಸರ್ಕಾರಿ ಶಾಲೆಗಳನ್ನು ಬೆಳೆಸಲು, ಉಳಿಸಲು ತಮ್ಮದೇ ಹಣದಲ್ಲಿ ಏನೋ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಶಾಲೆಗಳಿಗೆ ಪೇಟಿಂಗ್ ಮಾಡೋದು, ಸುತ್ತಮುತ್ತಲಿನ ಜಾಗಗಳನ್ನು ಸ್ವಚ್ಛಗೊಳಿಸೋದನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ” ಎಂದರು.

    “ತನಗೆ ಹುಷಾರಿಲ್ಲ, ಆಗುತ್ತಿಲ್ಲ ಅಂದರೂ ಸಹ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಶ್ರಮಿಸುತ್ತಿದ್ದಾರೆ. ಆದರೆ, ಕೆಲವರು ನಕಲಿ ಅಕೌಂಟ್ ಬಳಸಿಕೊಂಡು ಅಸಭ್ಯವಾಗಿ ಬೈಯ್ಯೋದು, ನಿಂದಿಸೋದು ಸರಿಯಿಲ್ಲ. ನಿಮಗೆ ಮನುಷ್ಯತ್ವ ಇದ್ದರೆ ಕನ್ನಡಿಯಲ್ಲಿ ಒಮ್ಮೆ ನಿಮ್ಮ ಮುಖ ನೋಡಿಕೊಳ್ಳಿ, ನೀವು ಬಳಸುವ ಅಸಭ್ಯ ಪದಗಳನ್ನು ನಿಮ್ಮ ತಂಗಿ-ತಾಯಿಗೆ ಬಳಸಿ. ಆಗ ಗೊತ್ತಾಗುತ್ತದೆ ಏನು ಅಂತ. ಫೇಕ್ ಅಕೌಂಟ್ ಇಟ್ಟುಕೊಂಡಿರುವವ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಬಹುದು” ಎಂದು ವಿನಯ್ ಗೌಡ ತಿಳಿಸಿದ್ದಾರೆ.

    ಬಿಸಿಯೂಟ ತುಂಬ ಅಗತ್ಯ, ದಯವಿಟ್ಟು ಅರ್ಧದಿನ ರಜೆ ಕೊಡ್ಬೇಡಿ: ಮನಕಲಕುವಂತಿದೆ ಈ ವಿದ್ಯಾರ್ಥಿ ಬರೆದ ಪತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts