More

    ಕರ್ನಾಟಕದಲ್ಲಿ ಮಲಯಾಳಂ ಚಿತ್ರದ ಅಬ್ಬರ! ಕನ್ನಡ ಚಿತ್ರಗಳನ್ನು ನೋಡೋರೇ ಇಲ್ವೇ?

    ಬೆಂಗಳೂರು: ಕಳೆದ ತಿಂಗಳು 22ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಮಲಯಾಳಂ ಚಿತ್ರ ಮಂಜುಮ್ಮೆಲ್ ಬಾಯ್ಸ್ ಇದೀಗ ಬಾಕ್ಸ್ ಆಫೀಸ್​ ಧೂಳಿಪಟ ಮಾಡಿದ್ದು, ಹೊಸ ದಾಖಲೆ ನಿರ್ಮಿಸುತ್ತಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರ, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಗಳಿಸಿದೆ.

    ಇದನ್ನೂ ಓದಿ: ರಾಣೆಬೆನ್ನೂರ ನಗರಸಭೆಗೆ ನಾಮನಿರ್ದೇಶಿತ ಸದಸ್ಯರ ನೇಮಕ

    ಚಿದಂಬರಂ ನಿರ್ದೇಶನದ ಮಂಜುಮ್ಮೆಲ್ ಬಾಯ್ಸ್ ಇತ್ತೀಚಿನ ಯಶಸ್ವಿ ಮಲಯಾಳಂ ಚಲನಚಿತ್ರಗಳಲ್ಲಿ ಒಂದಾಗಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿಂದಿನ ದಾಖಲೆಗಳನ್ನು ಬ್ರೇಕ್ ಮಾಡುವ ಮೂಲಕ ಹೊಸ ದಾಖಲೆ ಬರೆಯುತ್ತಿರುವ ಈ ಚಿತ್ರವು ಮಾಲಿವುಡ್‌ನ ‘ಇಂಡಸ್ಟ್ರಿ ಹಿಟ್’ ಆಗಿ ಹೊರಹೊಮ್ಮಿದೆ.

    ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್‌ನಲ್ಲಿ 1 ಮಿಲಿಯನ್ ಡಾಲರ್​ ಗಳಿಸಿದ ಮೊದಲ ಮತ್ತು ಏಕೈಕ ಮಲಯಾಳಂ ಚಿತ್ರ ಇದಾಗಿದ್ದು, ಕೇವಲ ಕರ್ನಾಟಕದಲ್ಲೇ 10 ಕೋಟಿ ರೂ. ಗಳಿಕೆ ಕಂಡಿದೆ. ಇದರೊಟ್ಟಿಗೆ ತಮಿಳುನಾಡಿನಲ್ಲಿ ಕೂಡ ಮಿಂಚಿನ ಓಟದಲ್ಲಿದ್ದು, 50 ಕೋಟಿ ರೂ.ಗಳನ್ನು ಗಳಿಸುವತ್ತ ಸಾಗುತ್ತಿದೆ. ವರದಿಗಳ ಪ್ರಕಾರ ಜಾಗತಿಕವಾಗಿ ಈ ಸಿನಿಮಾ ಶೀಘ್ರವೇ 200 ಕೋಟಿ ರೂ. ತಲುಪಲಿದೆ.

    ಇದನ್ನೂ ಓದಿ: ಸ್ವಾಮಿ ವಿವೇಕಾನಂದರು ಸಕಾರಾತ್ಮಕತೆಗಳ ಗಣಿ ವಿವೇಕವಾಣಿ ಸರಣಿ ಉಪನ್ಯಾಸದಲ್ಲಿ ಪ್ರೊ.ನಂದನ್ ಪ್ರಭು ಅಭಿಮತ

    ಕರ್ನಾಟಕದಲ್ಲಿ ಮಲಯಾಳಂ ಚಿತ್ರಕ್ಕೆ ಸಿಕ್ಕ ಮನ್ನಣೆ, ಜನಪ್ರಿಯತೆ ಕನ್ನಡ ಸಿನಿಮಾಗಳಿಗೆ ಕಿಂಚಿತ್ತು ಸಿಗುತ್ತಿಲ್ಲ, ಸಿಕ್ಕಿಲ್ಲ ಎಂಬುದು ಕೇವಲ ಚಿತ್ರ ತಯಾರಕರು, ಕಲಾವಿದರದ್ದು ಮಾತ್ರವಲ್ಲ! ಸಿನಿಪ್ರೇಕ್ಷಕರದ್ದು ಕೂಡ. ಪರಭಾಷೆಯ ಚಿತ್ರಗಳನ್ನು ಸ್ವಾಗತಿಸುತ್ತಿರುವ ಪ್ರೇಕ್ಷಕರು ಕನ್ನಡ ಚಿತ್ರಗಳಿಗೇಕೆ ಒತ್ತು ನೀಡುತ್ತಿಲ್ಲ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಇದಕ್ಕೆ ಇತ್ತೀಚೆಗೆ ಬಿಡುಗಡೆಗೊಂಡ ಒಳ್ಳೆಯ ಕಥಾಹಂದರ ಒಳಗೊಂಡ ಸಿನಿಮಾಗಳೇ ಸಾಕ್ಷಿ.

    ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts