More

    ಮುಖೇಶ್ ಅಂಬಾನಿ ದೊಡ್ಡ ಪಾಲುದಾರಿಕೆ: ಚಾಕೊಲೇಟ್ ಷೇರು 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್

    ಮುಂಬೈ: ವಾರದ ಮೊದಲ ವಹಿವಾಟು ದಿನವಾದ ಸೋಮವಾರ ಷೇರುಪೇಟೆಯಲ್ಲಿ ಸಾಕಷ್ಟು ನಷ್ಟವಾಗಿದೆ. ಬಿಎಸ್​ಇ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಜರ್ಜರಿತವಾಗಿವೆ.

    ಈ ಅಹಿತಕರ ವಾತಾವರಣದ ನಡುವೆಯೂ ಹೂಡಿಕೆದಾರರು ಕೆಲವು ಕಂಪನಿಗಳ ಷೇರುಗಳನ್ನು ಮುಗಿಬಿದ್ದು ಖರೀದಿಸಿದರು. ಇಂತಹ ಒಂದು ಷೇರು ಲೋಟಸ್ ಚಾಕೊಲೇಟ್ ಆಗಿದೆ. ಮುಖೇಶ್ ಅಂಬಾನಿ ಅವರ ಕಂಪನಿ ಲೋಟಸ್ ಚಾಕೊಲೇಟ್‌ನ ಷೇರುಗಳ ಬೆಲೆ ವಹಿವಾಟಿನ ಸಮಯದಲ್ಲಿ 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು.

    2022 ರಲ್ಲಿ ಮುಖೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ಕಂಪನಿಯು ಲೋಟಸ್ ಚಾಕೊಲೇಟ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಇದಾದ ಕೆಲವು ತಿಂಗಳುಗಳಲ್ಲಿ ಈ ಪ್ರಕ್ರಿಯೆಯು ಪೂರ್ಣಗೊಂಡಿತು.

    ಸೋಮವಾರ ಲೋಟಸ್ ಚಾಕೊಲೇಟ್ ಷೇರಿನ ಬೆಲೆ ಶೇ. 20ರಷ್ಟು ಜಿಗಿದು 424.40 ರೂ. ತಲುಪಿತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ಆಗಿದೆ. ಆದರೆ, ವಹಿವಾಟಿನ ಅಂತ್ಯಕ್ಕೆ ಷೇರಿನ ಬೆಲೆ 403.25 ರೂ. ತಲುಪಿತು. ಹಿಂದಿನ ಮುಕ್ತಾಯದ ಬೆಲೆಯಾದ ರೂ 353.70 ಕ್ಕೆ ಹೋಲಿಸಿದರೆ ಸೋಮವಾರ ಷೇರುಗಳ ಬೆಲೆ 14.01% ರಷ್ಟು ಏರಿಕೆ ಕಂಡಿತು. ಒಂದು ವರ್ಷದಲ್ಲಿ ಈ ಸ್ಟಾಕ್ 115ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಇದರ ಬೆಲೆ 187 ರೂ.ನಿಂದ ಈಗಿನ ಬೆಲೆಗೆ ಏರಿಕೆಯಾಗಿದೆ.

    ಡಿಸೆಂಬರ್ 2023 ರವರೆಗೆ ಲೋಟಸ್ ಚಾಕೊಲೇಟ್‌ನಲ್ಲಿ ಪ್ರವರ್ತಕರು ಶೇಕಡಾ 72.07 ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ಷೇರುದಾರರು ಶೇಕಡಾ 27.93 ಪಾಲನ್ನು ಹೊಂದಿದ್ದಾರೆ. ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಈ ಕಂಪನಿಯಲ್ಲಿ 51 ಪ್ರತಿಶತ ಪಾಲನ್ನು ಹೊಂದಿದೆ. ರಿಲಯನ್ಸ್ ಕನ್ಸ್ಯೂಮರ್ ಈ ಕಂಪನಿಯಲ್ಲಿ 65,49,065 ಷೇರುಗಳನ್ನು ಹೊಂದಿದೆ. ರಿಲಯನ್ಸ್ ಕನ್ಸೂಮರ್ಸ್ ಪ್ರಾಡಕ್ಟ್ಸ್​ ಕಂಪನಿಯು ರಿಲಯನ್ಸ್ ರಿಟೇಲ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

    1 ಲಕ್ಷವಾಯ್ತು 60 ಲಕ್ಷ: 3 ವರ್ಷದಲ್ಲಿ 6000% ಏರಿಕೆ ಕಂಡ ಸ್ಟಾಕ್​ ಬೆಲೆ, ಕಂಪನಿ ಸಂಗ್ರಹಿಸುತ್ತಿದೆ ರೂ. 5 ಸಾವಿರ ಕೋಟಿ

    ಕೇವಲ 15 ನಿಮಿಷಗಳಲ್ಲಿಯೇ ಹೌಸಿಂಗ್​ ಫ್ಲ್ಯಾಟ್​ಗಳ ಮಾರಾಟ: ಷೇರು ಬೆಲೆ ತಕ್ಷಣವೇ ಗಗನಕ್ಕೆ ಜಿಗಿತ

    ವಾಟರ್ ಇನ್ಫ್ರಾ ವಲಯದ ಈ ಕಂಪನಿಯ ಷೇರುಗಳಲ್ಲಿ ಹೂಡಿಕೆ ಲಾಭದಾಯಕ: ಮಾರುಕಟ್ಟೆ ತಜ್ಞ ಬಗಾಡಿಯಾ ಹೀಗೆ ಸಲಹೆ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts