More

  ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

  ಚೆನ್ನೈ: ಹಿರಿಯ ನಟಿ ಲಕ್ಷ್ಮೀ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳಬೇಕಿಲ್ಲ. 70 ಮತ್ತು 80ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದ ಲಕ್ಷ್ಮೀ ಅವರು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಈ ವೃದ್ಯಾಪ್ಯದಲ್ಲೂ ಬಣ್ಣದ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ.

  ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿದೆ. ಐಶ್ವರ್ಯಾ ಭಾಸ್ಕರನ್​, ಲಕ್ಷ್ಮೀ ಅವರ ಮಗಳು. ಮೊದಲ ಗಂಡ ಭಾಸ್ಕರನ್​ ಅವರ ಮಗಳು. ಇದಾದ ಬಳಿಕ ನಟ ಮೋಹನ್​ ಶರ್ಮರನ್ನು ಮದುವೆಯಾದರು. ಇಬ್ಬರು 1975ರಲ್ಲಿ ಮದುವೆಯಾಗಿ 1980ರಲ್ಲಿ ಡಿವೋರ್ಸ್​ ಪಡೆದುಕೊಂಡರು. ಇದಾದ ಬಳಿಕ ಲಕ್ಷ್ಮೀ ಅವರು ಶಿವಚಂದ್ರ ಎಂಬುವರನ್ನು ವರಿಸಿದರು.

  ಇದೀಗ ಮೋಹನ್​ ಶರ್ಮ ಅವರು ಇಂಡಿಯಾ ಗ್ಲಿಟ್ಜ್​ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾಜಿ ಪತ್ನಿ ಲಕ್ಷ್ಮೀ ಕುರಿತು ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 1974ರಲ್ಲಿ ತೆರೆಕಂಡ ಚಟ್ಟಕ್ಕರಿ ಸಿನಿಮಾ ಮೂಲಕ ನಾವಿಬ್ಬರು ಮೊದಲ ಬಾರಿ ಭೇಟಿಯಾದೆವು. ಆ ಸಮಯದಲ್ಲಿ ನನ್ನ ತಂದೆ-ತಾಯಿ ಬಾಂಬೆ (ಈಗ ಮುಂಬೈ)ಯಲ್ಲಿ ವಾಸವಿದ್ದರು. ನಾನು ಶೂಟಿಂಗ್​ಗೆ ಬಂದು ವಾಪಸ್​ ಬಾಂಬೆಗೆ ಹೋಗುತ್ತಿದ್ದೆ.

  ಒಂದು ದಿನ ಬಾಂಬೆಯಲ್ಲಿ ಇರುವಾಗ ಬೆಳಗ್ಗೆ ಫೋನ್​ ಕಾಲ್​ ಒಂದನ್ನು ಸ್ವೀಕರಿಸಿದೆ. ಕರೆ ಮಾಡಿದ್ದು ಬೇರೆ ಯಾರು ಅಲ್ಲ ನಟಿ ಲಕ್ಷ್ಮೀ. ಲಕ್ಷ್​ ಸಾಬೂನು ಜಾಹೀರಾತಿಗಾಗಿ ಬಾಂಬೆಗೆ ಬಂದಿರುವುದಾಗಿ ತಿಳಿಸಿದರು. ಸ್ವಲ್ಪ ಶಾಪಿಂಗ್​ ಮಾಡಬೇಕಿದೆ, ಸಹಾಯ ಮಾಡುತ್ತೀರಾ ಎಂದು ಕೇಳಿದರು. ಸರಿ ಎಂದು ನಾನು ಅವರ ಜತೆಯಲ್ಲಿ ಶಾಪಿಂಗ್​ಗೆ ತೆರಳಿದೆ. ಹಲವು ಕಡೆ ನನ್ನನ್ನು ಕರೆದೊಯ್ದರು. ಒಳ್ಳೊಳ್ಳೆ ಪರ್ಫ್ಯೂಮ್​​ಗಳು ಇರುವ ಜಾಗಕ್ಕೆ ನನ್ನನ್ನು ಕರೆದೊಯ್ದರು. ಈ ವೇಳೆ ಅಂಗಡಿಯಲ್ಲಿ ನಾಯಿಯ ಆಕಾರದಲ್ಲಿದ್ದ ಆಫ್ಟರ್ ಶೇವ್ ಲೋಷನ್ ನೋಡಿದೆ. ಆದರೆ, ದುಬಾರಿಯಾದ್ದರಿಂದ ಅದನ್ನು ಅಲ್ಲಿಯೇ ಇಟ್ಟೆ. ಇಬ್ಬರು ಶಾಪಿಂಗ್​ ಮುಗಿಸಿ, ಊಟ ಮಾಡಿ ಹೋಟೆಲ್​ಗೆ ಹೋದೆವು.

  ಟ್ಯಾಕ್ಸಿಯಲ್ಲಿ ನಾನು ಮುಂದಿನ ಸೀಟನಲ್ಲಿ ಮತ್ತು ಲಕ್ಷ್ಮೀ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಆ ಸಮಯ 9 ಗಂಟೆಯಾಗಿತ್ತು. ಈ ವೇಳೆ ಲಕ್ಷ್ಮೀ ಅವರು ಮಾತನಾಡಿ, ನಾನು ನಿಮಗೆ ಏನೋ ಒಂದನ್ನು ಕೊಡುತ್ತೇನೆ ಎಂದರು. ಅದನ್ನು ನೋಡಿದಾಗ ನಾನು ಮೊದಲೇ ನೋಡಿದ ಆಫ್ಟರ್ ಶೇವ್ ಲೋಷನ್ ಆಗಿತ್ತು. ಅದನ್ನು ನನಗೆ ನೀಡಿ ಐ ಲವ್​ ಯು ಎಂದರು. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ನಿಮ್ಮ ಜೀವನದಲ್ಲಿ ಈ ನಾಯಿಯಂತೆ ಇರುತ್ತೇನೆ ಎಂದರು. ಆ ಕ್ಷಣದಲ್ಲಿ ಏನು ಉತ್ತರಿಸಬೇಕೆಂದು ನನಗೆ ತೋಚಲಿಲ್ಲ.

  ಒಂದು ಹುಡುಗಿ ನನಗೆ ಪ್ರೇಮ ನಿವೇದನೆ ಮಾಡಿದ್ದು ಇದೇ ಮೊದಲು. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಅಂದು ನಾನು ಮಾಡಿದ ಒಂದು ದೊಡ್ಡ ತಪ್ಪು. ಅದು ನನ್ನ ಮೇಲೆ ಪ್ರಭಾವ ಬೀರಿದೆ. ಆ ದಿನ ರಾತ್ರಿ ನಾನು ನಿದ್ರಿಸಲಿಲ್ಲ. ಬೆಳಗ್ಗೆ ನಾನು ಲಕ್ಷ್ಮೀ ಅವರಿಗೆ ಕರೆ ಮಾಡಿದೆ. ಇಬ್ಬರು ಪರಸ್ಪರ ಭೇಟಿಯಾಗೋಣ ಎಂದು ಹೇಳಿದೆ. ನಾನು ರಾತ್ರಿ ಪೂರ್ತಿ ನಿದ್ರೆ ಮಾಡಲಿಲ್ಲ ಎಂದು ಹೇಳಿದೆ. ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ, ನನ್ನ ವೃತ್ತಿ ಜೀವನದ ಮೇಲೆ ನನ್ನ ಗಮನವಿದೆ ಎಂದು ಹೇಳಿದೆ. ಆಗ ಲಕ್ಷ್ಮೀ ಅವರು ನನ್ನನ್ನು ರೂಮಿಗೆ ಕರೆದರು. ಆದರೆ, ಏನಾಗಲಿದೆ ಎಂದು ನನಗೆ ಅರ್ಥವಾಯಿತು. ನಾನು ಸಂಪ್ರದಾಯಸ್ಥ ಕುಟುಂಬದಿಂದ ಬಂದವನು. ಮದುವೆ ಆಗದೆ ನಿನ್ನ ಜೊತೆ ಏನೂ ಮಾಡಲಾರೆ, ಕುಂಕುಮ ಇದ್ದರೆ ಕೊಡು ಅಂದೆ. ಬಳಿಕ ಲಕ್ಷ್ಮೀ ಕುಂಕುಮ ನೀಡಿದರು. ಬಳಿಕ ಹಣೆಗೆ ಇಟ್ಟೆ. ಅದೇ ದಿನ ನನಗೆ ಮೊದಲ ಅನುಭವವಾಯಿತು. ಆ ಮೊದಲ ರಾತ್ರಿ ನಾವು ಗಂಡ ಹೆಂಡತಿಯಾದೆವು. ಚೆನ್ನೈಗೆ ಬಂದಾಗ ವಕೀಲರ ಮೂಲಕ ಮಾಧ್ಯಮದವರಿಗೆ ಮದುವೆಯಾಗಿರುವುದಾಗಿ ತಿಳಿಸಿದರು.

  ಇದಾದ ಬಳಿಕ ನಾವಿಬ್ಬರು ನಮ್ಮ ವೃತ್ತಿ ಜೀವನದಲ್ಲಿ ಬಿಜಿಯಾದೆವು. ಆ ಸಮಯದಲ್ಲಿ ಐಶ್ವರ್ಯಾಗೆ ಒಂದೂವರೆ ವರ್ಷವಾಗಿತ್ತು. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಬಂತು. ಕಾರಣಾಂತರಗಳಿಂದ ನಮ್ಮ ಸಂಬಂಧ ಮುಂದುವರೆಯಲಿಲ್ಲ ಎಂದು ಮೋಹನ್​ ಶರ್ಮಾ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ ಈ ವಿಷಯ ಕಾಲಿವುಡ್​ನಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)

  ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

  ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts