More

    ಆಸ್ಕರ್ 2024 ರಲ್ಲಿ ನಾಯಿ: ತಕ್ಷಣವೇ ಆಸ್ಕರ್ ನೀಡಿ ಎಂದ ನೆಟ್ಟಿಗರು!

    ವಾಷಿಂಗ್ಟನ್​: 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆಯಿತು. ಆದರೆ ಈ ಸಮಾರಂಭದಲ್ಲಿ ಭಾಗವಹಿಸಿದ್ದ ನಾಯಿ(ಮೆಸ್ಸಿ ದಿ ಡಾಗ್) ಎಲ್ಲರ ಗಮನ ಸೆಳೆದಿತ್ತು. ಕಾರ್ಯಕ್ರಮ ಬೆಳಗ್ಗೆ ಶುರುವಾದಾಗಿನಿಂದ ಮುಕ್ತಾಯವಾಗುವವರೆಗೂ ತದೇಕ ಚಿತ್ತದಿಂದ ವೀಕ್ಷಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲೂ ಈ ಬಗ್ಗೆ ಪ್ರಸ್ತಾಪವಾಗುತ್ತಿದೆ.

    ಇದನ್ನೂ ಓದಿ: ಆಸ್ಕರ್​ ವೇದಿಕೆಯಲ್ಲಿ ನಗೆಪಾಟಲಿಗೀಡಾದ ಟ್ರಂಪ್​! ಕಾರಣ ಇದೇ ನೋಡಿ?

    ಆಸ್ಕರ್ ಪ್ರಶಸ್ತಿಗಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ ಚಿತ್ರಗಳಲ್ಲಿ ‘ಅನಾಟಮಿ ಆಫ್ ಎ ಫಾಲ್’ ಕೂಡ ಒಂದು. ಇದು ಅತ್ಯುತ್ತಮ ಮೂಲ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಸಿನಿಮಾದಲ್ಲಿ ನಟಿಸಿರುವ ಮೆಸ್ಸಿ (ನಾಯಿ) ಕೂಡ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದಿತ್ತು. ಇಷ್ಟೇ ಅಲ್ಲ, ಪ್ರಶಸ್ತಿ ವಿಜೇತರು ಪ್ರಶಸ್ತಿ ಸ್ವೀಕರಿಸುವಾಗ ಅದು ಶ್ಲಾಘಿಸಿತು. ಇದು ಈ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದು, ಅತಿಥಿಗಳು ಮತ್ತು ಪ್ರಶಸ್ತಿ ಪುರಸ್ಕೃತರು ಅದರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.

    ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದಕ್ಕೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ಇದಕ್ಕೆ ಈಗಲೇ ಆಸ್ಕರ್ ಕೊಡಿ’ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ‘ಮೆಸ್ಸಿ ನಾಯಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲು ಸಿದ್ಧ’ ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ವರ್ಷದ ಚಪ್ಪಾಳೆ ಅತ್ಯುತ್ತಮ ಕ್ಷಣ’ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಂಸಾರದಲ್ಲಿ ಗುದ್ದಾಡಿ ದೂರಾದ ಪತಿ- ಪತ್ನಿ, ಚುನಾವಣಾ ಅಖಾಡದಲ್ಲಿ ಜಂಗೀ ಕುಸ್ತಿಗೆ ರೆಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts