More

  ಮಹೇಶ್​ ಬಾಬು ಮುಂದೆಯೇ ವಿಜಯ್​ಗೆ ಅವಮಾನ ಮಾಡಿದ ಸಮಂತಾ? ಅಭಿಮಾನಿಗಳ ಆಕ್ರೋಶ

  ಹೈದರಾಬಾದ್​: ನಟಿ ಸಮಂತಾ ದಕ್ಷಿಣ ಭಾರತ ಸಿನಿರಂಗದ ಮುಂಚೂಣಿ ನಟಿ ಎಂಬುದರಲ್ಲಿ ಸಂಶಯವಿಲ್ಲ. ವಿಜಯ್​, ಸೂರ್ಯ, ಮಹೇಶ್​ ಬಾಬು, ಅಲ್ಲು ಅರ್ಜುನ್​, ಜೂ. ಎನ್​ಟಿಆರ್​ ಹಾಗೂ ರಾಮಚರಣ್​ ಸೇರಿದಂತೆ ಸ್ಟಾರ್​ ನಟರ ಜತೆ ನಟಿಸಿದ್ದಾರೆ. ನಟ ನಾಗಚೈತನ್ಯರನ್ನು ಮದುವೆಯಾಗಿ ಡಿವೋರ್ಸ್​ ಆಗುವ ಮೂಲಕ ವೈಯಕ್ತಿಕ ಜೀವನದಲ್ಲೂ ಸಮಂತಾ ಸುದ್ದಿಯಾದರು.

  ತಾಜಾ ಸಂಗತಿ ಏನೆಂದರೆ, ಸಮಂತಾ ಅವರು ಮಹೇಶ್​ ಬಾಬು ಮುಂದೆಯೇ ಇಳಯದಳಪತಿ ವಿಜಯ್​ಗೆ ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಇದೀಗ ವೈರಲ್​ ಆಗುತ್ತಿದ್ದು, ವಿಜಯ್​ ಅಭಿಮಾನಿಗಳ ಕೆಂಗಣ್ಣಿಗೆ ವಿಡಿಯೋ ಗುರಿಯಾಗಿದೆ.

  ಈ ಹಿಂದೆ ನಟ ಮಹೇಶ್​ ಬಾಬು ಅವರು ನಟಿ ಸಮಂತಾ ನಡೆಸಿಕೊಡುತ್ತಿದ್ದ ಶೋಗೆ ಗೆಸ್ಟ್​ ಆಗಿ ಹೋಗಿದ್ದರು. ಈ ವೇಳೆ ನೀವು ಯಾವ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತೀರಾ ಎಂದು ಮಹೇಶ್​ ಬಾಬು ಅವರನ್ನು ಸಮಂತಾ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಮಂತಾ, ವಿಜಯ್​ ನಟನೆಯ ಕತ್ತಿ ಅಂತಹ ಸಿನಿಮಾಗಳನ್ನು ಇಷ್ಟಪಡುವುದಾಗಿ ಹೇಳಿದ್ದರು.

  ಇದಾದ ಬಳಿಕ ನೀವು ಈ ಸಿನಿಮಾವನ್ನು ರಿಮೇಕ್​ ಮಾಡಿ ನಟಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹೇಶ್ ಬಾಬು, ಇಲ್ಲ ನಾನು ರಿಮೇಕ್​ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದರು. ನಂತರ ನೀವು ವಿಜಯ್ ಅವರ ಚಿತ್ರಗಳ ರೀಮೇಕ್‌ಗಳಲ್ಲಿ ನಟಿಸುವುದಿಲ್ಲ. ಆದರೆ, ವಿಜಯ್​ ಅವರು ನಿಮ್ಮ ಸಿನಿಮಾಗಳನ್ನು ರಿಮೇಕ್​ ಮಾಡುತ್ತಾರೆ ಮತ್ತು ನಟಿಸುತ್ತಾರೆ ಎಂದು ಸಮಂತಾ ಹೇಳಿದರು.

  ಇದೀಗ ವಿಡಿಯೋ ವೈರಲ್​ ಆಗುತ್ತಿದ್ದು, ಸಮಂತಾ ಅವರು ನಟ ವಿಜಯ್​ ಅವರನ್ನು ಅವಮಾನಿಸಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಹೇಶ್​ ಬಾಬು ಅಭಿಮಾನಿಗಳು ಇದು ಸತ್ಯ ಎಂದು ಹೇಳುತ್ತಿದ್ದಾರೆ. ಈ ಒಂದು ವಿಡಿಯೋ ಇದೀಗ ಸ್ಟಾರ್​ ನಟರಿಬ್ಬರ ಅಭಿಮಾನಿಗಳ ವಾಗ್ವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

  ನಾಯಿಯ ಮೂಗು ಯಾವಾಗಲೂ ಒದ್ದೆಯಾಗಿರುತ್ತೆ ಏಕೆ? ಇಲ್ಲಿದೆ ನೋಡಿ ವೈಜ್ಞಾನಿಕ ಕಾರಣ…

  ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts