More

    ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

    ಚೆನ್ನೈ: ಹಿರಿಯ ನಟಿ ಲಕ್ಷ್ಮೀ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳಬೇಕಿಲ್ಲ. 70 ಮತ್ತು 80ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದ ಲಕ್ಷ್ಮೀ ಅವರು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಈ ವೃದ್ಯಾಪ್ಯದಲ್ಲೂ ಬಣ್ಣದ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ.

    ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ರಹಸ್ಯಗಳು ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿದೆ. ಲಕ್ಷ್ಮೀ ಅವರು ಮೂರು ಮದುವೆ ಆಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಭಾಸ್ಕರನ್​ ಎಂಬುವರು ಮೊದಲ ಗಂಡ. ಇವರಿಗೆ ಐಶ್ವರ್ಯಾ ಭಾಸ್ಕರನ್​ ಹುಟ್ಟಿದರು. ಈಕೆಯೂ ಕೂಡ ನಟಿ. ಮೊದಲ ಮದುವೆ ಮುರಿದುಬಿದ್ದ ಬಳಿಕ ನಟಿ ಲಕ್ಷ್ಮೀ ಮೋಹನ್​ ಶರ್ಮಾ ಎಂಬುವರನ್ನು ಎರಡನೇ ವಿವಾಹವಾದರು. ಆದರೆ, ಕೆಲವೇ ವರ್ಷಗಳಲ್ಲಿ ಇಬ್ಬರ ಸಂಬಂಧ ಮುರಿದುಬಿದ್ದಿತು. ಇದಾದ ಬಳಿ ನಟ ಹಾಗೂ ನಿರ್ದೇಶಕ ಎಂ. ಶಿವಚಂದ್ರನ್​ ಎಂಬುವರನ್ನು ವಿವಾಹವಾಗಿದ್ದಾರೆ. ಇಬ್ಬರು ಮಗಳೊಬ್ಬಳನ್ನು ದತ್ತು ತೆಗೆದುಕೊಂಡಿದ್ದಾರೆ.

    ತಮ್ಮ ಜೀವನವನ್ನು ನಾಶಮಾಡಿಕೊಳ್ಳಲು ಯಾರು ಬಯಸುವುದಿಲ್ಲ? ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ನೆಗೆಟಿವ್ ಆಗಿಯೇ ಹೆಚ್ಚು ಟ್ರೋಲ್​ ಆಗುತ್ತಿರುತ್ತದೆ. ನಟಿ ಲಕ್ಷ್ಮೀ ಸಹ ತನ್ನ ಮೂರು ಮದುವೆ ವಿಚಾರದಲ್ಲಿ ಟ್ರೋಲ್​ ಆಗಿದ್ದಾರೆ. ಲಕ್ಷ್ಮೀ ಅವರು ಕುಡ ಅನೇಕ ತಪ್ಪುಗಳನ್ನು ಮಾಡಿರಬಹುದು. ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳಲ್ಲಿ ಲಕ್ಷ್ಮೀ ಅವರು ಎಡವಿರಬಹುದು. ಆದರೆ, ಅವರು ಯಾರಿಗೂ ಅನ್ಯಾಯ ಮಾಡಲಿಲ್ಲ.

    ಭಾಸ್ಕರನ್​ ಎಂಬುವರನ್ನು ಮೊದಲು ಮದುವೆಯಾದಾಗ ಲಕ್ಷ್ಮೀ ಅವರಿಗೆ ಕೇವಲ 17 ವರ್ಷ. 19ನೇ ವಯಸ್ಸಿನಲ್ಲಿ ಮಗಳು ಐಶ್ವರ್ಯಾ ಜನಿಸಿದಳು. ಆ ಸಮಯದಲ್ಲಿ ಲಕ್ಷ್ಮೀ ಅವರು ಸಿನಿಮಾದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಮದುವೆಯ ನಂತರವೂ ಸಿನಿಮಾದಲ್ಲಿ ನಟಿಸುವುದಾಗಿ ಷರತ್ತು ಹಾಕಿದ್ದರು. ಹಾಗಾಗಿಯೇ ಲಕ್ಷ್ಮೀ ಅವರಿಗೆ ಯಾವುದೇ ಅಡೆತಡೆಯಿಲ್ಲದೆ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಸಿನಿಮಾಗಳಲ್ಲಿ ಬಿಜಿಯಾದ ನಂತರ ಮಗಳನ್ನು ನೋಡಿಕೊಳ್ಳಲು ಅವಕಾಶ ಸಿಗದ ಕಾರಣ ವಿಚ್ಛೇದನದವರೆಗೂ ಹೋಯಿತು.

    ಎರಡನೇ ಬಾರಿ ನಟ ಮೋಹನ್ ಶರ್ಮ ಅವರೊಂದಿಗೆ ಲಕ್ಷ್ಮೀ ಅವರು ಡಿವೋರ್ಸ್​ ಮಾಡಿಕೊಂಡರು. ಇಬ್ಬರು ಚಟ್ಟಕಾರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಒಮ್ಮೆ ಲಕ್ಷ್ಮೀ ಅವರು ಮುಂಬೈ ಹೋಗಿದ್ದಾಗ ಮೋಹನ್​ ಜತೆ ದಿನವಿಡಿ ಶಾಪಿಂಗ್​ ಮಾಡಿ ಲವ್​ ಪ್ರಪೋಸ್​ ಮಾಡಿದ್ದರಂತೆ. ಈ ವಿಚಾರವನ್ನು ಮೋಹನ್​ ಶರ್ಮ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ನನ್ನೊಂದಿಗೆ ನಾಯಿ ರೀತಿ ಇರುತ್ತೇನೆ ಎಂದು ಹೇಳಿ, ರೂಮಿಗೆ ಕರೆದರು. ಇಬ್ಬರು ದೈಹಿಕವಾಗಿ ಬೆರೆತವು. ಆದರೆ, ನಾನು ಆಕೆಯ ಹಣೆಗೆ ಕುಂಕುಮ ಇಟ್ಟು ಒಪ್ಪಿಕೊಂಡಾಗಲೇ ಆಕೆಯೊಂದಿಗೆ ಬೆರೆತೆ. ಬಳಿಕ ಲಕ್ಷ್ಮೀ ಅವರ ವರ್ತನೆ ಇಷ್ಟವಾಗಲಿಲ್ಲ. ಹೀಗಾಗಿ ಅವರಿಂದ ದೂರವಾದೆ ಎಂದು ಹೇಳಿದ್ದರು. ಈ ವಿಚಾರ ಕಾಲಿವುಡ್​ ಗಲ್ಲಿಯಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತು. ಆದರೆ, ಲಕ್ಷ್ಮೀ ಅವರು ಯಾರ ಅಹಂಕಾರಕ್ಕೂ ತಲೆಬಾಗಲಿಲ್ಲ ಎಂದು ಹೇಳಲಾಗುತ್ತಿದೆ. ಗಂಡಿನ ಪ್ರಾಬಲ್ಯದ ಮುಂದೆ ಗಟ್ಟಿಯಾಗಿ ನಿಲ್ಲಲು ಎರಡನೇ ಬಾರಿಗೆ ವಿಚ್ಛೇದನ ಪಡೆದರು ಎಂಬ ಮಾತಿದೆ. ಮೂರನೇ ಬಾರಿ ಶಿವಚಂದ್ರ ಎಂಬುವರನ್ನು ವರಿಸಿದರು. ಸದ್ಯ ದಂಪತಿ ದಾಂಪತ್ಯ ಜೀವನದ ಸವಿ ಅನುಭವಿಸುತ್ತಿದ್ದಾರೆ. ಮೂವರ ಗಂಡಂದಿರ ಪೈಕಿ ಶಿವಚಂದ್ರನ ಜತೆ ಹೆಚ್ಚಾಗಿ ಖುಷಿಯಾಗಿದ್ದೆ ಎಂದು ಲಕ್ಷ್ಮೀ ಅವರು ಅನೇಕ ಬಾರಿ ಹೇಳಿದ್ದಾರೆ.

    ಪ್ರತಿಬಾರಿಯೂ ತನ್ನ ಮೇಲೆ ಪ್ರಾಬಲ್ಯ ಮೆರೆಯುವ ಗಂಡನನ್ನು ಕಂಡು ಲಕ್ಷ್ಮಿ ಅವರು ವಿಚ್ಛೇದನ ಪಡೆದಿರಬಹುದು ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ನನ್ನ ಶಕ್ತಿಯ ಗುಟ್ಟು S*X ಅಂದ್ರಾ ಮಹುವಾ ಮೊಯಿತ್ರಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts