ಪಾಕ್​ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಇಬ್ಬರು ಮೃತ್ಯು- ಜಪಾನ್ ಪ್ರಜೆಗಳು ಪಾರು

pakisthan
Published on

ಕರಾಚಿ: ಜಪಾನ್ ಪ್ರಜೆಗಳಿದ್ದ ವಾಹನಗಳ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ಸಂಭವಿಸಿದೆ.

ಉಗ್ರರ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಎಲ್ಲಾ ಐವರು ಜಪಾನ್ ನಾಗರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಒಬ್ಬ ಭಯೋತ್ಪಾದಕ ಹತ್ಯೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಭಯೋತ್ಪಾದಕರಿಂದ 6 ಹ್ಯಾಂಡ್ ಗ್ರೆನೇಡ್ ಗಳು, ಒಂದು ಎಸ್‌ಎಂಜಿ ಮತ್ತು 3 ಮ್ಯಾಗಜೀನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ದಾಳಿಕೋರರ ಬ್ಯಾಗ್ ನಲ್ಲಿ ಎರಡು ಬಾಟಲ್ ಪೆಟ್ರೋಲ್ ಸಹ ಇತ್ತು ಎನ್ನಲಾಗಿದೆ.

ಜಪಾನ್ ನಾಗರಿಕರು ಕ್ಲಿಫ್ಟನ್ ನಲ್ಲಿರುವ ತಮ್ಮ ನಿವಾಸದಿಂದ ರಫ್ತು ಸಂಸ್ಕರಣಾ ವಲಯಕ್ಕೆ ಹೈಸ್ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇನ್ನು ದಾಳಿಕೋರ ತನ್ನ ಸ್ಫೋಟಕ ತುಂಬಿದ ಉಡುಪನ್ನು ಕಾರ್ಮಿಕರನ್ನು ಸಾಗಿಸುತ್ತಿದ್ದ ವ್ಯಾನ್ ಬಳಿ ಸ್ಫೋಟಿಸಿದ್ದಾನೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net