More

    ಕೇವಲ 15 ನಿಮಿಷಗಳಲ್ಲಿಯೇ ಹೌಸಿಂಗ್​ ಫ್ಲ್ಯಾಟ್​ಗಳ ಮಾರಾಟ: ಷೇರು ಬೆಲೆ ತಕ್ಷಣವೇ ಗಗನಕ್ಕೆ ಜಿಗಿತ

    ಮುಂಬೈ: ರಿಯಲ್ ಎಸ್ಟೇಟ್ ಕಂಪನಿ ಆಶಿಯಾನಾ ಹೌಸಿಂಗ್ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ಸೋಮವಾರ ಶೇ. 15ಕ್ಕಿಂತ ಹೆಚ್ಚು ಏರಿಕೆ ಕಂಡು 387.05 ರೂ.ಗೆ ತಲುಪಿದೆ.

    ಸೋಮವಾರ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ. 398.75 ತಲುಪಿತ್ತು.

    ಆಶಿಯಾನಾ ಹೌಸಿಂಗ್ ಸಂಸ್ಥೆಯು ಗುರುಗ್ರಾಮ್‌ನಲ್ಲಿ 224 ಐಷಾರಾಮಿ ಫ್ಲ್ಯಾಟ್‌ಗಳ ವಸತಿ ಯೋಜನೆಯನ್ನು ನಿರ್ಮಾಣ ಮಾಡಿದೆ. ಈ ಯೋಜನೆಯು ಲಾಂಚ್​ ಆದ ಕೇವಲ 15 ನಿಮಿಷಗಳಲ್ಲಿ ಎಲ್ಲ ಫ್ಲ್ಯಾಟ್​ಗಳು ಮಾರಾಟವಾಗಿದ್ದು, ಈ ಮಾರಾಟದ ಒಟ್ಟು ಬೆಲೆ 440 ಕೋಟಿ ರೂ. ಆಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಈ ಯೋಜನೆಯು ಗುರುಗ್ರಾಮ್‌ನ ಸೆಕ್ಟರ್ 93 ರಲ್ಲಿದೆ.

    ತನ್ನ ಪ್ರತಿಷ್ಠಿತ ಯೋಜನೆಯಾದ 3 ನೇ ಹಂತದಲ್ಲಿ ಎಲ್ಲಾ ಫ್ಲ್ಯಾಟ್​ಗಳನ್ನು 15 ನಿಮಿಷಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಆಶಿಯಾನಾ ಹೌಸಿಂಗ್ ಹೇಳಿದೆ. ಆಶಿಯಾನಾ ಹೌಸಿಂಗ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಂಕುರ್ ಗುಪ್ಗುತಾ ಮಾತನಾಡಿ, ‘ಆಶಿಯಾನಾ ಅಮರಾಹ್ ಹಂತ 3 ರ ಬಿಡುಗಡೆಗೆ ದೊರೆತ ಅದ್ಭುತ ಪ್ರತಿಕ್ರಿಯೆಯ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ನಾವು 11 ಗಂಟೆಗೆ ನೋಂದಣಿ ಪ್ರಾರಂಭಿಸಿದೆವು. 11.15 ರ ಹೊತ್ತಿಗೆ ನಾವು 224 ಘಟಕಗಳಿಗೆ 800 ಚೆಕ್‌ಗಳನ್ನು ಸ್ವೀಕರಿಸಿದ್ದೇವೆ. 15 ನಿಮಿಷಗಳಲ್ಲಿ ಈ ಯೋಜನೆಯು 4 ಬಾರಿ ಓವರ್‌ಸಬ್‌ಸ್ಕ್ರೈಬ್ ಆಗಿದೆ ಎಂದಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಆಶಿಯಾನಾ ಹೌಸಿಂಗ್ ಷೇರುಗಳ ಬೆಲೆ 127% ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ ಏಪ್ರಿಲ್ 17, 2023 ರಂದು 170.55 ರೂ. ಇತ್ತು. ಈಗ 386.65 ರೂ. ತಲುಪಿದೆ. ಈ ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ 67% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ 232 ರೂ.ನಿಂದ 386 ರೂ.ಗೆ ಏರಿಕೆಯಾಗಿದೆ. ಕಳೆದ 4 ವರ್ಷಗಳಲ್ಲಿ, ಆಶಿಯಾನಾ ಹೌಸಿಂಗ್‌ನ ಷೇರುಗಳ ಬೆಲೆ ಪ್ರಚಂಡ 721% ರಷ್ಟು ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಕಂಪನಿಯ ಷೇರುಗಳು ಏಪ್ರಿಲ್ 17, 2020 ರಂದು ರೂ 47.10 ರಷ್ಟಿತ್ತು, ಅದು ಈಗ ರೂ 386.65 ತಲುಪಿದೆ.

    ವಾಟರ್ ಇನ್ಫ್ರಾ ವಲಯದ ಈ ಕಂಪನಿಯ ಷೇರುಗಳಲ್ಲಿ ಹೂಡಿಕೆ ಲಾಭದಾಯಕ: ಮಾರುಕಟ್ಟೆ ತಜ್ಞ ಬಗಾಡಿಯಾ ಹೀಗೆ ಸಲಹೆ ನೀಡಿದ್ದೇಕೆ?

    ಅದಾನಿ ಕಂಪನಿ ಸ್ವಾಧೀನಕ್ಕೆ ತಮಿಳುನಾಡಿನ ಸಿಮೆಂಟ್​ ಗ್ರೈಂಡಿಂಗ್​ ಘಟಕ: ಅಂಬುಜಾ ಸಿಮೆಂಟ್ಸ್ ಷೇರು ಬೆಲೆ ಹೆಚ್ಚಾಗಲಿದೆ ಎನ್ನುತ್ತದೆ ಬ್ರೋಕರೇಜ್​

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದರೆ ಯಾವೆಲ್ಲ ಕಂಪನಿಗಳ ಸ್ಟಾಕ್​ಗಳಿಗೆ ದೊರೆಯಲಿದೆ ಲಾಭ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts