More

    ಮತದಾನ ಮರೆಯಬೇಡಿ; ನಾನು ವೋಟ್ ಮಾಡುತ್ತೇನೆ ನೀವೂ ಮಾಡಿ ಎಂದ ತಾರೆಯರು

    ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭ ಚುನಾವಣೆ. ಒಂದು ಮತದಿಂದ ಭವಿಷ್ಯವೇ ಬದಲಾಗಬಹುದು. ಹೀಗಾಗಿ ಯಾರೂ ಮತದಾನ ಎಂಬ ಕರ್ತವ್ಯದಿಂದ ದೂರ ಸರಿಯಬಾರದು. ಕನ್ನಡ ಚಿತ್ರರಂಗದ ತಾರೆಯರು ಮತದಾನದ ಪ್ರಾಮುಖ್ಯತೆ ಬಗ್ಗೆ ಸಂದೇಶ ನೀಡಿದ್ದಾರೆ.

    Ashika  ವೋಟ್ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ನಮಗಿದೆ. ಒಳ್ಳೇ ದೇಶಕ್ಕೆ ಒಳ್ಳೇ ನಾಯಕರನ್ನು ಆಯ್ಕೆ ಮಾಡುವುದು ಅಗತ್ಯವಿದೆ. ನಮ್ಮ ಭವಿಷ್ಯಕ್ಕಾಗಿ ಸರಿಯಾಗಿ ನಮ್ಮ ಹಕ್ಕನ್ನು ಬಳಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಒಂದು ಮತದಿಂದ ಏನಾಗತ್ತದೆ ಎಂಬ ಆಲೋಚನೆಯಿಂದ ಹೊರಬಂದು ನಮ್ಮ ಜವಾಬ್ದಾರಿಯನ್ನು ತಪ್ಪದೇ ನಿರ್ವಹಿಸಬೇಕು. ನೀವ್ಯಾರೂ ಮತದಾನ ಮಾಡುವುದನ್ನು ತಪ್ಪಿಸಬೇಡಿ. ನಾನು ಕೂಡ ಮತದಾನ ಮಾಡುತ್ತಿದ್ದೇನೆ.

    | ಆಶಿಕಾ ರಂಗನಾಥ್ ನಟಿ

    Amrutha premಮತದಾನ ಎನ್ನುವುದು ನಮ್ಮೆಲ್ಲರ ಹಕ್ಕು. ಈ ಹಕ್ಕನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಜಾತಿ ಧರ್ಮ ಮತ ಎಲ್ಲವನ್ನೂ ಮರೆತು ದೇಶದ ಒಳಿತಿಗೆ ಹಾಗೂ ಅಭಿವೃದ್ಧಿಗೆ ನೆರವಾಗುವಂಥ ನಾಯಕರನ್ನು ಆಯ್ಕೆ ಮಾಡಬೇಕು. ಇಂದು ನಾನು ಮತದಾನ ಮಾಡಿ ನನ್ನ ಕರ್ತವ್ಯವನ್ನು ನಿಭಾಯಿ ಸುತ್ತೇನೆ. ನೀವೆಲ್ಲರೂ ತಪ್ಪದೇ ಮತದಾನ ಮಾಡಿ.

    | ಅಮೃತಾ ಪ್ರೇಮ್​ ನಟಿ

    Sapthami Gowdaಅತಿ ದೊಡ್ಡ ಪ್ರಜಾಪ್ರಭುತ್ವ ಇರುವುದೇ ನಮ್ಮ ದೇಶದಲ್ಲಿ. ಅತಿ ಹೆಚ್ಚು ಯುವ ಜನತೆ ಇರುವುದು ಕೂಡ ಭಾರತದಲ್ಲಿ. ಮತದಾನ ಎನ್ನುವುದು ನಮಗಿರುವ ಹಕ್ಕು. ನಾವು ಎಂದಿಗೂ ದೇಶದಲ್ಲಿ ಇದು ಸರಿ ಇಲ್ಲ, ಅದು ಸರಿ ಆಗಬೇಕು, ತೆರಿಗೆ ಬಗ್ಗೆ ಹೀಗೆ ಅನೇಕ ಕಂಪ್ಲೇಂಟ್ ಮಾಡುತ್ತಲೇ ಇರುತ್ತೇವೆ. ಈ ರೀತಿಯ ಕಂಪ್ಲೇಂಟ್ ಮಾಡಲು ಹಾಗೂ ಮುಂದೆ ಪ್ರಶ್ನೆ ಮಾಡುವ ಅಧಿಕಾರ ಸಿಗುವುದು ಮತದಾನ ಮಾಡಿದಾಗ ಮಾತ್ರ. ಹೀಗಾಗಿ ಎಲ್ಲರೂ ಮತದಾನ ಮಾಡಿ. ರಜೆ ಇದೆ, ಒಂದು ಪ್ರವಾಸ ಪ್ಲಾನ ಮಾಡಬೇಡಿ. ದೇಶದ ದೊಡ್ಡ ಚುನಾವಣೆ ಇದು. ಎಲ್ಲರೂ ಹೋಗಿ ಖಂಡಿತ ಮತದಾನ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಮಾತ್ರವಲ್ಲದೇ ನಿಜವಾಗಿ ಯೋಚಿಸಿ ಮತದಾನ ಮಾಡಿ.

    | ಸಪ್ತಮಿ ಗೌಡ ನಟಿ

    Ashwiniಮತದಾನ ತುಂಬ ಮುಖ್ಯ. ಅದು ನಮ್ಮೆಲ್ಲರ ಹಕ್ಕು. ಯಾವ ಪಕ್ಷ, ಜನ ನಾಯಕನಿಂದ ಅಭಿವೃದ್ಧಿ ಸಾಧ್ಯ, ಬದಲಾವಣೆ ಸಾಧ್ಯ ಅಂತ ಅನ್ನಿಸುತ್ತದೆಯೋ, ಆ ಅಭ್ಯರ್ಥಿ, ಪಕ್ಷಕ್ಕೆ ಮತ ನೀಡಿ. ನಾನೂ ತಪ್ಪದೇ ಮತದಾನ ಮಾಡುತ್ತೇನೆ. ನೀವೂ ತಪ್ಪದೇ ವೋಟಿಂಗ್ ಮಾಡಿ. ಉತ್ತಮ ಪಕ್ಷ, ಅಭ್ಯರ್ಥಿಯನ್ನು ಬೆಂಬಲಿಸಿ.

    | ಅಶ್ವಿನಿ ಪುನೀತ್ ನಿರ್ಮಾಪಕಿ 

    Naveen shankarಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರಿಗೂ ಸಮಾನವಾದ ಹಕ್ಕಿದೆ. ಆ ಹಕ್ಕುಗಳಲ್ಲಿ ಶ್ರೇಷ್ಠವಾದ ಹಕ್ಕು ಎಂದರೆ ಅದು ಮತದಾನ. ಯದು ವರ್ಷಗಳಿಗೊಮ್ಮೆ ಬರುವ ಮಹಾನ್ ಸಮಯ ಇದು. ನಾವೆಲ್ಲ ಎಷ್ಟೊಂದು ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ, ಬದಲಾವಣೆಗಳ ಬಗ್ಗೆ ಮಾಡುತ್ತೇವೆ. ಮೊತ್ತ ಮೊದಲ ಬದಲಾವಣೆ ನಮ್ಮಲ್ಲಿ ಆಗಬೇಕು. ಈ ಬದಲಾವಣೆ ಮತದಾನದಿಂದಲೇ ಆಗಲಿ. ಯಾರಿಗೆ ಮತದಾನ ಮಾಡಬೇಕು ಎನ್ನುವದಕ್ಕೆ ದೊಡ್ಡ ಜ್ಞಾನದ ಅವಶ್ಯಕತೆ ಇಲ್ಲ. ಸಣ್ಣ ಸಾಮಾನ್ಯ ಜ್ಞಾನ ಇದ್ದರೆ ಸಾಕು. ಇರುವವರಲ್ಲಿ ಯಾರು ಹಿತವಾದರು, ಯಾರು ನಮ್ಮ ಕ್ಷೇತ್ರದ ಒಳಿತಿಗಾಗಿ, ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಾರೆ, ದೇಶದ ಸಮಗ್ರತೆಗೆ ಕೆಲಸ ಮಾಡುತ್ತಾರೆ ಎನ್ನುವದನ್ನು ಅವಲೋಕಿಸಿ ಮತದಾನ ಮಾಡಬೇಕು. ಎಲ್ಲಕ್ಕಿಂತ ಮುನ್ನ ದೇಶದ ಭವಿಷ್ಯಕ್ಕಾಗಿ, ಸದೃಢ ಭಾರತಕ್ಕಾಗಿ ಮತದಾನ ಮಾಡಿ.

    | ನವೀನ್ ಶಂಕರ್ ನಟ

    ಈ ಒಂದು ಕಾರಣಕ್ಕಾಗಿ ನಾವು ಅಂದು ಚಹಲ್​ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ: ಮೈಕ್​ ಹೆಸ್ಸನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts