More

    ಯುದ್ಧ ಭೀತಿಯಿಂದ ಬಂಗಾರದ ಬೆಲೆ ಹೆಚ್ಚಳ: 10 ಗ್ರಾಂ ಚಿನ್ನದ ಬೆಲೆ ಲಕ್ಷ ರೂಪಾಯಿ ದಾಟಬಹುದು ಎಂದು ತಜ್ಞರು ಹೇಳುವುದೇಕೆ?

    ಮುಂಬೈ: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಸಾರ್ವಕಾಲಿಕ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಹೀಗಾಗಿ, ಭಾರತೀಯ ಬುಲಿಯನ್ ಮಾರುಕಟ್ಟೆ ಅತಿ ಶೀಘ್ರದಲ್ಲಿ 1 ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯಿದೆ. ಮದುವೆ ಸೀಸನ್ ನಂತರ ಮೊದಲ ಬಾರಿಗೆ ಬುಲಿಯನ್ ಮಾರುಕಟ್ಟೆಯಲ್ಲಿ ಮೌನ ಆವರಿಸಿದೆ. ಗಗನಮುಖಿಯಾಗಿರುವ ಚಿನ್ನ, ಬೆಳ್ಳಿ ಬೆಲೆಗಳು ಮಾರುಕಟ್ಟೆಯ ಚೆಲುವನ್ನು ಕಸಿದುಕೊಂಡಿವೆ. ಶುಕ್ರವಾರದಂದು ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 10 ಗ್ರಾಂಗೆ 73,174 ರೂ. ತಲುಪಿತು. ಬೆಳ್ಳಿ ಕೂಡ ಪ್ರತಿ ಕೆಜಿಗೆ 83819 ರೂ.ಗೆ ತಲುಪಿದೆ.

    ಪ್ರಪಂಚದಾದ್ಯಂತ ಪ್ರಸ್ತುತ ಪರಿಸ್ಥಿತಿಗಳಿಂದಾಗಿ, ಶೀಘ್ರದಲ್ಲೇ ಚಿನ್ನದ ಬೆಲೆ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ತಜ್ಞರು ಹೇಳುತ್ತಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಚಿನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಜಾಗತಿಕ ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್ ಈ ವರ್ಷದ ಅಂತ್ಯದ ವೇಳೆಗೆ ಪ್ರತಿ ಔನ್ಸ್ ಚಿನ್ನವು 2,700 ಡಾಲರ್​ ದಾಟಬಹುದು ಎಂದು ಅಂದಾಜಿಸಿದೆ. ಮೊದಲು ಈ ಅಂದಾಜು 2,300 ಡಾಲರ್​ ಆಗಿತ್ತು. ಇತರ ಸಂಸ್ಥೆಗಳು ಕೂಡ ಈ ಬೆಲೆಯನ್ನು 3000 ಡಾಲರ್ ಅಂದಾಜು ಮಾಡುತ್ತಿವೆ.

    ಫೆಬ್ರವರಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

    ಭಾರತದಲ್ಲಿ, ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,424.32 ಡಾಲರ್​ ದಾಖಲೆಯನ್ನು ದಾಟಿದೆ. ಕಳೆದ ವಾರದಲ್ಲಿಯೇ ಇದು ನಾಲ್ಕು ಪ್ರತಿಶತದಷ್ಟು ಜಿಗಿದಿದ್ದು, ಇಲ್ಲಿಯವರೆಗಿನ ಗರಿಷ್ಠ ಮಟ್ಟವನ್ನು ತಲುಪಿದೆ. ಬೆಳ್ಳಿಯ ಬೆಲೆಯು ನಾಲ್ಕು ಪ್ರತಿಶತದಷ್ಟು ಜಿಗಿದಿದ್ದು, ಪ್ರತಿ ಔನ್ಸ್ 29.60 ಡಾಲರ್​ಗೆ ತಲುಪಿದೆ, ಇದು 2021 ರಿಂದ ಅತ್ಯಧಿಕವಾಗಿದೆ.

    ಇದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಾಣುತ್ತಿದೆ ಎನ್ನುತ್ತಾರೆ ತಜ್ಞರು. ದೇಶದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 73,000 ರೂ.ಗೆ ತಲುಪಿದೆ, ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಬೆಳ್ಳಿ ಬೆಲೆಯೂ ಮೊದಲ ಬಾರಿಗೆ ಕೆಜಿಗೆ 83 ಸಾವಿರ ದಾಟಿದೆ.


    ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾದರೆ, ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1 ಲಕ್ಷ ರೂಪಾಯಿ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಬೆಳ್ಳಿಯೂ ಕೆಜಿಗೆ 1 ಲಕ್ಷ ರೂಪಾಯಿ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ.

    ಇಸ್ರೇಲ್ ಮೇಲೆ ಇರಾನ್ ದಾಳಿ: ಅದಾನಿ ಕಂಪನಿ ಷೇರುಗಳ ಬೆಲೆ ಕುಸಿತವೇಕೆ?

    3 ವರ್ಷಗಳಲ್ಲಿ 1 ಲಕ್ಷವಾಯ್ತು 1.68 ಕೋಟಿ ರೂಪಾಯಿ: ವಿದ್ಯುತ್ ಕಂಪನಿಯ ಷೇರು ಬೆಲೆ ಮತ್ತೆ ಈಗ ಹೆಚ್ಚಳವಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts