More

  ನಾಯಿ ಮದುವೆಗೆ 2 ಕೋಟಿ ರೂ. ಖರ್ಚು; ಪ್ರದೇಶದಾದ್ಯಂತದ ಗಣ್ಯರಿಗೆ ಆಹ್ವಾನ

  ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮನುಷ್ಯರು ಶ್ವಾನಗಳ ಮೇಲೆ ಅತಿಯಾಗಿ ಪ್ರೀತಿ ಇಟ್ಟಿರುತ್ತಾರೆ. ಕುಟುಂಬದಲ್ಲಿ ಒಬ್ಬರು ಎಂದು ಭಾವಿಸಿ ಶ್ವಾನಗಳನ್ನು ನೋಡಿಕೊಳ್ಳುವವರಿದ್ದಾರೆ. ಇಲ್ಲೊಬ್ಬರು ಶ್ವಾನ ಪ್ರೀಯರು ನಾಯಿಗೆ ಮದುವೆ ಮಾಡಲು ಕೋಟಿ..ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

  ಜುನಾಗಢದ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಈ ಮುಹಮ್ಮದ್ ಮಹಾಬತ್ ಖಾನ್ III ತನ್ನ ಆಡಳಿತದ ಸಮಯದಲ್ಲಿ, 1947ರ ಕಾಲ ಘಟ್ಟದಲ್ಲಿ 800 ನಾಯಿಗಳನ್ನು ಸಾಕಿದ್ದ. ಪ್ರತಿಯೊಂದು ಶ್ವಾನಕ್ಕೂ ವೈಯಕ್ತಿಕ ವಸತಿ, ಆರೈಕೆದಾರರು ಮತ್ತು ಮಸಾಜ್‌ ಹೀಗೆ ಸಾಕಷ್ಟು ಐಷಾರಾಮಿ ಸೌಕರ್ಯಗಳನ್ನು ನೀಡಿದ್ದ. ಸರಿಸುಮಾರು 800 ನಾಯಿಗಳನ್ನು ಸಾಕಿದ್ದರೂ ಕೂಡ ಒಂದು ನಾಯಿಯನ್ನು ಮಾತ್ರ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು.

  ಮುದ್ದಿನ ನಾಯಿಯ ಹೆಸರು ರೋಶನಾರಾ. ಈ ಶ್ವಾನದ ವಿವಾಹಕ್ಕಾಗಿ ಸುಮಾರು 2 ಕೋಟಿ ರೂ ಖರ್ಚು ಮಾಡಿ, ಪ್ರದೇಶದಾದ್ಯಂತದ ಗಣ್ಯರನ್ನು ಆಹ್ವಾಸಲಾಗಿತ್ತು. 1947ರ ದೇಶ ವಿಭಜನೆಯ ಸಮಯದಲ್ಲಿ, ನವಾಬ್ ತನ್ನ ಹೆಂಡತಿ ಮತ್ತು ಮಗುವನ್ನು ಬಿಟ್ಟು ತನ್ನ ಪಾಲಿಸಬೇಕಾದ ಸಾಕುಪ್ರಾಣಿಗಳೊಂದಿಗೆ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. . ನವಾಬನ ನಾಯಿಗಳ ಮೇಲಿನ ಆಳವಾದ ಪ್ರೀತಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

  ಶ್ವಾನದ ಮೇಲೆ ಯಾಕಿಷ್ಟು ಪ್ರೀತಿ ಹೊಂದಿದ್ದನು? ಅವುಗಳಿಗೆ ಐಷಾರಾಮಿ ಜೀವನ ನೀಡುವುದರ ಜತೆಗೆ ಮದುವೆ ಮಾಡುತ್ತಿದ್ದನಾ? ರಾಜನಿಗೆ ಹಣ ಹೆಚ್ಚಾಗಿತ್ತಾ/ ಪ್ರೀತಿ ಹೆಚ್ಚಿತ್ತಾ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

  ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಕನ್ನಡದ ನಟಿ ಯಮುನಾ; ಈಗ ಎಲ್ಲಿದ್ದಾರೆ? ಹೇಗಿದ್ದಾರೆ ನೋಡಿ..

  ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

  ಸಿಲ್ಕ್ ಸ್ಮಿತಾ ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು; ಮಾಡಿದ ಆ ಒಂದು ತಪ್ಪು ಅವಳ ಪ್ರಾಣಕ್ಕೆ ಕುತ್ತಾಯ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts