More

    ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್​ ಷೇರು ಬೆಲೆ ಏಕಾಏಕಿ 14% ಏರಿಕೆ: ರಿಲಯನ್ಸ್​ ಪವರ್​ ಅಪ್ಪರ್​ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

    ಮುಂಬೈ: ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್​ ಲಿಮಿಟೆಡ್​ (Reliance Infrastructure Ltd.) ಷೇರು ಶುಕ್ರವಾರ ಶೇ. 13.52ರಷ್ಟು ಏರಿಕೆ ಕಂಡು ದಿನದ ಗರಿಷ್ಠ ಮಟ್ಟವಾದ 243.50 ರೂ. ತಲುಪಿತು. ಅಲ್ಲದೆ, ರಿಲಯನ್ಸ್​ ಪವರ್ ಲಿಮಿಟೆಡ್​ (Reliance Power Ltd.) ಷೇರುಗಳು ಶೇಕಡಾ 5ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಈ ಷೇರುಗಳ ಬೆಲೆ ರೂ 22.13 ತಲುಪಿತು.

    ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್ ಷೇರುಗಳು ಶುಕ್ರವಾರದ ವಹಿವಾಟಿನಲ್ಲಿ ತೀವ್ರವಾಗಿ ಏರಿಕೆ ಕಂಡವು. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್​ ಲಿಮಿಟೆಡ್​ (Reliance Infrastructure Ltd.) ಷೇರು ಶುಕ್ರವಾರ ಶೇ. 13.52ರಷ್ಟು ಏರಿಕೆ ಕಂಡು ದಿನದ ಗರಿಷ್ಠ ಮಟ್ಟವಾದ 243.50 ರೂ. ತಲುಪಿತು. ಅಲ್ಲದೆ, ರಿಲಯನ್ಸ್​ ಪವರ್ ಲಿಮಿಟೆಡ್​ (Reliance Power Ltd.) ಷೇರುಗಳು ಶೇಕಡಾ 5ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಈ ಷೇರುಗಳ ಬೆಲೆ ರೂ 22.13 ತಲುಪಿತು.

    ಈ ಎರಡೂ ಕಂಪನಿಗಳು ಪ್ರತ್ಯೇಕ ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ ಹೇಳಿಕೆ ಹಿನ್ನೆಲೆಯಲ್ಲಿ ಷೇರು ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ,

    “ಕಂಪನಿಯು ತನ್ನ ಸಹವರ್ತಿ ಕಂಪನಿಯಾದ ರಿಲಯನ್ಸ್ ಪವರ್ ಲಿಮಿಟೆಡ್‌ನಿಂದ ಪಡೆದ ಆರ್ಥಿಕ ಸೌಲಭ್ಯಕ್ಕೆ ಕಾರ್ಪೊರೇಟ್ ಗ್ಯಾರಂಟರ ಸಾಮರ್ಥ್ಯದಲ್ಲಿದೆ ಎಂದು ನಾವು ತಿಳಿಸಲು ಬಯಸುತ್ತೇವೆ. ರಿಲಯನ್ಸ್ ಪವರ್ ಜೊತೆಗೆ ಮಾರ್ಚ್ 14, 2024 ರಂದು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ (ಐಸಿಐಸಿಐ ಬ್ಯಾಂಕ್) ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಿದೆ.

    ಐಸಿಐಸಿಐನೊಂದಿಗೆ ರಿಲಯನ್ಸ್ ಪವರ್​ನ ಎರವಲುಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಬಾಧ್ಯತೆಯನ್ನು ಈ ಕಂಪನಿಯು ಇತ್ಯರ್ಥಪಡಿಸಿದೆ. ಇದರ ಪ್ರಕಾರ, ಕಾರ್ಪೊರೇಟ್ ಗ್ಯಾರಂಟಿಗೆ ಸಂಬಂಧಿಸಿದಂತೆ ಕಂಪನಿಯ ಎಲ್ಲಾ ಸಂಭಾವ್ಯ ಕಟ್ಟುಪಾಡುಗಳು ರದ್ದಾಗಿವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts