More

  ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

  ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್​ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಸಾವಿಗೀಡಾದರು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು.

  80 ದಶಕದಲ್ಲಿ ಸಿಲ್ಕ್​ ಸ್ಮಿತಾ ಬಹುಬೇಡಿಕೆಯ ನಟಿಯಾಗಿದ್ದರು. ಹೆಚ್ಚಾಗಿ ಅವರು ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಐಟಂ ಸಾಂಗ್​ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು.

  ಇದೀಗ ಸಿಲ್ಕ್​ ಸ್ಮಿತಾ ಅವರ ಕುರಿತು ಬಹುತೇಕರಿಗೆ ತಿಳಿಯದ ಮಾಹಿತಿಯೊಂದು ಹೊರಬಿದ್ದಿದೆ. ಹಿರಿಯ ನಟಿ ಜಯಮಾಲಿನಿ ಅವರು ಸಿಲ್ಕ್​ ಸ್ಮಿತಾ ಕುರಿತಾದ ಹಲವು ವಿಚಾರಗಳನ್ನು ಇತ್ತೀಚೆಗೆ ನಡೆದ ಯೂಟ್ಯೂಬ್​ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.

  Jayamalini

  ಸಿಲ್ಕ್​ ಸ್ಮಿತಾ ಅವರು ಕಡಿಮೆ ಅವಧಿಯಲ್ಲಿ ಹೆಸರು, ಹಣ ಮತ್ತು ಖ್ಯಾತಿಯನ್ನು ಗಳಿಸಿದ್ದರು. ಶೂಟಿಂಗ್​ ಸ್ಥಳದಲ್ಲಿ ಅವರೆಂದು ನಮ್ಮ ಜತೆ ಮಾತನಾಡುತ್ತಿರಲಿಲ್ಲ. ಸಿನಿಮಾವೊಂದರಲ್ಲಿ ನಾನು, ಜ್ಯೋತಿಲಕ್ಷ್ಮೀ ಮತ್ತು ಸಿಲ್ಕ್​ ಸ್ಮಿತಾ ನಾಯಕಿಯರಾಗಿದ್ದೆವು. ಅವರೇ ಮುಖ್ಯ ಪಾತ್ರಧಾರಿಯಾಗಿದ್ದರು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದುಃಖಕರ ಸಂಗತಿ ಎಂದು ಜಯಮಾಲಿನಿ ಹೇಳಿದ್ದಾರೆ.

  ಸಿಲ್ಕ್​ ಸ್ಮಿತಾ ಅವರು ತಮ್ಮ ಜೀವನದಲ್ಲಿ ದೊಡ್ಡ ತಪ್ಪೊಂದನ್ನು ಮಾಡಿದ್ದಾರೆ. ಪ್ರೀತಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಪಾಲಕರನ್ನು ಆಕೆ ತೊರೆಯಬಾರದಿತ್ತು. ತನ್ನನ್ನೇ ಅವಲಂಬಿಸಿದ್ದ ತಾಯಿ ಮತ್ತು ಸಹೋದರನನ್ನು ಬಿಟ್ಟು ಬಂದರು. ಸಂಬಂಧಿಕರ ಜತೆಯಲ್ಲಿ ಇದ್ದಿದ್ದರೂ ತೊಂದರೆ ಇರುತ್ತಿರಲಿಲ್ಲ. ಅರ್ಧ ಹಣವನ್ನು ಮಾತ್ರ ಅವರು ಪಡೆದು ಒಂದಿಷ್ಟನ್ನು ಉಳಿಸುತ್ತಿದ್ದರು. ಆದರೆ, ರಕ್ತ ಸಂಬಂಧವೇ ಅಲ್ಲದವರನ್ನು ನಂಬಿದರು. ಅವರು ಮಾಡಿದ ಮೋಸದ ನೋವಿನಿಂದಲೂ ಸಿಲ್ಕ್​ ಸ್ಮಿತಾ ಸಾವಿಗೆ ಶರಣಾಗಿರಬಹುದು ಎಂದು ನಟಿ ಜಯಮಾಲಿನಿ ಹೇಳಿದ್ದಾರೆ. ಇದೀಗ ಜಯಮಾಲಿನಿ ಅವರ ಸಂದರ್ಶನ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

  ವಿಡಿಯೋ ಕಾಲ್​ನಲ್ಲಿ ಕೊಹ್ಲಿ ಹೇಳಿದ್ದೇನು? RCB ಫ್ಯಾನ್ಸ್​ಗೆ ಇಷ್ಟವಾಗಲಿಲ್ಲ ಸ್ಮೃತಿ ಮಂದಾನ ಉತ್ತರ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts