More

    ಶ್ರೀಲಂಕಾದಿಂದ ಭಾರತಕ್ಕೆ ಈಜುವ ವೇಳೆ ಹೃದಯಾಘಾತ; ಬೆಂಗಳೂರು ಮೂಲದ ವ್ಯಕ್ತಿ ನಿಧನ

    ರಾಮೇಶ್ವರಂ: ಶ್ರಿಲಂಕಾದ ತಲೈಮನ್ನಾರ್​ನಿಂದ ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಗೆ ಈಜುವ ವೇಳೆ ಬೆಂಗಳೂರಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಮೃತರನ್ನು ಗೋಪಾಲ್​ ರಾವ್​ (78) ಎಂದು ಗುರುತಿಸಲಾಗಿದ್ದು, ಇವರು ಸೆಪ್ಟಜೆನೆರಿಯನ್ ಈಜುಪಟು ಎಂದು ತಿಳಿದು ಬಂದಿದೆ. ರಿಲೇ ಈಜು ಸ್ಪರ್ಧೆಯಲ್ಲಿ ಗೋಪಾಲ್​ ರಾವ್​ ಅವರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

    Heart Attack

    ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ; ನಿರಂಜನ್ ಹಿರೇಮಠ್​ ಬಳಿ ಕ್ಷಮೆಯಾಚಿಸಿದ ಸಿಎಂ

    ರಿಲೇ ಈಜು ಸ್ಪರ್ಧೆಯ ಭಾಗವಾಗಿ ಸ್ಪರ್ಧಾಳುಗಳು ಶ್ರೀಲಂಕಾದಿಂದ ಪಾಕ್​ ಜಲಸಂಧಿಯ ಮೂಲಕ ಭಾರತದತ್ತ ಬರಬೇಕಿತ್ತು. ಏಪ್ರಿಲ್​ 22ರಂದು ರಾಮೇಶ್ವರಂನಿಂದ ತಮಿಳುನಾಡಿಗೆ ದೋಣಿಯ ಮೂಲಕ ಹೊರಟು ಈಜುಗಾರರು ಏಪ್ರಿಲ್​ 23ರಂದು ತಲೈಮನ್ನಾರ್​ನಿಂದ ಧನುಷ್ಕೋಡಿಯತ್ತ ಈಜಲು ಶುರು ಮಾಡಿದರು.

    ತಂಡದಲ್ಲಿ ಮೂರನೇ ಈಜುಗಾರನಾಗಿ ಪಾಲ್ಗೊಂಡಿದ್ದ ಗೊಪಾಲ್​ ರಾವ್​ ಮುಂಜಾನೆ 3 ಗಂಟೆ ಸುಮಾರಿಗೆ ಎದೆನೋವಿನ ಬಗ್ಗೆ ದೂರು ನೀಡಿದರು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತಾದರು ಫಲಕಾರಿಯಾಗದೆ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ. ಗೊಪಾಲ್​ ರಾವ್​ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಕೂಡಲೇ ಸ್ಪರ್ಧೆಯನ್ನು ರದ್ದು ಪಡಿಸಲಾಯಿತು. ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts