More

    ಅದಾನಿ ಕಂಪನಿ ಸ್ವಾಧೀನಕ್ಕೆ ತಮಿಳುನಾಡಿನ ಸಿಮೆಂಟ್​ ಗ್ರೈಂಡಿಂಗ್​ ಘಟಕ: ಅಂಬುಜಾ ಸಿಮೆಂಟ್ಸ್ ಷೇರು ಬೆಲೆ ಹೆಚ್ಚಾಗಲಿದೆ ಎನ್ನುತ್ತದೆ ಬ್ರೋಕರೇಜ್​

    ಮುಂಬೈ: ಅದಾನಿ ಸಮೂಹಕ್ಕೆ ಸೇರಿದ ಅಂಬುಜಾ ಸಿಮೆಂಟ್ಸ್ ಷೇರುಗಳು ಮುಂದಿನ ದಿನಗಳಲ್ಲಿ ಗಮನಸೆಳೆಯಲಿವೆ. ಕಂಪನಿಯ ಷೇರುಗಳ ಬೆಲೆ ಸೋಮವಾರ ಹೆಚ್ಚಿನ ಬದಲಾವಣೆ ಇಲ್ಲದೆ 608 ರೂಪಾಯಿ ತಲುಪಿದೆ.

    ವಾಸ್ತವವಾಗಿ, ಅಂಬುಜಾ ಸಿಮೆಂಟ್ಸ್ ದೊಡ್ಡ ಘೋಷಣೆ ಮಾಡಿದೆ. ತಮಿಳುನಾಡಿನ ಟುಟಿಕೋರಿನ್‌ನಲ್ಲಿರುವ ಕಂಪನಿ ಮೈ ಹೋಮ್ ಗ್ರೂಪ್‌ನ ಸಿಮೆಂಟ್ ‘ಗ್ರೈಂಡಿಂಗ್’ ಘಟಕವನ್ನು ರೂ. 413.75 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದೆ.

    ಮೈ ಹೋಮ್ ಗ್ರೂಪ್‌ನ ಸಿಮೆಂಟ್ ‘ಗ್ರೈಂಡಿಂಗ್’ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅದಾನಿ ಸಮೂಹದ ಭಾಗವಾಗಿರುವ ಅಂಬುಜಾ ಸಿಮೆಂಟ್ಸ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
    ಈ ಘಟಕದ ಸಾಮರ್ಥ್ಯವು 1.5 MTPA (ವಾರ್ಷಿಕವಾಗಿ 1.5 ಮಿಲಿಯನ್​ ಟನ್​) ಆಗಿದೆ. ದಕ್ಷಿಣ ರಾಜ್ಯದ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಈ ಸ್ವಾಧೀನವು ಅಂಬುಜಾ ಸಿಮೆಂಟ್ಸ್​ಗೆ ಸಹಾಯ ಮಾಡುತ್ತದೆ.

    ಅದಾನಿ ಗ್ರೂಪ್‌ನ ಸಿಮೆಂಟ್ ವ್ಯವಹಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಯ್ ಕಪೂರ್, “ಮೂಲಸೌಕರ್ಯ ಮತ್ತು ಭೌಗೋಳಿಕ ಅನುಕೂಲಗಳ ಹೊರತಾಗಿ, ಅಂಬುಜಾ ಸಿಮೆಂಟ್ಸ್ ಅಸ್ತಿತ್ವದಲ್ಲಿರುವ ಡೀಲರ್ ನೆಟ್‌ವರ್ಕ್ ಸಹ ಲಭ್ಯವಿರುತ್ತದೆ. ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಪ್ರಸ್ತುತ ಉದ್ಯೋಗಿಗಳನ್ನು ಉಳಿಸಿಕೊಳ್ಳುತ್ತದೆ ಎಂದಿದ್ದಾರೆ.

    ಅಂಬುಜಾ ಸಿಮೆಂಟ್ಸ್ ಷೇರುಗಳ ಬೆಲೆ ಒಂದು ತಿಂಗಳಲ್ಲಿ 3.99% ಏರಿಕೆಯಾಗಿದೆ. ಆರು ತಿಂಗಳಲ್ಲಿ ಈ ಷೇರು ಬೆಲೆ ಶೇ. 40ರಷ್ಟು ಏರಿಕೆಯಾಗಿದೆ. ಈ ವರ್ಷದಲ್ಲಿ 17% ಮತ್ತು ಕಳೆದ ಒಂದು ವರ್ಷದಲ್ಲಿ 56% ಹೆಚ್ಚಾಗಿದೆ.

    ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 640.95 ಮತ್ತು ಕನಿಷ್ಠ ಬೆಲೆ ರೂ 373.30 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 1,20,915.87 ಕೋಟಿ ರೂಪಾಯಿ ಇದೆ.

    ದೇಶೀಯ ಬ್ರೋಕರೇಜ್ ಸಂಸ್ಥೆಯ ಪ್ರಕಾರ, ಕಂಪನಿಯ ಈ ಷೇರು ಬೆಲೆ ಹೆಚ್ಚಾಗಬಹುದು. ಐಸಿಐಸಿಐ ಸೆಕ್ಯುರಿಟೀಸ್ ಬ್ರೋಕರೇಜ್​ ಸಂಸ್ಥೆಯು ಅಂಬುಜಾ ಸಿಮೆಂಟ್ಸ್ ಅನ್ನು ರೂ 831 ಗುರಿ ಬೆಲೆಯೊಂದಿಗೆ ಖರೀದಿಸಲು ಶಿಫಾರಸು ಮಾಡಿದೆ.

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದರೆ ಯಾವೆಲ್ಲ ಕಂಪನಿಗಳ ಸ್ಟಾಕ್​ಗಳಿಗೆ ದೊರೆಯಲಿದೆ ಲಾಭ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts