

ಮುಂಬೈ: ಪೆನ್ನಿ ಸ್ಟಾಕ್ ಕಂಫರ್ಟ್ ಇಂಟೆಕ್ (Comfort Intech) ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ. ಕಂಫರ್ಟ್ ಇಂಟೆಕ್ ಷೇರುಗಳ ಬೆಲೆ ಕೇವಲ 4 ವರ್ಷಗಳಲ್ಲಿ 23 ಪೈಸೆಯಿಂದ 10 ರೂಪಾಯಿಗೆ ಏರಿದೆ. ಕಂಪನಿಯ ಷೇರುಗಳು ಕಳೆದ 4 ವರ್ಷಗಳಲ್ಲಿ ಹೂಡಿಕೆದಾರರಿಗೆ 4300% ಕ್ಕಿಂತ ಹೆಚ್ಚು ಆದಾಯ ನೀಡಿವೆ. ಈ ಷೇರುಗಳ ಬೆಲೆ ಗುರುವಾರ ಅಂದಾಜು 5% ಏರಿಕೆಯೊಂದಿಗೆ 10.21 ರೂ. ಮುಟ್ಟಿತು.
ಈ ಕಂಪನಿಯ ಷೇರುಗಳ ಬೆಲೆ 3 ಏಪ್ರಿಲ್ 2020 ರಂದು 23 ಪೈಸೆ ಇತ್ತು. ಮಾರ್ಚ್ 14, 2024 ರಂದು 10.21 ರೂ. ಮುಟ್ಟಿತು. ಈ ಮೂಲಕ ಕಳೆದ 4 ವರ್ಷಗಳಲ್ಲಿ ಕಂಪನಿಯ ಷೇರುಗಳು 4340% ಹೆಚ್ಚಾಗಿವೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿ ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯ 44.39 ಲಕ್ಷ ರೂ. ಆಗುತ್ತಿತ್ತು.
ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ 12.28 ರೂ. ಹಾಗೂ ಕನಿಷ್ಠ ಬೆಲೆ ರೂ 2.34 ಆಗಿದೆ. ಕಂಪನಿಯಲ್ಲಿ ಪ್ರವರ್ತಕರ ಪಾಲು ಶೇಕಡಾ 57.46 ಆಗಿದೆ. ಸಾರ್ವಜನಿಕ ಷೇರುಗಳು ಶೇಕಡಾ 42.54 ಇವೆ. ಈ ಷೇರುಗಳ ಬೆಲೆ 1 ತಿಂಗಳಲ್ಲಿ 26.87% ಮತ್ತು 1 ವರ್ಷದಲ್ಲಿ 277.86% ಏರಿಕೆಯಾಗಿದೆ.
ಕಂಫರ್ಟ್ ಇಂಟೆಕ್ ತೆಲಂಗಾಣದಲ್ಲಿ ಮದ್ಯದ ತಯಾರಿಕೆ, ಬಾಟಲಿಂಗ್ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿದೆ. ಕಂಪನಿಯ ವೆಬ್‌ಸೈಟ್ ಪ್ರಕಾರ, ತಿಲಕ್ ನಗರ್ ಇಂಡಸ್ಟ್ರೀಸ್ ಲಿಮಿಟೆಡ್, ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲಯನ್ಸ್ ಗೇಟ್ ಬ್ರೂವರೀಸ್ ಪ್ರೈವೇಟ್ ಲಿಮಿಟೆಡ್‌ನ ಬಾಟ್ಲಿಂಗ್ ಒಪ್ಪಂದಗಳನ್ನು ಕಂಪನಿಯು ಹೊಂದಿದೆ. ಕಂಪನಿಯು ಮದ್ಯದ ಉದ್ಯಮದ ವ್ಯವಹಾರವನ್ನು ಹೊರತುಪಡಿಸಿ, ಸರಕುಗಳ ವ್ಯಾಪಾರವನ್ನು ಸಹ ಮಾಡುತ್ತದೆ. ಅಲ್ಲದೆ, ಕಂಪನಿಯು ಷೇರುಗಳು ಮತ್ತು ಹೂಡಿಕೆಗಳ ವ್ಯಾಪಾರವನ್ನು ಮಾಡುತ್ತದೆ.