More

    ಈ ಒಂದು ಕಾರಣಕ್ಕಾಗಿ ನಾವು ಅಂದು ಚಹಲ್​ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ: ಮೈಕ್​ ಹೆಸ್ಸನ್

    ಜೈಪುರ: 17ನೇ ಆವೃತ್ತಿಯ ಐಪಿಎಲ್​ನಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್​ ತಂಡವು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್​ ಟಿಕೆಟ್​ಅನ್ನು ಬಹತೇಕ ಖಚಿತಪಡಿಸಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್​ ಪರ ಬ್ಯಾಟ್ಸ್​ಮನ್​ಗಳು ಮಾತ್ರವಲ್ಲದೇ ಬೌಲರ್​ಗಳು ವಿಶೇಷ ಪ್ರದರ್ಶನ ನೀಡುತ್ತಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

    ಬೌಲರ್​ಗಳ ವಿಷಯಕ್ಕೆ ಬರುವುದಾದರೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಆಟಗಾರ ಯಜುವೇಂದ್ರ ಚಹಲ್​ ಕಳೆದ ಎರಡು ಆವೃತ್ತಿಗಳಿಂದ ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿದ್ದು, ಉತ್ತಮ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಏಪ್ರಿಲ್​ 22ರಂದು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 200 ವಿಕೆಟ್​ಗಳ ಸಾಧನೆ ಮಾಡಿದ ಚಹಲ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಹಲವರು ಆರ್​ಸಿಬಿಯ ನಡೆಗೆ ಕಿಡಿಕಾರಿದ್ದಾರೆ.

    2022ರಲ್ಲಿ ನಡೆದ ಐಪಿಎಲ್​ ಮಿನಿ ಹರಾಜು ಸಮಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಚಹಲ್​ರನ್ನು ರಿಟೇನ್​ ಮಾಡುದ ಕಾರಣ ಅವರು ರಾಜಸ್ಥಾನ ರಾಯಲ್​ಗೆ ಮಾರಾಟವಾಗಿದ್ದರು. ಈ ವಿಚಾರ ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು ಮತ್ತು ಇದಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಸಹ ಉತ್ತರ ನೀಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಇದಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ತಂಡದ ಮಾಜಿ ಮೆಂಟರ್​ ಮೈಕ್​ ಹೆಸ್ಸನ್​ ಇದಕ್ಕೆಲ್ಲಾ ಉತ್ತರ ನೀಡಿದ್ದು, ಎರಡು ವರ್ಷಗಳ ಹಿಂದಿನ ವಿವಾದಕ್ಕೆ ತೆರೆ ಎಳೆದಿದ್ದಾರೆ.

    ಇದನ್ನೂ ಓದಿ: ಈತ ಯಾವುದಕ್ಕೂ ಪ್ರಯೋಜನವಿಲ್ಲದವ; ಸ್ಟಾರ್​ ಆಟಗಾರನ ಬಗ್ಗೆ ಸೆಹ್ವಾಗ್​ ಹೀಗಂದಿದ್ಯಾಕೆ?

    2022ರಲ್ಲಿ ಚಹಲ್​ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೆ ಆರ್​ಸಿಬಿ ಮ್ಯಾನೇಜ್​ಮೆಂಟ್​ಗೆ ಅದು ಹೆಚ್ಚುವರಿ ಹಣಕಾಸಿನ ಸಮಸ್ಯೆಯಾಗುತ್ತಿತ್ತು. ನಾವು ಹರಾಜಿನಲ್ಲಿ ಚಹಲ್​ ಹಾಗೂ ಹರ್ಷಲ್​ರನ್ನು ತಂಡಕ್ಕೆ ವಾಪಸ್​ ಕರೆತರಬೇಕೆಂದು ಅಂದುಕೊಂಡಿದ್ದೆವು. ಅಂತಿಮವಾಗಿ ನಾವು ಚಹಲ್​ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಇದು ನಮಗೆ ಹೆಚ್ಚುವರಿ ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಅವಕಾಶ ನೀಡಿತ್ತು. ಆದರೆ, ಅಂತಿಮವಾಗಿ ನಾವು ಹರ್ಷಲ್​ರನ್ನು ರಿಟೇನ್​ ಮಾಡಬೇಕಾಯಿತು ಎಂದು ಹೇಳಿದ್ದಾರೆ.

    ಇದಲ್ಲದೆ ಹರಾಜಿನ ವೇಳೆ ಅಚಾತುರ್ಯ ಒಂದು ನಡೆದು ಹೋಯಿತು ಹಸರಂಗಾ ಅವರ ಹೆಸರು ಮೊದಲು ಕಾಣಿಸಿಕೊಂಡ ಪರಿಣಾಮ ನಾವು ಅವರಿಗೆ ಬಿಡ್​ ಸಲ್ಲಿಸಿದ್ದೆವು. ಆದರೆ, ನಂತರ ಚಹಲ್​ ಹೆಸರು ಕಾಣಿಸಿಕೊಂಡ ಪರಿಣಾಮ ನಾವು ಬಿಡ್​ ಸಲ್ಲಿಸಲು ಸಾಧ್ಯವಾಗಲಿಲ್ಲ. ಚಹಲ್​ ನನ್ನ ವೃತ್ತಿಜೀವನದಲ್ಲಿ ನಾ ಕಂಡಂತಹ ಒಬ್ಬ ಅದ್ಭುತ ಸ್ಪಿನ್ನರ್​. ಆದರೆ, ನನಗೆ ಈಗಲೂ ಕಾಡುತ್ತಿರುವ ನೋವೇನೆಂದರೆ ಚಹಲ್​ರನ್ನು ರಿಟೇನ್​ ಮಾಡದಿರುವುದು ಎಂದು ಮೈಕ್​ ಹೆಸ್ಸನ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts