More

    ನಾಯಿಯ ಮೂಗು ಯಾವಾಗಲೂ ಒದ್ದೆಯಾಗಿರುತ್ತೆ ಏಕೆ? ಇಲ್ಲಿದೆ ನೋಡಿ ವೈಜ್ಞಾನಿಕ ಕಾರಣ…

    ಶ್ವಾನ ಮಾನವನ ಆಪ್ತ ಸ್ನೇಹಿತ ಎಂಬುದರಲ್ಲಿ ಎರಡು ಮಾತಿಲ್ಲ. ಉಂಡ ಮನೆಗೆ ಮನುಷ್ಯ ಎರಡು ಬಗೆದ ಎಷ್ಟೋ ಉದಾಹರಣೆಗಳಿವೆ. ಆದರೆ, ನಾಯಿಯ ನಿಯತ್ತು ಪ್ರಶ್ನಿಸುವ ಉದಾಹರಣೆ ನಮ್ಮ ಮುಂದೆ ಇಲ್ಲ. ನಾಯಿಗಳು ನಮಗೆ ಅತ್ಯಂತ ಆತ್ಮೀಯ ಪ್ರಾಣಿಯಾಗಿದ್ದರೂ ಅದರ ಕೆಲವು ವಿಚಿತ್ರ ಅಭ್ಯಾಸಗಳು ಮತ್ತು ದೇಹದ ಕೆಲವು ವಿಶೇಷ ಲಕ್ಷಣಗಳು ನಮ್ಮನ್ನು ಆಶ್ಚರ್ಯಗೊಳಿಸುತ್ತವೆ.

    ನಿಮಗೆ ಗೊತ್ತಿರಬಹುದು ನಾಯಿಯ ಮೂಗು ಯಾವಾಗಲೂ ತೇವವಾಗಿರುತ್ತದೆ. ಅದು ಏಕೆ ಎಂಬುದು ನಿಮಗೆ ತಿಳಿದಿದೆಯೇ? ನಾಯಿಯು ಯಾವುದೇ ವಾಸನೆಯನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

    ವೈಜ್ಞಾನಿಕ ಕಾರಣ ಏನು?
    ವಾಸನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಕಾರಣಕ್ಕಾಗಿಯೇ ನಾಯಿಗಳನ್ನು ಸ್ನಿಫಿಂಗ್ ಅಥವಾ ವಾಸನೆ ಗ್ರಹಿಸುವ ಕೆಲಸಗಳಲ್ಲಿ ಬಳಸಲಾಗುತ್ತದೆ. ಈ ಶಕ್ತಿಗೆ ಮುಖ್ಯ ಕಾರಣ ನಾಯಿಯ ಮೂಗಿನ ತೇವಾಂಶ. ನಾಯಿಗಳು ಸಾಮಾನ್ಯವಾಗಿ ತಮ್ಮ ಉದ್ದನೆಯ ನಾಲಿಗೆಯಿಂದ ಮೂಗುಗಳನ್ನು ಆಗಾಗ ನೆಕ್ಕುತ್ತವೆ. ಸ್ನಿಫಿಂಗ್‌ಗೆ ತೇವಾಂಶವು ಮುಖ್ಯವಾದ ಕಾರಣ, ನಾಯಿಯು ಆಗಾಗ ಮೂಗನ್ನು ನೆಕ್ಕುತ್ತದೆ ಮತ್ತು ತೇವಗೊಳಿಸುತ್ತದೆ. ನಾಯಿ ಎಲ್ಲೆಡೆ ಸ್ನಿಫ್ ಮಾಡುವುದರಿಂದ, ಕಣಗಳು ಅದರ ತೇವಯುಕ್ತ ಮೂಗುಗಳಿಗೆ ಅಂಟಿಕೊಳ್ಳುತ್ತದೆ.

    ನಾಯಿಯು ತನ್ನ ಮೂಗನ್ನು ಆಗಾಗ ನೆಕ್ಕಿದಾಗ, ಮೂಗಿಗೆ ಅಂಟಿಕೊಂಡಿರುವ ಕಣಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ನಾಯಿಯು ಒದ್ದೆಯಾದ ಹುಲ್ಲು ಮತ್ತು ಸಸ್ಯಗಳಿಗೆ ಮೂಗು ಹಾಕಿದಾಗ, ಸಸ್ಯಗಳಲ್ಲಿನ ನೀರಿನಿಂದ ನಾಯಿಯ ಮೂಗು ಒದ್ದೆಯಾಗಿದೆ ಎಂದು ವಿವಿಧ ಅಭಿಪ್ರಾಯಗಳಿವೆ. ಆದರೆ, ನಾಯಿಯ ಮೂಗಿನ ತೇವಕ್ಕೆ ಬೇರೆಯದ್ದೇ ವೈಜ್ಞಾನಿಕ ಕಾರಣವಿದೆ. ನಾಯಿಯ ಮೂಗಿನ ಒಳಗಿರುವ ವಿಶೇಷ ಗ್ರಂಥಿಯು ಅದರ ತೇವಕ್ಕೆ ಬಹುಮುಖ್ಯ ಕಾರಣವಾಗಿದೆ. ಇದನ್ನು ಕೆಮೊರೆಸೆಪ್ಟರ್ಸ್​ ಎಂದು ಕರೆಯಲಾಗುತ್ತದೆ. ಈ ಗ್ರಂಥಿ ಮೂಗಿನ ಕುಳಿಯನ್ನು ಯಾವಾಗಲೂ ತೇವದಿಂದ ಇರಿಸುತ್ತದೆ.

    ಈ ಗ್ರಂಥಿಯು ನಾಯಿಯ ಮೆದುಳಿಗೆ ನೇರವಾಗಿ ಸಂಪರ್ಕ ಹೊಂದಿದ್ದು, ಅದಕ್ಕಾಗಿಯೇ ನಾಯಿಗಳು ಯಾವುದೇ ವಾಸನೆಯನ್ನು ಸುಲಭವಾಗಿ ಗ್ರಹಿಸುತ್ತವೆ ಮತ್ತು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತವೆ. (ಏಜೆನ್ಸೀಸ್​)

    ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

    ಕರ್ನಾಟಕದಲ್ಲಿ ಮಲಯಾಳಂ ಚಿತ್ರದ ಅಬ್ಬರ! ಕನ್ನಡ ಚಿತ್ರಗಳನ್ನು ನೋಡೋರೇ ಇಲ್ವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts