ಸಿಲ್ಕ್ ಸ್ಮಿತಾ ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು; ಮಾಡಿದ ಆ ಒಂದು ತಪ್ಪು ಅವಳ ಪ್ರಾಣಕ್ಕೆ ಕುತ್ತಾಯ್ತಾ?

silk smitha
Published on

ಮುಂಬೈ: ನಟಿ ಸಿಲ್ಕ್ ಸ್ಮಿತಾ ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಬೋಲ್ಡ್​​ ಪಾತ್ರಗಳ ಮೂಲಕವಾಗಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಈ ನಟಿ ಜೀವನ ಮಾತ್ರ ಕೊನೆಗೆ ಅಂತ್ಯವಾಗಿದ್ದು ದುರಂತವಾಗಿದೆ. ಈಕೆ ಸಾವು ಇಂದಿಗೂ ನಿಗೂಢವಾಗಿದೆ. ಈ ನಟಿ ಸಾವಿನ ಕುರಿತಾಗಿ ಖ್ಯಾತ ನಟಿ ಜಯಮಾಲಿನಿ ಮಾತನಾಡಿದ್ದಾರೆ.

ಸಿಲ್ಕ್ ಸ್ಮಿತಾ ಜೀವನದಲ್ಲಿ ಸಿನಿಮಾವನ್ನು ಮೀರಿಸುವ ಕಥೆಯಾಗಿದೆ. ಬಡ ಕುಟುಂಬದಲ್ಲಿ ಜನಿಸಿದ ಈಕೆ ಕುಟುಂಸ್ಥರೆಲ್ಲರನ್ನು ಬಿಟ್ಟು ಕನಿಷ್ಠ ಶಿಕ್ಷಣವೂ ಇಲ್ಲದ ಸಿಲ್ಕ್ ಸ್ಮಿತಾ ಮದ್ರಾಸಿನಲ್ಲಿ ಬದುಕಿನ ಹೋರಾಟ ಆರಂಭಿಸಿದಳು. ಮೇಕಪ್ ಕಲಾವಿದರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಳು. ನಂತರ ಹೀಗೆ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡು ಬಹುಬೇಡಿಕೆಯ ನಟಿಯಾದರು. ಅತ್ಯಂತ ಬೇಡಿಕೆಯ ನಟಿಯಾಗಿ ಏರಿದರು. ಸಿಲ್ಕ್ ಸ್ಮಿತಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಳು. 1996ರಲ್ಲಿ ಸಿಲ್ಕ್ ಸ್ಮಿತಾ ಚೆನ್ನೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆ ಸಾವು ಚಿತ್ರರಂಗದಲ್ಲಿ ಒಂದು ದೊಡ್ಡ ಆಘಾತವನ್ನುಂಟು ಮಾಡಿತ್ತು.

ಸಿಲ್ಕ್ ಸ್ಮಿತಾ ಅವರ ಅಂತಿಮ ಸಂಸ್ಕಾರ ಅನಾಥವಾಗಿ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆಯ ಸಿಬ್ಬಂದಿಯೂ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ ಎಂದು ವರದಿಯಾಗಿದೆ. ಸಿಲ್ಕ್ ಸ್ಮಿತಾ ಅವರ ಅಂತ್ಯಕ್ರಿಯೆಯಲ್ಲಿ ಅರ್ಜುನ್ ಸರ್ಜಾ ಮಾತ್ರ ಭಾಗವಹಿಸಿದ್ದರು.

ನಟಿ ಜಯಮಾಲಿನಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡುವಾಗ, ಸಿಲ್ಕ್ ಸ್ಮಿತಾ ನಿಧನರಾಗಿ ಹಲವು ವರ್ಷಗಳೆ ಕಳೆದಿವೆ. ಆದ್ರೆ ಆಕೆ ಮಾಡಿದ ತಪ್ಪೇ ಅವಳ ಸಾವಿಗೆ ಕಾರಣ. ಸಿಲ್ಕ್ ಸ್ಮಿತಾ ಕಡಿಮೆ ಸಮಯದಲ್ಲಿ ಖ್ಯಾತಿ ಮತ್ತು ಹಣವನ್ನು ಗಳಿಸಿದರು. ನಾನು ಆಕೆ ಜತೆ ಸಿನಿಮಾ ಮಾಡಿದ್ದೇನೆ. ಅವಳು ನನ್ನ ಜತೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ.

ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆಯ ತಪ್ಪು ಆಗಿದೆ. ಪ್ರೀತಿಸುವುದು ತಪ್ಪಲ್ಲ ಆದರೆ ಪೋಷಕರಿಂದ ದೂರವಿರುವುದು ತಪ್ಪು. ಆದರೆ ಈಕೆ ಈ ತಪ್ಪನ್ನು ಮಾಡಿದ್ದಳು. ಸಿಲ್ಕ್ ಸ್ಮಿತಾ ತನ್ನ ಗೆಳೆಯನನ್ನು ಕಣ್ಣುಮುಚ್ಚಿ ನಂಬಿದ್ದಳು. ಆದ್ರೆ ಅವನು ಮೋಸ ಮಾಡಿದನು. ಈ ಸಮಯದಲ್ಲಿ ಆಕೆಯ ಜತೆ ಪೋಷಕರು ಇದ್ದಿದ್ದರೆ ಆಕೆಗೆ ಸಾಂತ್ವನ ಹೇಳುತ್ತಿದ್ದರು. ಯಾರು ಇಲ್ಲದಿದ್ದಾಗ ಕೆಲವರು ಮೋಸ ಮಾಡಲು ಸಿದ್ಧರಾಗಿರುತ್ತಾರೆ. ಈಕೆ ಜೀವನ ಕೂಡಾ ಹೀಗೆ ಆಯ್ತು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net