More

    57 ಚುನಾವಣಾಧಿಕಾರಿಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಣೆ

    ಸಕಲೇಶಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲೇಶಪುರ ಉಪವಿಭಾಗದ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ.

    ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ತಾಲೂಕು ಹಾಗೂ ಕಟ್ಟಾಯ ಹೋಬಳಿ ವ್ಯಾಪ್ತಿಯಲ್ಲಿ 9 ಮಾದರಿ, ಐದು ಪಿಂಕ್, ಒಂದು ಟ್ರೈಬಲ್ ಹಾಗು 62 ಕಠಿಣ ಸೇರಿದಂತೆ ಒಟ್ಟು 282 ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗೆ ತೆರಳಲು ವಿವಿಧ ತಾಲೂಕಿನಿಂದ ಪಟ್ಟಣಕ್ಕೆ ಆಗಮಿಸಿದ್ದ ಅಧಿಕಾರಿಗಳಿಗೆ ತರಬೇತಿ ನೀಡಿದ ನಂತರ ಗುರುವಾರ ಮುಂಜಾನೆಯಿಂದ ಪಟ್ಟಣದ ಸಂತ ಜೋಸೆಫ್ ಶಾಲೆಯ ಆವರಣದಲ್ಲಿ ಬೂತ್‌ಗಳನ್ನು ಹಂಚಿ ಚಲಾಯಿತು. 45 ಸಾರಿಗೆ ಬಸ್ ಸೇರಿದಂತೆ ಖಾಸಗಿ ವಾಹನಗಳ ಮೂಲಕ ಮತಯಂತ್ರಗಳನ್ನು ಸಾಗಿಸಲಾಯಿತು.

    ಪ್ರತಿ ಮತಗಟ್ಟೆಯಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳು ಕೆಲಸ ನಿರ್ವಹಿಸಲಿದ್ದಾರೆ. ಹೆಚ್ಚುವರಿಯಾಗಿ 57 ಚುನಾವಣಾಧಿಕಾರಿ ಹಾಗೂ 57 ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಮತಗಟ್ಟೆ ವೀಕ್ಷಕರಾಗಿ 21 ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ.ಎಂ.ಕೆ. ಶೃತಿ ಮಾಹಿತಿ ನೀಡಿದರು.

    ಭದ್ರತೆ: ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಇಲಾಖೆ ವ್ಯಾಪಕ ಕ್ರಮ ಕೈಗೊಂಡಿದೆ. ಒಂದು ಕೆಎಸ್‌ಆರ್‌ಪಿ ತುಕಡಿ, 9 ಸೆಂಟ್ರಲ್ ಪ್ಯಾರಾಮಿಲಿಟರಿ ತುಕಡಿ, 9 ಮೀಸಲು ತುಕಡಿ, ಹಾಗೂ ಪೋಲಿಸ್ ಅಧಿಕಾರಿಗಳನ್ನೊಳಗೊಂಡ 14 ಸೆಕ್ಟರ್ ಮೊಬೈಲ್ ವಾಹನಗಳು ಪ್ರತಿ 20 ಮತಗಟ್ಟೆಗೆ ಭೇಟಿ ನೀಡಲಿವೆ. ನಕ್ಸಲ್‌ಪೀಡಿತ ಹಾಗೂ ಕಠಿಣ ಮತಗಟ್ಟೆಗಳಲ್ಲಿ ನಾಲ್ವರು ಸೆಂಟ್ರಲ್ ಮಿಲಿಟರಿ ಫೋರ್ಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದರೆ, ಸಾಮಾನ್ಯ ಮತಗಟ್ಟೆಗಳಲ್ಲಿ ಒಬ್ಬ ಪೋಲಿಸ್ ಅಥವಾ ಹೋಂಗಾರ್ಡ್ ಸಿಬ್ಬಂದಿ ಇರಲಿದ್ದು, ಮೀಸಲು ತುಕಡಿ ಹೊರತುಪಡಿಸಿ ಸುಮಾರು 600ಕ್ಕೂ ಅಧಿಕ ಭದ್ರತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆಂದು ಡಿವೈಎಸ್‌ಪಿ ಪ್ರಮೋದ್ ಕುಮಾರ್ ಜೈನ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts